ರೈತರಿಗೆ ಬೋರವೆಲ್ ನೀಡುವ ಯೋಜನೆ, ಇದನ್ನು ಯಾರು ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ? ತಿಳಿಯಿರಿ ..

0 10

ಈ ಲೇಖನದ ಮೂಲಕ ನೀಡುವಂತಹ ಮಾಹಿತಿ ರೈತರಿಗೆ ತುಂಬಾ ಉಪಯುಕ್ತವಾಗಬಹುದು. ಯಾಕೆಂದರೆ ಸರ್ಕಾರದ ಕಡೆಯಿಂದ ತಮ್ಮ ತಮ್ಮ ಹೊಲಗಳಲ್ಲಿ ಉಚಿತವಾಗಿ ಬೋರ್ ವೆಲ್ ಗಳನ್ನು ಹಾಕಿಸಿಕೊಳ್ಳಲು ಒಂದು ಬಂಪರ್ ಆಫರ್ ಅನ್ನು ನೀಡಿದೆ ಎಂದು ಹೇಳಬಹುದು. ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಇದೇ ತಿಂಗಳು ಅಂದರೆ ಜುಲೈ 12 ನೇ ತಾರೀಖಿನಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 12 ಆಗಿರುತ್ತದೆ. ತಮ್ಮ ಹೊಲಗಳಲ್ಲಿ ಉಚಿತವಾಗಿ ಬೋರ್ ವೆಲ್ ಗಳನ್ನು ಹಾಕಿಸಿಕೊಳ್ಳಲು ಯಾವ ರೀತಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳು ಏನು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸರ್ಕಾರ ಈ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿರುವ ಉದ್ದೇಶವನ್ನು ನೋಡುವುದಾದರೆ ಹಿಂದುಳಿದ ವರ್ಗಗಳ ರೈತರು ತಮ್ಮ ಹೊಲದಲ್ಲಿ ನೀರಾವರಿ ಸಮಸ್ಯೆಯನ್ನು ಬಹಳಷ್ಟು ತೀವ್ರವಾಗಿ ಅನುಭವಿಸುತ್ತಿರುತ್ತಾರೆ. ಗಂಗಾಕಲ್ಯಾಣ ನೀರಾವರಿ ಯೋಜನೆ ಅಡಿಯಲ್ಲಿ ಹಿಂದುಳಿದ ವರ್ಗಗಳ ರೈತರಿಗೆ ಉಚಿತವಾಗಿ ತಮ್ಮ ಹೊಲಗಳಲ್ಲಿ ಬೋರ್ವೆಲ್ ಹಾಕಿಸಿಕೊಳ್ಳುವುದರ ಸಲುವಾಗಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ರೈತರು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವಂತಹ ಅರ್ಹತೆಗಳು ಅಥವ ದಾಖಲಾತಿಗಳು ಏನು ಅಂತ ನೋಡುವುದಾದರೆ, ಮೊದಲಿಗೆ ಅರ್ಜಿ ಸಲ್ಲಿಸುವಂತ ರೈತ ಹಿಂದುಳಿದ ವರ್ಗಕ್ಕೆ ಸೇರಿದವನಾಗಿರಬೇಕು. ವಾರ್ಷಿಕ ವರಮಾನ 98000 ಒಳಗಡೆ ಇರಬೇಕು. ಅರ್ಜಿ ಸಲ್ಲಿಸುವ ರೈತ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಕ್ಕೆ ಸೇರಿರಬೇಕು. ಅರ್ಜಿ ಸಲ್ಲಿಸುವವರು ವ್ಯವಸಾಯ ಕುಟುಂಬಕ್ಕೆ ಸೇರಿದವರಾಗಿದ್ದು ಕನಿಷ್ಟಪಕ್ಷ ಎರಡು ಎಕರೆ ಜಮೀನನ್ನು ಆದರೂ ಹೊಂದಿರಬೇಕು. ಅರ್ಜಿ ಸಲ್ಲಿಸುವವರು ಕರ್ನಾಟಕದಲ್ಲಿ ವಾಸವಾಗಿರಬೇಕು ಹಾಗೂ ಅವರ ವಯಸ್ಸು 18 ವರ್ಷ ಮೇಲ್ಪಟ್ಟ 55 ವರ್ಷದೊಳಗಿರಬೇಕು. ಬೇರೆ ಯಾವುದೇ ಯೋಜನೆಗಳ ಮೂಲಕವಾದರೂ ಸಾಲ ಅಥವಾ ಇನ್ನಿತರ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಸಹ ಪಡೆದಿರಬಾರದು. ಹಾಗೆ ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರು ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇಷ್ಟು ಅರ್ಹತೆ ಇರುವವರು ಮಾತ್ರ ಈ ಗಂಗಾಕಲ್ಯಾಣ ನೀರಾವರಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಇನ್ನೂ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಯಾವ ರೀತಿ ಸಬ್ಸಿಡಿ ಸಿಗುತ್ತೆ ಅಂತ ನೋಡುವುದಾದರೆ ರೈತರಿಗೆ ತಮ್ಮ ಹೊಲಗಳಲ್ಲಿ ಬೋರ್ವೆಲ್ ಅನ್ನು ಕೂರಿಸಲು ಸಾಮಾನ್ಯವಾಗಿ ಎರಡು ಲಕ್ಷದವರೆಗೆ ಕರ್ಚು ಬರಬಹುದು. ಎರಡು ಲಕ್ಷದಲ್ಲಿ ಒಂದುವರೆ ಲಕ್ಷದವರೆಗಿನ ಸಬ್ಸಿಡಿಯನ್ನು ಸರ್ಕಾರದ ಕಡೆಯಿಂದ ನೀಡಲಾಗುತ್ತದೆ. ಇನ್ನುಳಿದಿರುವ rs.50000 ನ್ನು ಸಾಲದ ರೀತಿಯಲ್ಲಿ 4 ಪರ್ಸೆಂಟ್ ಬಡ್ಡಿದರದಲ್ಲಿ ರೈತರಿಗೆ ನೀಡಲಾಗುತ್ತದೆ. ಬೋರ್ವೆಲ್ ಕೂರಿಸಿದ ನಂತರ ವಿದ್ಯುತ್ ಸಂಪರ್ಕಕ್ಕಾಗಿ ಸುಮಾರು ಐವತ್ತು ಸಾವಿರ ಕರ್ಚು ಬೀಳಬಹುದು ಇದಕ್ಕಾಗಿ 50 ಸಾವಿರವನ್ನು ಸಹ ಸರ್ಕಾರದ ಕಡೆಯಿಂದ ನೀಡಲಾಗುವುದು.

