ಕಾಡು ಪ್ರಾಣಿಗಳನ್ನು ಕಾಪಾಡಿದ ಕೆಲವು ವ್ಯಕ್ತಿಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಇವರನ್ನು ನಾವು ನಿಜವಾದ ಹೀರೋಗಳು ಎಂದು ಹೇಳಬಹುದು.
ಡೀರ್ ರೇಸ್ಕ್ಯೂ. ಇಬ್ಬರು ಸ್ನೇಹಿತರು ಇಟಲಿಯ ಕ್ಯಾಂಡ್ಲಿಗಿಯಾನ ಎಂಬ ನದಿಯಲ್ಲಿ ಟ್ರೆಕಿಂಗ್ ಮಾಡುವಾಗ ವೇಗವಾಗಿ ಹರಿಯುತ್ತಿರುವ ನದಿಯಲ್ಲಿ ಕೊಚ್ಚಿ ಕೋಗುತ್ತಿರುವ ಜಿಂಕೆ ಒಂದು ಇವರ ಕಣ್ಣಿಗೆ ಕಾಣಿಸತ್ತೆ. ಆ ಜಿಂಕೆಯನ್ನು ಕಾಪಾಡಲು ತುಂಬಾ ಪ್ರಯತ್ನ ಪಟ್ಟರೂ ಆ ಜಿಂಕೆ ಕೊಚ್ಚಿ ಬಹಳ ದೂರ ಹೋಗಿ ಕೊನೆಗೆ ನಿತ್ರಾಣದಿಂದ ಒಂದು ಕಡೆ ಅವರಿಗೆ ಸಿಗತ್ತೆ. ತಕ್ಷಣ ಆ ಇಬ್ಬರು ಸ್ನೇಹಿತರು ಆ ನದಿಯಿಂದ ಜಿಂಕೆಯನ್ನು ಕಾಪಾಡುತ್ತಾರೆ. ನದಿ ಸುತ್ತ ಬಂಡೆಗಳೇ ಇದ್ದ ಕಾರಣ ಆ ಜಿಂಕೆ ನೀರಿನಿಂದ ಹೊರಬರಲು ಆಗದೆ ಕೊಚ್ಚಿಕೊಂಡು ಹೋಗುತ್ತಿತ್ತು ಅದೃಷ್ಟವಶಾತ್ ಈ ಇಬ್ಬರು ಸ್ನೇಹಿತರ ಕಣ್ಣಿಗೆ ಬಿದ್ದು ಪ್ರಾಣ ಉಳಿಸಿಕೊಂಡಿದೆ.
ಇನ್ನೊಂದು ಕಡೆ ಜಿಂಕೆಯೊಂದು ತಂತಿಯಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿದೆ. ಈ ದೃಶ್ಯ ಇಬ್ಬರು ವ್ಯಕ್ತಿಗಳಿಗೆ ಕಂಡು ತಕ್ಷಣವೇ ಅದನ್ನು ಕಾಪಾಡುತ್ತಾರೆ. ಮಾನವನ ಸ್ವಾರ್ಥದಿಂದ ಈ ರೀಟಿಯ ಎಷ್ಟೋ ಕಾಡು ಪ್ರಾಣಿಗಳು ನರಕ ಅನುಭವಿಸುತ್ತಿವೆ. ನೀರು ಕಾಲಿಯಾಗಿ ಕೇಸರು ತುಂಬಿಕೊಂಡಿರುವಲ್ಲಿ ಒಂದು ಜಿಂಕೆ ಸಿಕ್ಕಿಹಾಕಿಕೊಂಡಿರುವುದನ್ನು ಕಂಡ ಅರಣ್ಯ ಸಿಬ್ಬಂಧಿಗಳು ಅದನ್ನು ಅಲ್ಲಿಂದ ತಪ್ಪಿಸಿ ಸುರಕ್ಷಿತ ಜಾಗಕ್ಕೆ ತಲುಪಿಸುತ್ತಾರೆ. ವಿಚಿತ್ರ ಏನು ಅಂದರೆ ಜಿಂಕೆಗಳು ಸಮುದ್ರದಲ್ಲಿ ತುಂಬಾ ಹತ್ತಿರಕ್ಕೆ ಇನ್ನೊಂದು ದಡ ಇದೆ ಅಂತ ತಿಳಿದು ಮುಂದೆ ಮುಂದೆ ಈಜುತ್ತಾ ಹೋದ ಜಿಂಕೆ ಮಧ್ಯದಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಅಲ್ಲಿ ಬೋಟ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗಳು ಇದನ್ನ ನೋಡಿ ಕಾಪಾಡುತ್ತಾರೆ. ಈ ರೀತಿ ನೂರಾರು ಜಿಂಕೆಗಳನ್ನು ವಿವಿಧ ಸಂಕಷ್ಟಗಳಿಂದ ಮಾನವರು ಕಾಪಾಡಿದ್ದಾರೆ.
