ರಾಜ್ಯ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳಲ್ಲಿ ನೇರ ಸಲ ಸೌಲಭ್ಯ ಕೂಡ ಒಂದಾಗಿದ್ದು, ಇದೀಗ ಈ ಸೌಲಭವನ್ನು ಪಡೆಯಲು ಅರ್ಜಿಕರೆಯಲಾಗಿದೆ. ಸ್ವಂತ ಉದ್ಯಮ ಆರಂಭಿಸಬೇಕು ಎಂಬ ಕನಸು ಹೊತ್ತವರಿಗೆ ಈಗ ಒಂದು ಸುವರ್ಣ ಅವಕಾಶ. ನೀವು ಉದ್ಯಮ ಆರಂಭಿಸಲು ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಅಡಿಯಲ್ಲಿ 1 ಲಕ್ಷ ರೂಪಾಯಿ ಸಾಲ ಸೌಲಭ್ಯ ಸಿಗಲಿದೆ. ಸಾಲ ತೆಗೆದುಕೊಳ್ಳಲು ಅರ್ಹತಾ ಮಾನದಂಡಗಳು ಏನೇನು ಹಾಗೂ ಸಾಲ ಪಡೆಯುವ ವಿಧಾನ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.ಈ ಮಾಹಿತಿಯನ್ನು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ. ಪ್ರತಿದಿನ ಉಪಯುಕ್ತ ಮಾಹಿತಿಯನ್ನು ತಿಳಿಯಲು ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಗ್ರೂಪ್ ಸೇರಿ
ಯಾರೆಲ್ಲ ಅರ್ಜಿಸಲ್ಲಿಸಲು ಅರ್ಹರು?
ಹಿಂದುಳಿದ ವರ್ಗ ಪ್ರ-1, 2ಎ,3ಎ,ಮತ್ತು 3ಬಿ,
ವಯೋಮಿತಿ: 18 ರಿಂದ 35 ವರ್ಷ
ವಿದ್ಯಾರ್ಹತೆ: ಕನಿಷ್ಠ 7 ಗರಿಷ್ಠ 10ನೆ ತರಗತಿ
ಸಾಲದ ವಿವರ:
ಘಟಕ ವೆಚ್ಚ: 100000 ರೂಪಾಯಿ, 200000 ರೂಪಾಯಿ
ಸಹಾಯಧನ: 20000 ರೊ .30000 ರೊ.ಗಳು
ಸಾಲದ ಮೊತ್ತ: ೮೦೦೦೦ ರೊ. ೧೭೦೦೦೦. ರೊ.ಗಳು
ಅರ್ಜಿಸಲ್ಲಿಸಲು ಬೇಕಾಗುವ ದಾಖಲೆಗಳು:
ಅರ್ಜಿದಾರರ ಆಧಾರ್ ಕಾರ್ಡ್
ರೇಷನ್ ಕಾರ್ಡ್
ಜಾತಿ ಹಾಗೂ ಆದಾಯ
ಶೈಕ್ಷಣಿಕ ಅಂಕಪಟ್ಟಿ
ಬ್ಯಾಂಕ್ ಪಾಸ್ ಬುಕ್
ಯಾವೆಲ್ಲ ನಿಗಮದಿಂದ ಅರ್ಜಿಸಲ್ಲಿಸಬಹುದು?
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
ಉಪ್ಪಾರ ಅಭಿವೃದ್ಧಿ ನಿಗಮ
ಮರಾಠ ಅಭಿವೃದ್ಧಿ ನಿಗಮ
ವಿಶ್ವಕರ್ಮಾ ಅಭಿವೃದ್ಧಿ ನಿಗಮ
ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
ಸವಿತಾ ಸಮಾಜ ಅಭಿವೃದ್ಧಿ ನಿಗಮ
ಅಲೆಮಾರಿ ಅರೆ- ಅಲೆಮಾರಿ ಅಭಿವೃದ್ಧಿ ನಿಗಮ
ಒಕ್ಕಲಿಗ ಅಭಿವೃದ್ಧಿ ನಿಗಮ
ಈ ಸೌಲಭ್ಯ ಪಡೆಯಲು ಇಚ್ಛಿಸುವವರು ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ್ ಒನ್ ಆನ್ಲೈನ್ ಸೆಂಟರ್ ನಲ್ಲಿ ವಿಚಾರಿಸಿ ಅರ್ಜಿಹಾಕಬಹುದಾಗಿದೆ.