IAS Success Story: ಸಾಧಿಸುವ ಛಲ ಇದ್ರೆ ಖಂಡಿತ ಯಶಸ್ಸಿನ ದಾರಿ ಹಿಡಿಯಬಹುದು ಅನ್ನೋದಕ್ಕೆ ಇವರೇ ಉತ್ತಮ ಸಾಕ್ಷಿಯಾಗಿದ್ದಾರೆ. ಹೌದು ಮನೆಯಲ್ಲಿ ಬಡತನ, ಸಂಸಾರದ ಜವಾಬ್ದಾರಿ ಹೊತ್ತ ತಂದೆ ಹೊಟ್ಟೆಪಾಡಿಗಾಗಿ ಚಿಕ್ಕ ಕಂಪನಿ ಕೆಲಸಕ್ಕೆ ಹೋಗುತ್ತಿದ್ದರು ಇನ್ನೂ ತಾಯಿ ಮನೆಗೆಲಸ ಮಾಡುತ್ತಿದ್ದರು, ಇದರ ನಡುವೆ ಈ ಯುವತಿ ತನ್ನ ವ್ಯಾಸಂಗವನ್ನು ಮುಂದುವರೆಸಲು ಹಣಕಾಸಿನ ಸಮಸ್ಯೆ ಸಾಕಷ್ಟು ಇತ್ತು.
ಇದೆಲ್ಲವನ್ನು ಅರಿತ ಈ ಯುವತಿ ಜೀವನದಲ್ಲಿ ಚನ್ನಾಗಿ ಓದಿ ಏನಾದ್ರು ಸಾಧಿಸಬೇಕು ಬಡತನದಿಂದ ದೂರ ಉಳಿಯಬೇಕು ಉನ್ನತ ಅಧಿಕಾರಿಯಾಗಬೇಕು ಎನ್ನುವ ಛಲದಿಂದ ಓದಿನಲ್ಲಿ ಆಸಕ್ತಿವಹಿಸುತ್ತಾಳೆ, ಅಷ್ಟಕ್ಕೂ ಈ ಯುವತಿ ಯಾರು ಇವರ ಸಾಧನೆಯ ಹಾದಿ ಹೇಗಿತ್ತು ಅನ್ನೋದನ್ನ ಮುಂದೆ ತಿಳಿಯೋಣ ಬನ್ನಿ.
ಇವರ ಹೆಸರು ಮಮತಾ ಯಾದವ ಎಂಬುದಾಗಿ ದೆಹಲಿಯ ಬಸಾಯಿ ಗ್ರಾಮದ 24 ವರ್ಷದ ಯುವತಿಯೊಬ್ಬಳು UPSC ನಾಗರಿಕ ಸೇವಾ ಪರೀಕ್ಷೆ 5ನೇ ರ್ಯಾನ್ಕ್ ಪಡೆದಿದ್ದಾಳೆ. ಮಮತಾ ಯಾದವ್ ತಮ್ಮ ಹಳ್ಳಿಯಿಂದ ಐಎಎಸ್ ಅಧಿಕಾರಿಯಾದ ಮೊದಲ ವ್ಯಕ್ತಿಯಾಗಿದ್ದಾರೆ. ಮಮತಾ ಯಾದವ್ ತನ್ನ ಇಡೀ ಜೀವನವನ್ನು ದೆಹಲಿಯ ಬಸಾಯಿ ಗ್ರಾಮದಲ್ಲಿ ಕಳೆದಿದ್ದಾರೆ. ಇವರ ತಂದೆ ಚಿಕ್ಕ ಕಂಪನಿ ಕೆಲ್ಸಕ್ಕೆ ಹೋಗುತ್ತಿದ್ದರು ತಾಯಿ ಮನೆಗೆಲಸ ಮಾಡುತ್ತಾರೆ.
UPSC ಪರೀಕ್ಷೆ ಪಾಸ್ ಮಾಡುವುದು ನಿಜಕ್ಕೂ ಅಷ್ಟೊಂದು ಸುಲಭವಲ್ಲ, ಅದರ ಹಿಂದೆ ಅಷ್ಟೊಂದು ಶ್ರಮ ಇರಲೇಬೇಕು, ಆಗ ಮಾತ್ರ ಸಾಧನೆಯ ಪಟ್ಟ ಸಿಗೋದು. ಈ ಪರೀಕ್ಷೆಯನ್ನು ಲಕ್ಷಾನುಗಟ್ಟಲೆ ಜನ ಬರೆಯುತ್ತಾರೆ ಆದ್ರೆ, ಪಾಸ್ ಆಗುವರು ಅದೃಷ್ಟವಂತರು ಮಾತ್ರ. IAS ಅಧಿಕಾರಿಯಾಗಿರುವ ಮಮತಾ ಯಾದವ್ ಹೇಳುವ ಮಾತು ಜೀವನದಲ್ಲಿ ಶ್ರಮ, ಸಾಧಿಸುವ ಛಲ ಇದ್ರೆ ಖಂಡಿತ ಯಶಸ್ಸು ಸಿಕೆ ಸಿಗುತ್ತೆ ಎಂಬುದಾಗಿ ಹೇಳುತ್ತಾರೆ. ಅದೇನೇ ಇರಲಿ ಬಡತನದಲ್ಲಿ ಹುಟ್ಟಿ ಬೆಳೆದ ಈ ಯುವತಿ ತನ್ನ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಂಡಿದ್ದಾರೆ.