ಸಾಮಾನ್ಯವಾಗಿ ಕೆಮ್ಮು ಶೀತ ನೆಗಡಿ ಅನ್ನೋದು ಸಹಜವಾಗಿ ಬರುವಂತ ದೈಹಿಕ ಸಮಸ್ಯೆಯಾಗಿದೆ, ವಾತಾವರದಲ್ಲಿ ಆಗುವಂತ ಏರುಪೇರಿನಿಂದ ಹಾಗೂ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವಂತ ಸಮಸ್ಯೆ ನೆಗಡಿ ಕೆಮ್ಮು ಶೀತವಾಗಿದೆ. ಆದ್ರೆ ಇದಕ್ಕೆ ಹೆಚ್ಚು ಭಯಪಡುವ ಅವಶ್ಯಕತೆ ಇಲ್ಲ ಸಾಧಾರಣವಾಗಿ ನೆಗಡಿ ಕೆಮ್ಮು ಶೀತ ಕಾಣಿಸಿಕೊಂಡರೆ ಮನೆಯಲ್ಲಿ ಬಿಸಿನೀರು, ಹೆಚ್ಚಾಗಿ ಬಳಸಿ ಹಾಗೂ ಒಂದಿಷ್ಟು ಮನೆಮದ್ದುಗಳನ್ನು ಮಾಡಿ ಸಮಸ್ಯೆಯಿಂದ ದೂರ ಉಳಿಯಿರಿ.
ಸಾಧಾರಣವಾಗಿ ಕಾಡುವಂತ ನೆಗಡಿ ಶೀತ ಕೆಮ್ಮು ಸಮಸ್ಯೆಗೆ ಪರಿಹಾರ ಪಡೆಯಲು ಮನೆಯಲ್ಲೇ ಮಾಡಿ ಈರುಳ್ಳಿ ಸಿರಪ್ ಇದರಿಂದ ಯಾವುದೇ ಅಡ್ಡ ಪರಿಣಾಮ ಇರೋದಿಲ್ಲ ಹಾಗೂ ಸಮಸ್ಯೆಯಿಂದ ಬೇಗನೆ ಗುಣಮುಖರಾಗಬಹುದು. ಈರುಳ್ಳಿ ಸಿರಪ್ ಹೇಗೆ ತಯಾರಿಸೋದು ಹಾಗೂ ಇದರಿಂದ ಏನ್ ಲಾಭವಿದೆ ಶರೀರಕ್ಕೆ ಅನ್ನೋದನ್ನ ಮುಂದೆ ನೋಡಿ.
ನೆಗಡಿ ನಿವಾರಣೆಗೆ ಈರುಳ್ಳಿ ಸಿರಪ್ ಉತ್ತಮ ಮನೆಮದ್ದಾಗಿದ್ದು ಇದನ್ನು ತಯಾರಿಸಿಕೊಂಡು ಒಂದು ಡಬ್ಬದಲ್ಲಿ ಇಟ್ಟುಕೊಳ್ಳಬಹುದಾಗಿದೆ. ಕೆಮ್ಮು ಬಂದಾಗ ಅದನ್ನು ಹೋಗಲಾಡಿಸಲು ಮದ್ದಾಗಿ ಬಳಸಬಹುದಾಗಿದೆ.
ಈರುಳ್ಳಿ ಸಿರಪ್ ಮನೆಮದ್ದು ತಯಾರಿಸುವ ವಿಧಾನ: ಮೊದಲನೆಯದಾಗಿ ಈರುಳ್ಳಿಯ ಸಿಪ್ಪೆ ಸುಲಿದು ಅದನ್ನು ಚಿಕ್ಕದಾಗಿ ಕತ್ತರಿಸಿ ಗಾಜಿನ ಜಾರ್ ನಲ್ಲಿ ಹಾಕಿಡಿ. ನಂತರ ಅದರ ಮೇಲೆ 2 ಚಮಚ ಜೇನು ತುಪ್ಪ ಹಾಕಿ. ರಾತ್ರಿ ಈ ಮಿಶ್ರಣ ಮಾಡಿ ಜಾರ್ ನ ಮುಚ್ಚಳ ಹಾಕಿಡಿ. ಸುಮಾರು 6-10 ಗಂಟೆಗಳ ಕಾಲ ಈ ಮಿಶ್ರಣವನ್ನು ಹಾಗೆಯೇ ಬಿಡಿ. ನಂತರ ಜಾರ್ ತಳದಲ್ಲಿ ಸಂಗ್ರಹವಾದ ಮಿಶ್ರಣವನ್ನು ಬೇರೆ ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಿ. ಇನ್ನು ಇದನ್ನು ಕೆಮ್ಮು ಇದ್ದವರು ಈರುಳ್ಳಿ ಸಿರಪ್ ಅನ್ನು 1 ಚಮಚದಂತೆ ದಿನಕ್ಕೆ 2-3 ಬಾರಿ ತೆಗೆದುಕೊಂಡರೆ ಕೆಮ್ಮು ಕಡಿಮೆಯಾಗುತ್ತದೆ.
ಈರುಳ್ಳಿಯಲ್ಲಿರುವಂತ ಆರೋಗ್ಯಕಾರಿ ಲಾಭವೇನು ಅನ್ನೋದನ್ನ ನೋಡುವುದಾದರೆ, ಇದರಲ್ಲಿ ರಂಜಕದ ಅಂಶವಿದೆ. ಈರುಳ್ಳಿಯಲ್ಲಿರುವ ಖಾರ ಹಾಗೂ ಘಾಟು ಅದರಲ್ಲಿ ಅಡಗಿರುವ ಔಷಧೀಯ ಗುಣಗಳನ್ನು ಸೂಚಿಸುತ್ತದೆ. ಇದು ದೇಹದಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವಲ್ಲಿ ಸಹಕಾರಿಯಾಗಿದ್ದು, ಈರುಳ್ಳಿ ಸೇವನೆಯಿಂದ ದೇಹದಲ್ಲಿ ಬಿಳಿ ರಕ್ತಕಣಗಳು ಹೆಚ್ಚಾಗುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ.
ಅಷ್ಟೇ ಅಲ್ಲದೆ ಈರುಳ್ಳಿಯಲ್ಲಿ ಏಲ್ಲಿನ್ ಎಂಬ ಅಂಶವಿದೆ. ಈ ಅಂಶ ಬೆಳ್ಳುಳ್ಳಿಯಲ್ಲಿಯೂ ಇರುತ್ತದೆ. ಈರುಳ್ಳಿಯನ್ನು ಕತ್ತರಿಸಿದಾಗ ಅದರಲ್ಲಿ ಏಲ್ಲಿನ್ ಅಂಶ ಉತ್ಪತ್ತಿಯಾಗುತ್ತದೆ. ಇದು ಉಸಿರಾಟದ ತೊಂದರೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಈರುಳ್ಳಿ ಶರೀರಕ್ಕೆ ಉತ್ತಮ ಮದ್ದಾಗಿ ಕೆಲಸ ಮಾಡುತ್ತದೆ.