bpl ration card cancellation: ನಕಲಿ ಬಿಪಿಎಲ್ ಕಾರ್ಡ್ (BPL Card) ಗಳನ್ನು ಬ್ಲಾಕ್ ಮಾಡುವುದಾಗಿ ಸರ್ಕಾರ ಘೋಷಿಸಿತ್ತು. ಅನರ್ಹ ಕಾರ್ಡ್‌ನೊಂದಿಗೆ ಅರ್ಹರ ಬಿಪಿಎಲ್ ಕಾರ್ಡ್ ಕೂಡ ರದ್ದಾಗಿದೆ. ಈ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರದ್ದಾದರೆ ಸಂತ್ರಸ್ತ ವ್ಯಕ್ತಿಯ ಬಿಪಿಎಲ್ ಕಾರ್ಡ್ ವಾಪಸ್ ನೀಡುವುದಾಗಿ ಸರ್ಕಾರ ಘೋಷಿಸಿದೆ. ಹಾಗಾಗಿ ಬಡವರ ಬಿಪಿಎಲ್ ಕಾರ್ಡ್ ರದ್ದುಪಡಿಸಿದರೆ ಅದನ್ನು ವಾಪಸ್ ಪಡೆಯುವುದು ಹೇಗೆ ಅನ್ನೋದನ್ನ ಮುಂದೆ ತಿಳಿಸಲಾಗಿದೆ ನೋಡಿ.
ಈ ಮಾಹಿತಿಯನ್ನು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದು ಕೊಳ್ಳಲಿ. ಅಷ್ಟೇ ಅಲ್ಲದೆ ಸರ್ಕಾರದ ಯೋಜನೆ, ಉದ್ಯೋಗ ಮಾಹಿತಿ ಸೇರಿದಂತೆ ಹಲವು ಉಪಯುಕ್ತ ವಿಚಾರಗಳನ್ನು ತಿಳಿಯಲು ಮರೆಯದೆ ನಮ್ಮ ವಾಟ್ಸಾಪ್ ಹಾಗು ಟೆಲಿಗ್ರಾಮ್ ಚಾನೆಲ್ ಸೇರಿ.
ಬಡವರಿಗೆ ಬಿಪಿಎಲ್ ಕಾರ್ಡ್ ನಲ್ಲಿ ಏನಾದರೂ ತೊಂದರೆಯಾದರೆ ತಹಸೀಲ್ದಾರ್ ಗೆ ತಿಳಿಸಿದರೆ ವಾರದೊಳಗೆ ಸಮಸ್ಯೆ ಬಗೆಹರಿಸಲಾಗುವುದು. ಅರ್ಹರಿಗೆ BPL ಕಾರ್ಡ್ ತಪ್ಪಬಾರದು. ನಿಮ್ಮ ಬಿಪ್ಲ್ರೆ ರೇಷನ್ ಕಾರ್ಡ್ ಏನಾದ್ರು ರದ್ದಾಗಿದ್ದರೆ ಅಥವಾ ಸಮಸ್ಯೆ ಆಗಿದ್ದರೆ ತಕ್ಷಣ ನಿಮ್ಮ ನಿಮ್ಮ ಹತ್ತಿರದ ಆಹಾರ ನಾಗರೀಕ ಇಲಾಖೆ ಅಥವಾ ತಹಸೀಲ್ದಾರ್ ಗೆ ತಿಳಿಸಿ ಅವರು ಅದನ್ನು ಹಿಂತಿರುಗಿಸುತ್ತಾರೆ. ಪಡಿತರ ಚೀಟಿ ಇಲ್ಲದಿರುವುದರಿಂದ ಆರೋಗ್ಯ ಸೌಲಭ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.