ನಿಜಕ್ಕೂ ಈ ಸ್ಟೋರಿ ಎಂತವರನ್ನು ಕೂಡ ಮೆಚ್ಚುಗೆ ಪಡಿಸುತ್ತದೆ, ಇಲ್ಲದ ಪತ್ನಿಯನ್ನು ಮನೆಯಲ್ಲೇ ಇರೋ ಹಾಗೆ ಪ್ರತಿಮೆ ನಿರ್ಮಿಸಿದ ಪತಿ ನಿಜಕ್ಕೂ ಇದರ ಹಿಂದಿರುವ ಕಥೆ ಏನು ಅನ್ನೋದನ್ನ ಓದಿ.
ಕೊಪ್ಪಳ ಮೂಲದ ಉದ್ಯಮಿ ತನ್ನ ಪತ್ನಿ ಕೋಲಾರ ಸಮೀಪದ ರಸ್ತೆಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಮೃತ ಪಟ್ಟಿದ್ದರು, ಮೃತ ಪಟ್ಟ ಪತ್ನಿ ತನ್ನ ಕನಸಿನ ಮನೆಯನ್ನು ನಿರ್ಮಿಸಬೇಕು ಎಂಬುದಾಗಿ ಇದ್ದರು. ಮನೆ ನಿರ್ಮಾಣದ ಭೂಮಿ ಪೂಜೆಗೆ ಇದ್ದ ಪತ್ನಿ ಮನೆ ನಿರ್ಮಾಣವಾಗುವಷ್ಟರಲ್ಲಿ ಇರಲಿಲ್ಲ. ಹಾಗಾಗಿ ಅದೇ ದುಃಖದಲ್ಲಿದ್ದ ಪತಿ ಮನೆಯನ್ನು ಪೂರ್ಣ ಗೊಳಿಸದೆ ಅರ್ಧಕ್ಕೆ ಬಿಟ್ಟಿದ್ದರು ಆದ್ರೆ ತನ್ನ ಇಬ್ಬರು ಹೆಣ್ಣು ಮಕ್ಕಳ ಒತ್ತಾಯದಿಂದ ಮನೆಯನ್ನು ಪೂರ್ಣಗೊಳಿಸಿದ ಪತಿ ತನ್ನ ಪತ್ನಿಯ ನೆನಪಿಗಾಗಿ ಮನೆಯಲ್ಲಿ ಏನಾದ್ರು ಇರಬೇಕು ಎಂಬುದಾಗಿ ಯೋಚಿಸಿದಾಗ ಮನೆಯ ಆರ್ಕಿಟೆಕ್ಟ್ ರಂಘಣ್ಣನವರ್ ಮೇಣದ ಪ್ರತಿಮೆ ಮಾಡಿಸಲು ಸಲಹೆ ನೀಡಿದರು. ಅದರಂತೆ ಬೆಂಗಳೂರಿನ ಶ್ರೀಧರಮೂರ್ತಿ ಅವರ ಗೊಂಬೆ ಮನೆಗೆ ಹೋದರು. ಅಲ್ಲಿ ಅವರು ಮೇಣದ ಪ್ರತಿಮೆ ಬದಲಾಗಿ ಸಿಲಿಕಾನ್ ಪ್ರತಿಮೆ ಮಾಡಿಸಲು ಸಲಹೆ ನೀಡಿದರು. ಅದರಂತೆ ಶ್ರೀಧರಮೂರ್ತಿ ಸಿಲಿಕಾನ್ ಮೆಟಿರಿಯಲ್ ನಲ್ಲಿ ಮಾಧವಿ ಅವರ ಪ್ರತಿಮೆ ಮಾಡಿದರು. ಈ ಹಿನ್ನಲೆಯಲ್ಲಿ ಇದೇ ಅಗಸ್ಟ್ ತಿಂಗಳ 8 ರಂದು ಶ್ರೀನಿವಾಸ್ ಅವರ ನೂತನ ಮನೆಯ ಗೃಹಪ್ರವೇಶವಾಗಿದ್ದ ಆ ಮನೆಯಲ್ಲಿ ತಮ್ಮ ಪತ್ನಿ ಕೆವಿಎನ್ ಮಾಧವಿಯ ಸಿಲಿಕಾನ್ ಪ್ರತಿಮೆಯನ್ನು ಇಟ್ಟಿದ್ದಾರೆ.
ನಿಜಕ್ಕೂ ಈ ಪ್ರತಿಮೆ ನೋಡಲು ಅವರ ಪತ್ನಿ ತರಾನೇ ಇದೆ ಆದ್ರೆ ಜೀವ ಇಲ್ಲ ಅಷ್ಟೇ, ಪತ್ನಿ ಮಾದವಿಯವರು ಬಳಸುತ್ತಿದ್ದ ಸೀರೆ ಹಾಗೂ ಒಡವೆಯನ್ನು ಈ ಪ್ರತಿಮೆಗೆ ಹೋಲುವಂತೆ ಬಳಸಲಾಗಿದೆ ನೋಡಲು ದಿಟ್ಟ ಮಾಧವಿ ತರಾನೇ ಕಾಣುತ್ತದೆ. ಮನೆಯ ಮುಖ್ಯ ಸ್ಥಳ ಹಾಲ್ ನಲ್ಲಿ ಈ ಪ್ರತಿಮೆಯನ್ನು ಇಡಲಾಗಿದೆ. ಇದರ ಪಕ್ಕದಲ್ಲಿ ಕುಳಿತು ಪತಿ ಹಾಗೂ ತನ್ನ ಇಬ್ಬರು ಹೆಣ್ಣು ಮಕ್ಕಳು ಫೋಟೋ ತಾಗಿಸಿಕೊಂಡಿದ್ದಾರೆ ಫೋಟೋದಲ್ಲಿ ನೋಡಲು ಅದು ಪ್ರತಿಮೆ ತರಾನೇ ಕಾಣೋದಿಲ್ಲ ಅಷ್ಟೊಂದು ಸುಂದರವಾಗಿದೆ, ನಿಜಕ್ಕೂ ಪತ್ನಿ ಮೇಲಿನ ಪ್ರೀತಿಗಾಗಿ ಈ ಪತಿ ಮಾಡಿರುವಂತ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಾರಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.