ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಸೊಂಟನೋವು ಬೆನ್ನುನೋವು ಅಂತಹ ಸಾಕಷ್ಟು ನೋವುಗಳನ್ನು ಅನುಭವಿಸುತ್ತಿದ್ದಾರೆ. ಒಂದು ಕಾಲದಲ್ಲಿ 60ವರ್ಷ ದಾಟಿದ ನಂತರ ಇಂತಹ ನೋವುಗಳು ಕಂಡುಬರುತ್ತಿದ್ದವು ಆದರೆ ಇತ್ತೀಚಿನ ದಿನಗಳಲ್ಲಿ 30 ವರ್ಷದ ಒಳಗೆ ಇಂತಹ ನೋವುಗಳು ಕಂಡು ಬರುವುದು ಸಾಮಾನ್ಯವಾಗಿದೆ. ಇಂತಹ ನೋವುಗಳು ಒಂದು ಬಾರಿ ಬಂದರೆ ಸಾಕು ನಂತರ ನಡೆಯಲು ಆಗದಷ್ಟು ನೋವು ನಮ್ಮಲ್ಲಿ ಕಾಡುತ್ತದೆ. ಸಾಕಷ್ಟು ಜನರಿಗೆ ಎಷ್ಟೇ ಔಷಧಿ ಮಾಡಿದರೂ ಸಹ ಅವುಗಳು ಕಡಿಮೆ ಆಗುವುದಿಲ್ಲ ಅವೆಲ್ಲ ತಾತ್ಕಾಲಿಕವಾಗಿ ಗುಣವಾದಂತೆ ಅನಿಸಿದರೂ ಶಾಶ್ವತ ಪರಿಹಾರವಲ್ಲ. ಆದರೆ ಆಯುರ್ವೇದದ ಔಷಧಿಯನ್ನು ಮಾಡಿಕೊಳ್ಳುವುದರಿಂದ ಬೆನ್ನು ನೋವು ಸೊಂಟ ನೋವು ಮುಂತಾದ ಯಾವುದೇ ನೋವು ಇದ್ದರೂ ಸಹ ಅದನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳಬಹುದು. ಈ ಒಂದು ಮನೆ ಮದ್ದನ್ನು ಒಮ್ಮೆ ಮಾಡಿ ಕೊಂಡು ಒಂದು ತಿಂಗಳವರೆಗೂ ಶೇಖರಿಸಿಟ್ಟು ಕೊಳ್ಳಬಹುದು. ಆ ಮನೆ ಮದ್ದು ಯಾವುದು ಅದನ್ನು ಹೇಗೆ ತಯಾರಿಸಿಕೊಳ್ಳುವುದು ಹಾಗೂ ತೆಗೆದುಕೊಳ್ಳುವ ಬಗೆ ಹೇಗೆ ಎನ್ನುವುದನ್ನು ಈ ಲೇಖನದ ಮೂಲಕ ತೆಗೆದುಕೊಳ್ಳಿ.
ಈ ಮನೆಮದ್ದನ್ನು ತಯಾರಿಸಿಕೊಳ್ಳಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಅರ್ಧ ಸ್ಪೂನ್ ಕಾಳುಮೆಣಸು, 2 ಸ್ಪೂನ್ ಮೆಂತೆಕಾಳು ಹಾಗೂ ಒಂದು ಸ್ಪೂನ್ ಜೀರಿಗೆ. ಈ ಮೂರು ಪದಾರ್ಥಗಳಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದಂತಹ ಎಶ್ಟೋ ಅಂಶಗಳು ಇದ್ದು ಆಯುರ್ವೇದದಲ್ಲಿ ಕೂಡ ಇದನ್ನು ಬಳಕೆ ಮಾಡಲಾಗುತ್ತದೆ. ಈ ಎಲ್ಲಾ ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪೌಡರ್ ಮಾಡಿಕೊಳ್ಳಬೇಕು. ಈ ಮೂರು ಪದಾರ್ಥಗಳಲ್ಲಿ ಫೈಬರ್ , ಮ್ಯಾಗ್ನಿಷಿಯಂ ಕ್ಯಾಲ್ಸಿಯಂ ಅಂಶಗಳು ಹೇರಳವಾಗಿರುತ್ತದೆ. ಹಾಗಾಗಿ ಇವು ಮುಖ್ಯವಾಗಿ ಮೊಣಕಾಲು ನೋವು ಸೊಂಟನೋವು ಬೆನ್ನುನೋವು ಇವುಗಳನ್ನು ನಿವಾರಣೆ ಮಾಡುವಲ್ಲಿ ಪರಿಣಾಮಕಾರಿಯಾಗಿರುತ್ತದೆ.
ಇನ್ನು, ನಮ್ಮ ನೋವುಗಳನ್ನು ಪರಿಹರಿಸಿಕೊಳ್ಳಲು ಈ ಪೌಡರ್ ಅನ್ನು ಹೇಗೆ ತೆಗೆದುಕೊಳ್ಳುವುದು ಅಂತ ನೋಡುವುದಾದರೆ. ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧದಿಂದ ಮುಕ್ಕಾಲು ಚಮಚದಷ್ಟು ಮೊದಲೇ ತಯಾರಿಸಿಟ್ಟುಕೊಂಡ ಪೌಡರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ತಿಂಡಿಗೆ ಅರ್ಧಗಂಟೆ ಮೊದಲು ಇದನ್ನು ಕುಡಿಯಬೇಕು. ಹಾಗೆ ಕುಡಿಯಲು ಕಷ್ಟವಾದರೆ ಸ್ವಲ್ಪ ಜೇನುತುಪ್ಪ ಅಥವಾ ಕಲ್ಲು ಸಕ್ಕರೆಯನ್ನು ಬೆರೆಸಿಕೊಂಡು ಕುಡಿಯಬಹುದು. ಹಾಗೆ ಸಂಜೆ ಸಮಯದಲ್ಲಿ ಕೂಡ ಟೀ ಕಾಫಿ ತೆಗೆದುಕೊಳ್ಳುವ ಅರ್ಧಗಂಟೆ ಮೊದಲು ಹಾಗೂ ರಾತ್ರಿ ಊಟಕ್ಕೆ ಅರ್ಧಗಂಟೆ ಮೊದಲು ಇದನ್ನು ತೆಗೆದುಕೊಳ್ಳಬೇಕು. ಈ ರೀತಿಯಾಗಿ ಕೇವಲ 20 ದಿನಗಳ ಕಾಲ ಮಾಡಿದರೆ ಯಾವುದೇ ರೀತಿಯ ನೋವು ಇದ್ದರು ಶಮನವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಶರೀರದಲ್ಲಿ ತುಂಬಾನೇ ಬೆನ್ನುನೋವು ಮೊಣಕಾಲು ನೋವು ಸೊಂಟ ನೋವು ಇದ್ದರು ಕನಿಷ್ಠಪಕ್ಷ ಇದನ್ನು ಎರಡು ತಿಂಗಳುಗಳ ಕಾಲವಾದರೂ ಅನುಸರಿಸಬೇಕು. ಸಾವಿರಾರು ರೂಪಾಯಿ ಆಸ್ಪತ್ರೆಗೆ ಖರ್ಚು ಮಾಡುವ ಬದಲು ಸುಲಭವಾಗಿ ಮನೆಯಲ್ಲಿ ದೊರಕುವಂತಹ ಇಂತಹ ಪದಾರ್ಥಗಳನ್ನು ಬಳಸಿಕೊಂಡು ಯಾವುದೇ ಅಡ್ಡ ಪರಿಣಾಮವಿಲ್ಲದೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.