ಗಂಗಾಕಲ್ಯಾಣ ನೀರಾವರಿ ಯೋಜನೆಗೆ ರೈತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಲ್ಲಿ ನಿಮ್ಮ ಸಂಪೂರ್ಣ ಹೆಸರು, ವಯಸ್ಸು, ಹುಟ್ಟಿದ ಸ್ಥಳ, ತಂದೆ ತಾಯಿಯ ಹೆಸರು , ಪ್ರಸ್ತುತ ವಿಳಾಸ ಹೀಗೆ ಹೇಳಿರುವಂತಹ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ತುಂಬಿಸಿ ಆಧಾರ್ ಕಾರ್ಡ್ ನಂಬರ್ ಹಾಗೂ ಚಾಲ್ತಿಯಲ್ಲಿರುವ ಅಂತಹ ಅರ್ಜಿದಾರರ ಮೊಬೈಲ್ ನಂಬರ್, ಪೋಷಕರ ವಿವರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾರ್ಷಿಕ ಆದಾಯ, ನಿಮ್ಮ ಜಮೀನಿನ ಒಟ್ಟು ವಿಸ್ತರಣೆ, ಈಗಾಗಲೇ ನಿಮ್ಮ ಜಮೀನಿನಲ್ಲಿ ನೀರಾವರಿ ಸೌಲಭ್ಯ ಇದೆಯೋ ಇಲ್ಲವೋ ಎನ್ನುವುದನ್ನು ತುಂಬಬೇಕು ಹಾಗೂ ವಿದ್ಯುತ್ ಸಂಪರ್ಕ ಮಾಡಬೇಕು ಅನ್ನುವುದನ್ನು ಸಹ ಅರ್ಜಿಯಲ್ಲಿ ಕಾಣಿಸಬೇಕು. ಬ್ಯಾಂಕಿನ ಅಕೌಂಟ್ ನಂಬರ್ ಹಾಗೂ ಐಎಫ್ಎಸ್ಸಿ ಕೋಡ್ ನಮೂದಿಸಬೇಕು. ಇವೆಲ್ಲವನ್ನು ಸರಿಯಾಗಿ ತುಂಬಿ ಡಾಕ್ಯುಮೆಂಟನ್ನು ಸಬ್ಮಿಟ್ ಮಾಡುವಾಗ ಇದು 150ರಿಂದ 200 ಕೆಬಿ ಯಲ್ಲಿ ಪಿಡಿಎಫ್ ತರಹ ಇರಬೇಕು. ಇದರ ಜೊತೆಗೆ ನಿಮ್ಮ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ಹಾಗೂ ಒಂದು ಫೋಟೋ ಇವೆಲ್ಲವೂ ಇರಬೇಕು. ನಂತರ ಇದೆಲ್ಲವನ್ನು ಒಂದೊಂದೇ ಹಾಗೆ ಸಬ್ಮಿಟ್ ಮಾಡಿ ನಿಮ್ಮ ಹಿಂದುಳಿದ ವರ್ಗಗಳ ಆಫೀಸಿನಲ್ಲಿ ಇದರ ಜೆರಾಕ್ಸ್ ಪ್ರತಿಯನ್ನು ತೆಗೆದುಕೊಂಡು ಸಬ್ಮಿಟ್ ಮಾಡಬೇಕು. ಈ ಮುಂದಿನ ವಿಡಿಯೋ ನೋಡಿ ..

Leave A Reply

Your email address will not be published.