ಡಾಗ್ ರೇಸ್ಕ್ಯೂ ನಮ್ಮ ದೇಶದ ರಾಜಸ್ಥಾನದ ಉದಯಪುರದ ಒಂದು ರಸ್ತೆಯಲ್ಲಿ ಟಾರ್ ಇರುವ ಒಂದು ಡ್ರಮ್ ನಲ್ಲಿ ಒಂದು ನಾಯಿ ಸಿಕ್ಕಿಹಾಕಿಕೊಳ್ಳುತ್ತೇ. ಅಲ್ಲಿರುವ ಟಾರ್ ಗೆ ನಾಯಿ ಅಂಟಿಕೊಂಡು ತುಂಬಾ ದಿನಗಳಿಂದ ಅಲ್ಲೇ ಇರತ್ತೆ. ನಂತರ ಅಲ್ಲಿನ ಜನಗಳು ಆ ಡ್ರಮ್ ಕಟ್ ಮಾಡಿ ನಾಯಿಯ ಮೈಗೆ ಅಂಟಿಕೊಂಡ ಟಾರ್ ಬಿಡಿಸಲು ಎಣ್ಣೆ ಹಚ್ಚಿ ತುಂಬಾ ಸಮಯದ ನಂತರ ಆ ನಾಯಿಯನ್ನು ಕಾಪಾಡುತ್ತಾರೆ. ಇದೆ ರೀತಿ ಬಹಳಷ್ಟು ಜನರು ಬಹಳ ನಾಯಿಗಳನ್ನು ಕಾಪಾಡಿದ್ದಾರೆ.
ಸೀ ಡಾಗ್ ರೇಸ್ಕ್ಯೂ ಒಂದು ಭಾರೀ ಗಾತ್ರದ ಸೀ ಡಾಗ್ ಸಮುದ್ರದ ಅಂಚಿನ ಮರಳಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತೇ. ಅದನ್ನ ಕಾಪಾಡಲು ಬಹಳ ಕಷ್ಟ ಪಡಬೇಕಾಗತ್ತೆ ಆದರೆ ಅದರ ಗಾತ್ರ ಬಹಳ ದೊಡ್ಡದು ಹಾಗೂ ಅಲ್ಲಿ ಮರಳು ಸಾಕಷ್ಟು ಇರುವುದರಿಂದ ಅಷ್ಟು ಸುಲಭಕ್ಕೆ ಸಾಧ್ಯವಾಗುವುದಿಲ್ಲ. ನಂತರ ಒಂದು ಜೆಸಿಬಿ ಸಹಾಯದಿಂದ ಅದು ಇದ್ದ ಜಾಗಕ್ಕೆ ನೀರನ್ನ ಹರಿದು ಬಿಟ್ಟು ನಂತರ ಅದು ಸಮುದ್ರ ಸೇರುವಂತೆ ಮಾಡುತ್ತಾರೆ. ಮಾನವರು ಸಮುದ್ರಕ್ಕೆ ಮೀನು ಹಿಡಿಯಲು ಹೋಗಿ ಅಲ್ಲೇ ಸಾಕಷ್ಟೂ ಬಲೆಗಳನ್ನು ಬಿಟ್ಟು ಬರುತ್ತಾರೆ. ಕೆಲವೊಮ್ಮೆ ಅವೇ ಸಮುದ್ರದ ಜೀವಿಗಳಿಗೆ ಸಂಕಷ್ಟವಾಗಿ ಪರಿಣಮಿಸುತ್ತೆ. ಇದರಿಂದ ತುಂಬಾ ಜಲಚರಗಳು ಸಾವನ್ನಪ್ಪುತ್ತವೇ. ಈ ಬಲೆಗಳು ಸೀಲ್ ಮರಿಗಳ ಕತ್ತಿಗೆ ಸುತ್ತಿಕೊಂಡು ಅವು ಕಷ್ಟ ಪಡುತ್ತಾ ಇರುತ್ತವೆ. ಅದನ್ನು ನೋಡಿದ ಜನರು ಮರಿಗಳನ್ನು ಹಿಡಿದು ಆ ಬಲೆಗಳನ್ನು ಕಟ್ ಮಾಡಿ ಪ್ರಾಣ ರಕ್ಷಣೆ ಮಾಡುತ್ತಾರೆ. ಒಂದು ಆಮೆ ನೇರವಾಗಿ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಅದರ ಬಾಯಲ್ಲಿರುವ ಬಲೆಯನ್ನು ತೆಗೆದು ಕಾಪಾಡುತ್ತಾರೆ ರೇಸ್ಕ್ಯೂ ಟೀಮ್.
