ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಎಷ್ಟು ದಿನ ಕೆಲಸ ಇರತ್ತೆ? ಇದರ ಸಂಬಳ ಹೇಗೆ ಬರತ್ತೆ? ಉದಕ್ಕೆ ಸಂಬಂಧಿಸಿ ಜಾಬ್ ಕಾರ್ಡ್ ಹೇಗೆ ಪಡೆಯುವುದು ಮತ್ತು ಜಾಬ್ ಕಾರ್ಡ್ ಪಡೆಯಲು ಬೇಕಾದ ದಾಖಲೆಗಳು ಏನು ಅನ್ನೋದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಉದ್ಯೋಗ ಖಾತ್ರಿ ಕಾರ್ಡ್ ಪಡೆಯಲು ಕೆಲವೊಂದು ದಾಖಲೆಗಳು ಬೇಕು. ಯಾವ ಯಾವ ದಾಖಲೆಗಳು ಬೇಕು ಅಂತ ನೋಡುವುದಾದರೆ , ಆಧಾರ್ ಕಾರ್ಡ್ ಜೆರಾಕ್ಸ್ , ಪಡಿತರ ಚೀಟಿಯ ಜೆರಾಕ್ಸ್ , ಬ್ಯಾಂಕ್ ಅಕೌಂಟ್ ಪಾಸ್ ಬುಕ್ ಜೆರಾಕ್ಸ್ ಈ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಊರಿನ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಗಳನ್ನು ಸಂಪರ್ಕಿಸಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿ. ನಿಮ್ಮ ಉದ್ಯೋಗ ಖಾತ್ರಿ ಕಾರ್ಡ್ ಎಷ್ಟು ದಿನಗಳಲ್ಲಿ ನಿಮಗೆ ಸಿಗತ್ತೆ ಅಂತ ನೋಡುವುದಾದರೆ ನಿಮ್ಮ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಉದ್ಯೋಗ ಖಾತ್ರಿ ವೆಬ್ಸೈಟ್ ನಲ್ಲಿ ನೀವು ಕೊಟ್ಟಿರುವ ಮಾಹಿತಿ ಹಾಗೂ ದಾಖಲೆಗಳನ್ನು ಹಾಕಿದ ತಕ್ಷಣ ನಿಮ್ಮ ಉದ್ಯೋಗ ಖಾತರಿ ಜಾಬ್ ಕಾರ್ಡ್ ರೆಡಿ ಆಗುತ್ತದೆ. ಉದ್ಯೋಗ ಖಾತರಿ ಜಾಬ್ ಕಾರ್ಡ್ ರೆಡಿ ಆಗದೇ ಇದ್ದಾಗ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಯಾವಾಗ ಬೇಕಿದ್ದರೂ ನೀವು ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಅವರನ್ನು ಸಂಪರ್ಕಿಸಿ ನಿಮ್ಮ ಉದ್ಯೋಗ ಖಾತರಿ ಜಾಬ್ ಕಾರ್ಡ್ ಅನ್ನು ಯಾವಾಗ ಬೇಕಿದ್ದರೂ ತೆಗೆದುಕೊಳ್ಳಬಹುದು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸ ಎಷ್ಟು ದಿನ ಇರತ್ತೆ ಅಂತ ನೋಡುವುದಾದರೆ ಸಾಮಾನ್ಯವಾಗಿ ವರ್ಷಪೂರ್ತಿ ಕೆಲಸ ಇರತ್ತೆ ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆಯ 4 ತಿಂಗಳು ಒಣ ಭೂಮಿಯಲ್ಲಿ ವ್ಯವಸಾಯ ಮಾಡುವ ರೈತರಿಗೆ ಕೆಲಸ ಇರುವುದಿಲ್ಲ. ಹಾಗಾಗಿ ಬೇಸಿಗೆಯಲ್ಲಿ ಕೆಲಸ ಮಾಡಿಸುತ್ತಾರೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಏನೆಂದರೆ ಒಂದು ಕುಟುಂಬದ ಜಾಬ್ ಕಾರ್ಡ್ ಗೆ 150 ದಿನ ಕೆಲಸ ನೀಡುವ ಅಧಿಕಾರವನ್ನು ಪಿಡಿಓ ಅವರು ಹೊಂದಿರುತ್ತಾರೆ. ಕೆಲಸದ ಅವಶ್ಯಕತೆ ಇದ್ದಲ್ಲಿ 200 ದಿನ ಕೆಲಸ ಕೊಡಬಹುದು ಹಾಗೆ ಈ ಯೋಜನೆಯಲ್ಲಿ ಕೆಲಸ ಮಾಡಿದ ನಂತರ ಪ್ರತೀ ವಾರ ಒಂದು ಕೆಲಸದ ಗುಂಪಿನಲ್ಲಿ ಹೆಚ್ಚು ಜನ ಇದ್ದಾಗ ವಾರ ವಾರ ಸಂಬಳ ನೀಡಲಾಗುತ್ತದೆ. ಇನ್ನೊಂದು ಕೆಲಸದ ಗುಂಪಿನಲ್ಲಿ ಕಡಿಮೆ ಜನ ಇದ್ದಾಗ ಆಗ ಅವರಿಗೆ ಸಂಬಳ ನೀಡುವುದು ಒಂದು ಅಥವಾ ಎರಡು ತಿಂಗಳು ಆಗಬಹುದು. ಇಲ್ಲಿ ಸಂಬಳ ನೇರವಾಗಿ ನಿಮ್ಮ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬಂದು ಸೇರುತ್ತದೆ.