ಕೆಲವೊಮ್ಮೆ ಕಣ್ಣಿನ ಆಯಾಸದಿಂದಾಗಿ ಕಣ್ಣು ನೋವು ಆಗುವುದು ಹಾಗೂ ಕಣ್ಣಿನ ಉರಿ ಅಷ್ಟೇ ಅಲ್ದೆ ಕಣ್ಣಿನ ಉಷ್ಣ ಸಮಸ್ಯೆ ಕೂಡ ಬರುವುದುಂಟು, ಹಾಗಾಗಿ ಕಣ್ಣಿನ ಆರೋಗ್ಯವನ್ನು ನಿರ್ಲಕ್ಷಿಸಬಾರದು ಹೆಚ್ಚಿನ ಸಮಯ ಮೊಬೈಲ್ ಫೋನ್ ನೋಡುವುದು ಹಾಗೂ ಟಿವಿ, ಲ್ಯಾಪ್ಟಾಪ್ ಇವುಗಳನ್ನು ನೋಡುವುದರಿಂದ ಬೇಗನೆ ಕಣ್ಣಿನ ತೊಂದರೆ ಉಂಟಾಗುತ್ತದೆ ಇವುಗಳಿಂದ ಸ್ವಲ್ಪ ದೂರವಿರಿ ಅಗತ್ಯವಿದ್ರೆ ಕಣ್ಣಿನ ಕನ್ನಡಕವನ್ನು ಬಳಸುವುದು ಉತ್ತಮ.
ಈ ಲೇಖನದ ಮೂಲಕ ಕಣ್ಣಿನ ಉಷ್ಣಾಂಶವನ್ನು ಹೇಗೆ ನಿಯಂತ್ರಿಸಿಕೊಳ್ಳೋದು ಅನ್ನೋದನ್ನ ತಿಳಿಯೋಣ. ಕಣ್ಣನ್ನು ತಂಪಾಗಿ ಇಡುತ್ತದೆ ಅಲೋವೆರಾ ಹೌದು ಅಲೋವೆರಾ ಎಲೆಯನ್ನು ಸೀಳಿ ಅದನ್ನು ಕಟ್ ಮಾಡಿಕೊಂಡು ಕಣ್ಣುಗಳ ಮೇಲೆ 5 ರಿಂದ 10 ನಿಮಿಷ ಅಲೋವೆರಾದ ತಿರುಳನ್ನು ಇಟ್ಟುಕೊಳ್ಳುವುದರಿಂದ ಕಣ್ಣೆಲ್ಲ ತಂಪಾಗುವುದು ಹಾಗು ಕಣ್ಣಿನ ಉಷ್ಣತೆ ನಿವಾರಣೆಯಾಗುತ್ತದೆ.
ಕಣ್ಣಿನ ಉಷ್ಣಾಂಶ ನಿಯಂತ್ರಣಕ್ಕೆ ಮತ್ತೊಂದು ವಿಧಾನ ಅಂದ್ರೆ ತಣ್ಣನೆ ನೀರಿನಲ್ಲಿ ಶುದ್ಧವಾದ ಹತ್ತಿ ಹುಂಡೆಗಳನ್ನು ಹದ್ದಿ ಅದನ್ನು ಕಣ್ಣು ಮುಚ್ಚಿ ರೆಪ್ಪೆಗಳ ಮೇಲೆ 10 ರಿಂದ 15 ನಿಮಿಷ ಇಟ್ಟುಕೊಂಡರೆ ತುಂಬಾನೇ ಒಳ್ಳೆಯದು.
ಇನ್ನು ಸೌತೆಕಾಯಿ ಕೂಡ ಸಹಕಾರಿ ಹೇಗೆ ಅನ್ನೋದನ್ನ ನೋಡುವುದಾದರೆ ಸೌತೆಕಾಯಿ ತುಂಡನ್ನು ರೌಂಡ್ ಆಗಿ ಕಟ್ ಮಾಡಿ 5 ರಿಂದ 10 ನಿಮಿಷ ಕಣ್ಣಿನ ಮೇಲ್ಬಾಗದ್ಲಲಿ ಇಟ್ಟುಕೊಳ್ಳುವುದರಿಂದ ಕಣ್ಣಿನ ಉಷ್ಣತೆ ನಿವಾರಣೆ ಆಗುವುದು ಅಷ್ಟೇ ಅಲ್ಲದೆ ಕಣ್ಣಿನ ಸುತ್ತಲೂ ಆಗುವ ಡಾರ್ಕ್ ಸರ್ಕಲ್ ನಿವಾರಣೆ ಆಗುವುದು