ನಾವು ನೀರಿನಲ್ಲಿ ಹಾಕುವ ಪ್ಲಾಸ್ಟಿಕ್ ವಸ್ತುಗಳಿಂದ ಕೇವಲ ಜಲಮಾಲಿನ್ಯ ಮಾತ್ರ ಆಗುವುದಲ್ಲದೇ ನೀರಿನಲ್ಲಿ ಇರುವ ಪ್ರಾಣಿಗಳಿಗೆ ನರಕ ಯಾತನೆಯೇ ಸರಿ. ಆಮೆಯೊಂದರ ಮೂಗಿನಲ್ಲಿ ನಾವು ತಿಂದು ಬಿಸಾಡಿದ ಪ್ಲಾಸ್ಟಿಕ್ ಫೋರ್ಕ್ ಸಿಕ್ಕಿಹಾಕಿಕೊಂಡು ಬಿದ್ದಿತ್ತು. ತುಂಬಾ ಕಷ್ಟಪಟ್ಟು ಫೋರ್ಕನ್ನು ಹೊರಗೆ ತೆಗೆದರೂ ಹೊರಗೆ ತೆಗೆಯುವಂತಹ ಸಂದರ್ಭದಲ್ಲಿ ಆಮೆ ಬಹಳ ನರಕಯಾತನೆಯನ್ನು ಅನುಭವಿಸಿರುತ್ತದೆ. ಈ ರೀತಿ ಬಹಳಷ್ಟು ಜೀವ ಅಪಾಯದಲ್ಲಿದ್ದ ಸಮುದ್ರ ಜೀವಿಗಳನ್ನು ತುಂಬಾ ಅಪಾಯದಿಂದ ಸಾಕಷ್ಟು ಜನರು ಕಾಪಾಡಿದ್ದಾರೆ.
ಎಲಿಫೆಂಟ್ ರೆಸ್ಕ್ಯೂ ಶ್ರೀಲಂಕಾದ ಒಂದು ಕಾಡಿನಲ್ಲಿ ಒಂದು ಆನೆಯ ಸೊಂಡಿಲು ಮರದ ರೆಂಬೆಗಳಿಗೆ ಸಿಕ್ಕಿಹಾಕಿಕೊಂಡು ಬಿಟ್ಟಿದ್ದು ಬಹಳ ದಿನಗಳಿಂದ ಆಹಾರ ನೀರು ಇಲ್ಲದೆ ಬಹಳ ಕಷ್ಟ ಪಡುತ್ತಿತ್ತು. ನಂತರ ರೆಸ್ಕ್ಯೂ ಟೀಮಿಗೆ ಈ ಸಮಾಚಾರ ತಿಳಿದು ಬಹಳ ಕಷ್ಟಪಟ್ಟು ಆನೆಯನ್ನು ಬಿಡುಗಡೆ ಮಾಡುತ್ತಾರೆ. ಹಳ್ಳದಲ್ಲಿ ಬಿದ್ದ ಆನೆಮರಿಯನ್ನು ರೆಸ್ಕ್ಯೂ ಟೀಂ ಬಹಳ ಕಷ್ಟಪಟ್ಟು ಕಾಪಾಡಿದೆ. ಈ ರೀತಿಯಾಗಿ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಒದ್ದಾಡುತ್ತಿರುವ ಪ್ರಾಣಿಗಳನ್ನು ಸಾಕಷ್ಟು ರೆಸ್ಕ್ಯೂ ಟೀಮ್ ಗಳು ಕಾಪಾಡಿದೆ.