ಐಷಾರಾಮಿ ಜೀವನಕ್ಕೆ ಒಂದು ಬಾರಿ ಹೊಂದಿಕೊಂಡರೆ ಮತ್ತೆ ಸಾಮಾನ್ಯರಂತೆ ಜೀವನ ನಡೆಸುವುದು ಬಹಳ ಕಷ್ಟಕರ. ಆದರೆ ಇಲ್ಲೊಬ್ಬರು ಸ್ಟಾರ್ ನಟಿ ಮಾತ್ರ ಎಡಬಿಡದೆ ಕೈತುಂಬಾ ಸಿನಿಮಾ ಅವಕಾಶಗಳು ಬರುತ್ತಿದ್ದರೂ ಸಹ ತನಗೆ ಸ್ಟಾರ್ ಜೀವನ ಸಾಕೆಂದು ಅದಕ್ಕೆ ಗುಡ್ ಬೈ ಹೇಳಿ ಹಳ್ಳಿ ಸೇರಿಕೊಂಡು ಹಳ್ಳಿಯ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ನಟಿ ಯಾರು ಇವರು ಹಳ್ಳಿಯಲ್ಲಿ ಜೀವನ ನಡೆಸುತ್ತಿರುವ ಕಾರಣವಾದರೂ ಏನು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ನಾನಿರುವುದೇ ನಿನಗಾಗಿ, ದೃವತಾರೆ ಸೇರಿ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ಹಾಗೂ ಸುಂದರ ನಟಿ ದೀಪಾ ಅವರು ಸೌಂದರ್ಯದ ವಿಷಯದಲ್ಲಿ ಇವರಿಗೆ ಇವರೇ ಸಾಟಿ. ಹೆಚ್ಚೆಚ್ಚಾಗಿ ರೋಮ್ಯಾಂಟಿಕ್ ಚಿತ್ರಗಳಲ್ಲಿ ನಟನೆ ಮಾಡುತ್ತಿದ್ದ ಇವರು ಈಗ ಎಲ್ಲಿ ಇದ್ದಾರೆ? ಎನ್ನುವುದು ಎಲ್ಲರ ಪ್ರಶ್ನೆ. ಕೇರಳದಲ್ಲಿ ಜನಿಸಿದ ಈ ನಟಿ ಅಲ್ಲಿ ಉನ್ನಿಮೇರಿ ಹೆಸರಿನಿಂದ ತಮ್ಮನ್ನು ತಾವು ಗುರುತಿಸಿಕೊಂಡರು. ನೂರಾರು ಚಿತ್ರಗಳಲ್ಲಿ ನಟಿಸಿದ ನಟಿ ದೀಪ 1982 ರಲ್ಲಿ ಕಾಲೇಜು ಉಪನ್ಯಾಸಕರಾದ ರೇಜಿಯೋ ಅವರನ್ನು ಮದುವೆಯಾದರು.
1982 ರಲ್ಲಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಈ ನಟಿ ಮತ್ತೆಂದು ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿ ಹೊಸ ಜೀವನದ ಹಾದಿ ಹಿಡಿದರು. ಜೀವನದಲ್ಲಿ ಬೇರೆಯವರಿಗೆ ಉಪಯೋಗ ಹಾಗೂ ಏನಾದರೂ ಒಂದಿಷ್ಟು ಕೆಲಸಗಳನ್ನು ಮಾಡೋಣ ಎಂದು ನಿರ್ಧರಿಸಿದ ನಟಿ ದೀಪ ಹಳ್ಳಿ ಹಾಗೂ ಬುಡಕಟ್ಟು ಜನರ ಜೊತೆ ಬೆರೆತು ಹೋಗಿದ್ದು ಅವರ ಕಷ್ಟಗಳನ್ನು ಆಲಿಸುತ್ತಾ ಅಲ್ಲಿನ ಜನರಿಗೆ ಮೆಡಿಕಲ್ ಕ್ಯಾಂಪ್ ಗಳನ್ನು ಆಯೋಜಿಸುತ್ತಾ, ಶಾಲೆಯಿಂದ ದೂರ ಇರುವಂತಹ ಮಕ್ಕಳನ್ನು ಶಾಲೆಗೆ ಕರೆತರುವ ಇಂತಹ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈಗ ಹಳ್ಳಿಯಲ್ಲಿ ವಾಸ್ತವ ಹೂಡಿರುವ ದೀಪ ಸುತ್ತಮುತ್ತಲ ಹಿಂದುಳಿದ ವರ್ಗಗಳ ಜನರ ಸಲುವಾಗಿ ಕೆಲಸ ಮಾಡುತ್ತಿದ್ದಾರೆ. ಸೆಲೆಬ್ರಿಟಿ ಜೀವನವನ್ನು ತ್ಯಜಿಸಿರುವ ಈ ನಟಿ ಸಾಮಾನ್ಯ ಜನರಂತೆ ಎಲ್ಲರ ಜೊತೆ ಬೆರೆತು ಎಲ್ಲಾ ಕಷ್ಟಗಳನ್ನು ಎದುರಿಸಿ ಸಮಾಜಸೇವಕಿ ಆಗಿ ಮಾರ್ಪಟ್ಟಿದ್ದಾರೆ.
ಇತ್ತೀಚಿಗೆ ಮೀಡಿಯಾದವರು ನಟಿ ದೀಪಾ ಅವರ ಬಳಿ ಮತ್ತೆ ಸಿನಿಮಾದಲ್ಲಿ ನಟಿಸುವಿರಾ ಎಂದು ಕೇಳಿದಾಗ ನಟಿ ದೀಪ ಮೀಡಿಯಾದವರಿಗೆ ಕೊಟ್ಟ ಉತ್ತರ ಹೀಗಿತ್ತು ತಾನು ಸಿನಿಮಾವನ್ನು ನೋಡಿ ವರ್ಷಗಳೇ ಕಳೆದಿವೆ ಸಿನಿಮಾದಲ್ಲಿ ತನಗೆ ಯಾವುದೇ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಆದರೆ ಒಂದು ವಿಷಯವನ್ನು ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ಸಿಗುವ ಸಂತೋಷವೇ ಬೇರೆ. ಬುಡಕಟ್ಟು ಜನರ ಆರೋಗ್ಯ ಶಿಕ್ಷಣ ಸುಧಾರಣೆಗಾಗಿ ನಟಿ ದೀಪಾ ಅವರು ಅಲ್ಲಿನ ಸಹಾಯಕ್ಕಾಗಿ ಪಣತೊಟ್ಟು ನಿಂತಿದ್ದಾರೆ.