ಶರೀರಕ್ಕೆ ಹಲವು ಆರೋಗ್ಯಕಾರಿ ಲಾಭಗಳನ್ನು ನೀಡುವುದರಲ್ಲಿ ಮೊಟ್ಟೆ ಕೂಡ ಹೆಚ್ಚು ಉಪಯೋಗಕಾರಿಯಾಗಿದೆ, ಶರೀರಕ್ಕೆ ಪ್ರೊಟೀನ್, ಕ್ಯಾಲ್ಶಿಯಂ ಹಾಗೂ ವಿಟಮಿನ್ ಅಂಶವನ್ನು ಮೊಟ್ಟೆಯಿಂದ ಪಡೆಯಬಹುದಾಗಿದೆ. ದಿನಕ್ಕೆ ಒಂದು ಮೊಟ್ಟೆ ಸೇವನೆ ಮಾಡುವುದರಿಂದ ಶರೀರಕ್ಕೆ ಶಕ್ತಿ ದೊರೆಯುವುದು. ಅಷ್ಟೇ ಅಲ್ಲದೆ ಮೊಟ್ಟೆಯ ಬಿಳಿಭಾಗವನ್ನು ತಿನ್ನೋದ್ರಿಂದ ಏನ್ ಲಾಭವಿದೆ ಅನ್ನೋದನ್ನ ತಿಳಿಯೋಣ ಮುಂದೆ ನೋಡಿ.
ಮೊಟ್ಟೆಯ ಬಿಳಿ ಭಾಗದಲ್ಲಿ ಬಿ ಜೀವಸತ್ವಗಳು ಇದ್ದು ದೇಹಕ್ಕೆ ಶಕ್ತಿಯನ್ನ ನೀಡುತ್ತದೆ. ನರಗಳು ಮತ್ತು ಮೆದುಳಿಗೆ ಇದು ಅತ್ಯಗತ್ಯವಾಗಿದೆ. ಮೊಟ್ಟೆಯ ಬಿಳಿ ಭಾಗದಲ್ಲಿ ಪ್ರೊಟೀನ್ ಅಂಶ ಹೇರಳವಾಗಿರುವುದರಿಂದ ಇದು ಶರೀರದ ತೂಕವನ್ನು ಇಳಿಸಿಕೊಳ್ಳಲು ತುಂಬಾನೇ ಸಹಕಾರಿ. ಇನ್ನು ಜೀರ್ಣಕ್ರಿಯೆಗೆ ಕೂಡ ಉಪಯೋಗಕಾರಿ.
ಮೊಟ್ಟೆಯ ಬಿಳಿ ಭಾಗದಲ್ಲಿ ಕಡಿಮೆ ಕ್ಯಾಲೋರಿ ಇರುವುದರಿಂದ ದೇಹಕ್ಕೆ ಇದು ಮುಖ್ಯವಾಗುತ್ತದೆ. ಮತ್ತು
ಇದರಲ್ಲಿ ಕೊಬ್ಬು ಸಹ ಇಲ್ಲ. ಮೊಟ್ಟೆಯ ಬಿಳಿ ಭಾಗವು ಕ್ಯಾಲ್ಸಿಯಂ ಅನ್ನು ಹೆಚ್ಚಾಗಿ ಹೊಂದಿದೆ. ಕ್ಯಾಲ್ಸಿಯಂ ಮೂಳೆಗಳಿಗೆ ಹಾಗೂ ಹಲ್ಲುಗಳಿಗೆ ಶಕ್ತಿಯನ್ನ ನೀಡಿ ಗಟ್ಟಿಗೊಳಿಸುತ್ತದೆ.
ಇದು ಸಂಪೂರ್ಣ ಪ್ರೊಟೀನ್ ಯುಕ್ತವಾಗಿದೆ, ಹಾಗಾಗಿ ಮೊಟ್ಟೆಯ ಬಿಳಿಭಾಗವು ಸಾಕಷ್ಟು ಅಮೈನೋ ಆಮ್ಲವನ್ನು ಹೊಂದಿದ್ದು ಸ್ನಾಯುಗಳಿಗೆ ಉತ್ತೇಜನವನ್ನ ನೀಡುತ್ತದೆ. ಆದ್ದರಿಂದ ಜಿಮ್ ಬಾಡಿ ಬೆಳೆಸುವವರು ಕೂಡ ನಿತ್ಯ ಮೊಟ್ಟೆ ತಿನ್ನುವ ಅಭ್ಯಾಸ ಮಾಡಿರುತ್ತಾರೆ. ನಾನಾ ರೀತಿಯ ಬೇಕರಿ ಜಂಕ್ ಫುಡ್ ಸೇವನೆ ಮಾಡುವ ಬದಲು ಇಂತಹ ಪ್ರೊಟೀನ್ ಅಂಶ ಹೊಂದಿರೋ ಆಹಾರಗಳನ್ನು ತಿನ್ನೋದ್ರಿಂದ ಉತ್ತಮ ಅರೋಗ್ಯ ವೃದ್ಧಿಸಿಕೊಳ್ಳಬಹುದಾಗಿದೆ.