ಬಹುತೇಕ ಜನ ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆ ಹಾಗೂ ನಾನಾ ರೀತಿಯ ಇಂಗ್ಲಿಷ್ ಮಾತ್ರೆಗಳ ಮೊರೆ ಹೋಗುತ್ತಾರೆ. ಆದ್ರೆ ಅದನ್ನೇ ಹೆಚ್ಚು ಅಭ್ಯಾಸ ಮಾಡಿಕೊಳ್ಳೋದು ಆರೋಗ್ಯದ ದೃಷ್ಟಿಯಿಂದ ಅಷ್ಟೊಂದು ಒಳ್ಳೆಯದಲ್ಲ. ನೈಸರ್ಗಿಕವಾಗಿ ಸಿಗುವಂತ ಒಂದಿಷ್ಟು ಮನೆಮದ್ದು ಬಳಸಿ ಕೂಡ ದೈಹಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತ ಕೆಲಸ ಮಾಡಬೇಕು.
ಆಯುರ್ವೇದಿಕ್ ಮನೆಮದ್ದುಗಳು ನಮ್ಮ ಹಿರಿಯರ ಕಾಲದಿಂದಲೂ ಕೂಡ ರೂಢಿಗತವಾಗಿದೆ, ಆದ್ದರಿಂದ ಇವುಗಳು ಶರೀರಕ್ಕೆ ಅಷ್ಟೊಂದು ಅಡ್ಡ ಪರಿಣಾಮ ಬಿರೋದಿಲ್ಲ. ಬನ್ನಿ ಒಂದಿಷ್ಟು ದೈಹಿಕ ಸಮಸ್ಯೆಗಳಿಗೆ ಮನೆಮದ್ದು ಹೇಗೆ ಪರಿಹಾರ ನೀಡುತ್ತೆ ಅನ್ನೋದನ್ನ ತಿಳಿಯೋಣ.
ಬಾಯಿ ಹುಣ್ಣು ಸಮಸ್ಯೆಗೆ ಮನೆಮದ್ದು; ಶರೀರದ ಉಷ್ಣ ಜಾಸ್ತಿಯಾಗಿ ಬಾಯಿ ಹುಣ್ಣು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೌದು ಈ ಸಮಸ್ಯೆ ಬಹುತೇಕ ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಇದರಿಂದ ಭಯ ಪಡುವ ಅವಶ್ಯಕತೆ ಇಲ್ಲ, ಈ ಬಾಯಿ ಹುಣ್ಣು ನಿವಾರಣೆಗೆ ಮನೆಯಲ್ಲಿ ಇರುವಂತ ಒಣಕೊಬ್ಬರಿ ಹಾಗೂ ಕಲ್ಲುಸಕ್ಕರೆ ಬಳಸಿ ನಿವಾರಣೆ ಕಂಡುಕೊಳ್ಳಬಹುದು. ಒಣಕೊಬ್ಬರಿ ಮತ್ತು ಕಲ್ಲು ಸಕ್ಕರೆಯನ್ನು ತಿನ್ನುವುದರಿಂದ ಬಾಯಿ ಹುಣ್ಣು ವಾಸಿಯಾಗುತ್ತದೆ. ಒಣ ಕೊಬ್ಬರಿಯಲ್ಲಿ ವಿಟಮಿನ್ ಫೈಬರ್ ಮುಂತಾದ ಅಂಶಗಳು ಹೇರಳವಾಗಿವೆ.
ತಲೆನೋವು ಏನಾದ್ರು ಕಾಡುತ್ತಿದ್ದರೆ: ಕರ್ಪೂರವನ್ನು ಸ್ವಲ್ಪ ಲಿಂಬೆ ರಸದಲ್ಲಿ ಬೆರೆಸಿ ತಲೆಗೆ ಮಾಲಿಶ್ ಮಾಡಿದರೆ ತಲೆ ನೋವು ಕಡಿಮೆಯಾಗುತ್ತದೆ. ಅಲ್ಲದೆ ನಿಮ್ಮಲ್ಲಿ ನೆಗಡಿ ಇದ್ರೆ ಇದಕ್ಕೆ ಬಿಸಿ ನೀರಿನಲ್ಲಿ ಲಿಂಬೆ ರಸ ಹಾಕಿ ಕುಡಿದರೆ ನೆಗಡಿ ನಿವಾರಣೆಯಾಗುತ್ತದೆ.
ಪಿತ್ತ ಹೆಚ್ಚಾಗಿ ಸಮಸ್ಯೆ ಇದ್ರೆ; ರಾಗಿ ಹಿಟ್ಟನ್ನು ಸ್ವಲ್ಪ ಹುರಿದು ಹುಣಸೆ ನೀರಿನಲ್ಲಿ ಸ್ವಲ್ಪ ಬೆಲ್ಲದೊಂದಿಗೆ ಮಿಶ್ರ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಹೀಗೆ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಇನ್ನು ಕೆಲವರಲ್ಲಿ ಮನೆಕೆಲಸ ಹಾಗೂ ಹೊರಗಿನ ಕೆಲಸ ಹೆಚ್ಚಾಗಿ ಮೈ ಕೈ ನೋವು ಸಮಸ್ಯೆಯಾಗಿ ಕಾಡುತ್ತಿರುತ್ತದೆ.ಈ ಮೈಕೈ ನೋವು ನಿವಾರಣೆಗೆ ಮೆಂತ್ಯೆ ಸೊಪ್ಪಿನ ಸೇವನೆ ಮೇಲಿಂದ ಮೇಲೆ ಮಾಡಿದರೆ ಬೆನ್ನು ಸೊಂಟ ಮೈ ಕೈ ನೋವು ಕಡಿಮೆಯಾಗುವುದು. ಹೆಚ್ಚಾಗಿ ಹಣ್ಣು ತರಕಾರಿ ಒಣ ಹಣ್ಣುಗಳನ್ನು ತಿನ್ನುವುದು ಉತ್ತಮ. ನಾನಾ ರೀತಿಯ ಜಂಕ್ ಫುಡ್ ತಿನ್ನುವದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.