ಬೆಂಗಳೂರಿನಲ್ಲಿ ಇರುವಂತಹ ಕೆಲಸವನ್ನು ಬಿಟ್ಟು ಹಳ್ಳಿಗೆ ಬಂದು ಕುರಿಸಾಕಣಿಕೆ ಆರಂಭಿಸಿ ಅದರಲ್ಲಿ ಯಶಸ್ಸು ಕಂಡ ಯುವಕನ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಚಿಕ್ಕಬಳ್ಳಾಪುರ ಜಿಲ್ಲೆಯ ಈ ಯುವಕನ ಹೆಸರು ಸಂಪತ್. 9ನೇ ತರಗತಿ ಓದಿರುವ ಇವರು ಊರಿನಲ್ಲಿ ಮೊದಲು ದಿನಗೂಲಿ ಲೆಕ್ಕದಲ್ಲಿ ದಿನಕ್ಕೆ 30 ರೂಪಾಯಿ ಪಡೆಯುತ್ತಿದ್ದರು. ಜೀವನ ನಡೆಸುವುದು ಕಷ್ಟವಾಗಿ ದೊಡ್ಡಬಳ್ಳಾಪುರದ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರೆ ಅಲ್ಲಿ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆವದುಡಿಯುತ್ತಿದ್ದರು. ನಂತರ ಇವರ ಫ್ರೆಂಡು ಒಬ್ಬರು ಸಿಕ್ಕೆ ಬೆಂಗಳೂರು ಕೆಲಸ ಕೊಡುವುದಾಗಿ ಕರೆದುಕೊಂಡು ಹೋಗಿ ದಿನಪೂರ್ತಿ ಹುಡುಕಿದರೆ ಯಾವುದೇ ಕೆಲಸ ಸಿಗಲಿಲ್ಲ. ನಂತರ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಕೆಲಸ ದೊರಕಿತ್ತು ಅದೂ ಒಂದೂವರೆ ಸಾವಿರ ಸಂಬಳಕ್ಕೆ. ಅಲ್ಲಿ ಇಪ್ಪತ್ತು ವರ್ಷ ಕೆಲಸ ಮಾಡಿ ನಂತರ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವ ಬದಲು ಏನಾದರೂ ಸ್ವಂತ ಕೆಲಸ ಮಾಡಬೇಕು ಅಂತ ಅನ್ನಿಸಿ ಬುಕ್ ಬೈಂಡಿಂಗ್ ಮಾಡುವ ಕೆಲಸ ಆರಂಭಿಸಿದರು ಸಂಪತ್. ಕೊನೆಗೆ ಬೆಂಗಳೂರಿನಿಂದ ಮತ್ತೆ ವಾಪಸ್ ಊರಿಗೆ ಬಂದು ಮದುವೆ ಆಗಿ ಜೀವನ ನಡೆಸುವುದು ಕಷ್ಟ ಆದಾಗ ಸಂಪತ್ ಅವರ ತಲೆಯಲ್ಲಿ ಬಂದ ಆಲೋಚನೆ ಕುರಿ ಸಾಕಾಣಿಕೆ. ಮೊದಲು ಮೂರೂವರೆ ನಾಲ್ಕು ಸಾವಿರಕ್ಕೆ ಒಂದೆರಡು ಕುರಿಗಳನ್ನು ತಂದು ಅವುಗಳನ್ನು ಸಾಕಿದರು. ನಂತರದ ದಿನಗಳಲ್ಲಿ ಮತ್ತಷ್ಟು ಕುರಿಗಳನ್ನು ತಂದು ಅವುಗಳಿಗೆ ಶೆಡ್ ಕೂಡಾ ನಿರ್ಮಾಣ ಮಾಡಿ ಸಾಕಷ್ಟು ಕುರಿಗಳನ್ನು ಸಾಕಿದರು.
ಹಳ್ಳಿಗಳಲ್ಲಿ ಇವರು ಪ್ರತೀ ದಿನ ಒಂಭತ್ತು ಗಂಟೆಗಳ ಕಾಲ ಕೆಲಸ ಮಾಡಬೇಕಾಗಿತ್ತು. ಸಂಪತ್ ಅವರ ಪ್ರಕಾರ ನಾವು ಯಾವುದೇ ಕೆಲಸ ಮಾಡಿದರೂ ಸಹ ಅದರಲ್ಲಿ ಶ್ರದ್ಧೆ ಇಟ್ಟು ಕೆಲಸ ಮಾಡಬೇಕು. ಯಾವುದೇ ಕೆಲಸವನ್ನೂ ಕಷ್ಟ ಪಟ್ಟು ಮಾಡುವ ಬದಲು ಇಷ್ಟ ಪಟ್ಟು ಮಾಡಬೇಕು. ಸಂಪತ್ ಮಾಡಿದ್ದು ಕೂಡಾ ಅದೇ ಕೆಲಸ. ತಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಇಷ್ಟ ಪಟ್ಟು ಮಾಡಿದ್ದರು. ಮೊದಲು ಇವರು ಒಂದು ಕುರಿ ಮರಿಯನ್ನು ತಂದು ಅದು ನಂತರ ಬೆಳೆಯುತ್ತಾ ಕುರಿಗಳ ಸಂಖ್ಯೆ ಕೂಡಾ ಹೆಚ್ಚಾಯಿತು. ಸಧ್ಯ 30/ 35 ಕುರಿಗಳು ಇದ್ದು ಕೆಲವೊಂದಿಷ್ಟು ಕುರಿಗಳನ್ನು ಮಾರಾಟ ಕೂಡಾ ಮಾಡಿದ್ದಾರೆ. ಸಂತೆಯಿಂದ ಕುರಿ ಮರಿಗಳನ್ನು ಆರೇಳು ಸಾವಿರಕ್ಕೆ ತಂದು ಆರು ತಿಂಗಳು ಅದನ್ನು ಮೇಯಿಸಿ , ಬೆಳೆಸಿ 14 ಸಾವಿರಕ್ಕೆ ಮಾರಾಟ ಮಾಡಲು ಆರಂಭಿಸಿದರು. ಕುರಿಗಳಿಗೆ ತಿನ್ನಲು ಸಂಜೆ ಸಮಯದಲ್ಲಿ ಹೈಬ್ರೀಡ್ ಜೋಳ, ಚಕ್ಕೆ ಬೂಸಾ ಇವುಗಳನ್ನು ನೀಡಲಾಗುತ್ತದೆ. 15 ದಿನಗಳ ಕಾಲ ಟಾನಿಕ್ ಮತ್ತು ಜಂತಿನ ಔಷಧಿಕೂಡಾ ನೀಡಲಾಗುತ್ತದೆ. ಇನ್ನು ಕುರಿಗಳಿಗೆ ಜ್ವರ ಬಂದರೆ ಸಂಪತ್ ಅವರೇ ಸ್ವತಃ ಇಂಜೆಕ್ಷನ್ ಕೂಡಾ ಕೊಡುತ್ತಾರೆ. ಹಾಗೆ ಸಂಪತ್ ಹೇಳುವ ಹಾಗೇ ಇವರ ಕುಟುಂಬದ ಬೆಂಬಲ ಇಲ್ಲದೆಯೇ ತಾನು ಯಾವುದೇ ಕಾರ್ಯವನ್ನೂ ಮಾಡಲು ಆಗುತ್ತಿರಲಿಲ್ಲ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಇವರು ಈ ಕುರಿತು ಸಾಕಾಣಿಕೆ ಮಾಡುವುದರಿಂದ ಸಾಕಷ್ಟು ಲಾಭ ಗಳಿಸುತ್ತಿದ್ದಾರೆ.