IAS Success Story: ಸಾಧಿಸುವವನಿಗೆ ಸಾಧಿಸುವ ಛಲ, ಶ್ರಮ ಆಸಕ್ತಿ ಇದ್ರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಈ ವ್ಯಕ್ತಿಯೇ ಮೊದಲ ಉದಾಹರಣೆ ಆಗಿದ್ದಾರೆ. ಮನೆಯಲ್ಲಿ ಬಡತನ ಮನೆಯ ಜವಾಬ್ದಾರಿಯನ್ನು ಹೊಂದಿರುವಂತ ಇವರು. ಲೈಫ್ ನಲ್ಲಿ ಏನನ್ನಾದ್ರೂ ಸಾಧಿಸಬೇಕು ಈ ಬಡತನದಿಂದ ಹೊರಬರಬೇಕು, ನನ್ನ ಫ್ಯಾಮಿಲಿ ಜೊತೆ ನಾಲ್ಕು ಜನಕ್ಕೆ ಅನುಕೂಲವಾಗುವಂತ ಕೆಲಸ ಏನಾದ್ರು ಮಾಡಬೇಕು ಎಂಬುದಾಗಿ ಅಂದುಕೊಂಡು ಕಷ್ಟ ಪಟ್ಟು ಓದಿ UPSC ಪರೀಕ್ಷೆಯಲ್ಲಿ ಪಾಸ್ ಆಗಿ ಇವತ್ತು IAS ಅಧಿಕಾರಿಯಾಗಿದ್ದಾರೆ.
ಹೌದು ಇವರ ಹೆಸರು ಜೈ ಗಣೇಶ್ ಎಂಬುದಾಗಿ ಮೂಲತಃ ತಮಿಳುನಾಡಿನವರು ಸತತ ೭ನೆ ಬಾರಿ ಐಎಎಸ್ ಪಾಸ್ ಮಾಡಿದ್ದಾರೆ. ಹೌದು ಯಾವುದೇ ಕೋಚಿಂಗ್ ಇಲ್ಲದೆ ಹೋಟೆಲ್ ನಲ್ಲಿ ಸಪ್ಲೈಯರ್ ಕೆಲಸ ಮಾಡುವ ಜೊತೆಗೆ UPSC ಪರೀಕ್ಷೆ ತಯಾರಿ ನಡೆಸುತ್ತಿದ್ದರು ಆದ್ರೆ ಅವರಿಗೆ ಅಷ್ಟು ಸುಲಭವಾಗಿ ಯಶಸ್ಸು ಸಿಗಲ್ಲ. ಸತತ 5 ರಿಂದ 6 ಬಾರಿ ಫೇಲ್ ಆಗುತ್ತಾರೆ ನಂತರ 7ನೆ ಬಾರಿ ಛಲ ಬಿಡದೆ ಯಶಸ್ಸು ಗಳಿಸುತ್ತಾರೆ.
UPSC ಪರೀಕ್ಷೆಯಲ್ಲಿ ಪಾಸ್ ಆಗುವುದು ಅಷ್ಟು ಸುಲಭದ ಮಾತಲ್ಲ ಯಾಕೆಂದರೆ ಈ ಪರೀಕ್ಷೆಯನ್ನು ಲಕ್ಷಾಂತರ ಮಂದಿ ಬರೆಯುತ್ತಾರೆ, ಅದರಲ್ಲೂ ಬಡತನದಿಂದ ಬಂದ ಈ ಜೈ ಗಣೇಶ್ ಅವರಿಗೆ ಇನ್ನೂ ಕಷ್ಟದ ಹಾದಿಯಾಗುತ್ತದೆ. ಕೆ.ಜಯಗಣೇಶ್ ತಮಿಳುನಾಡಿನವರು. ಅವರು ವೆಲ್ಲೂರಿನ ತಂತೈ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ತಮ್ಮ ಬಿ.ಟೆಕ್ ಪದವಿಯನ್ನು ಪೂರ್ಣಗೊಳಿಸಿದರು. ಅವರು ತಮ್ಮ ನಾಲ್ಕು ಒಡಹುಟ್ಟಿದವರಲ್ಲಿ ಹಿರಿಯರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದ ಜವಾಬ್ದಾರಿಯೂ ಅವರ ಮೇಲಿತ್ತು.
ಕೆ.ಜೈಗಣೇಶ್ ಅವರು ತಮ್ಮ ಗ್ರಾಮದಲ್ಲಿ ಮೂರು ಬಾರಿ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಸಲ್ಲಿಸಿದರು ಆದರೆ ಮೂರು ಬಾರಿ ಅನುತ್ತೀರ್ಣರಾದ ನಂತರ ಅವರು ತಮ್ಮ ಹಳ್ಳಿಯನ್ನು ತೊರೆದು ಚೆನ್ನೈಗೆ ಹೋಗಬೇಕು ಎಂದು ಅರಿತುಕೊಂಡರು ಮತ್ತು ಅಲ್ಲಿಂದ ಅವರು ತಮ್ಮ ಸಿದ್ಧತೆಯನ್ನು ಚುರುಕುಗೊಳಿಸಿದರು. ಈ ಪರಿಸ್ಥಿತಿಯಲ್ಲಿ ಅಣ್ಣಾನಗರ ತಲುಪಿ ಅಖಿಲ ಭಾರತ ಸರ್ಕಾರಿ ಸಂಸ್ಥೆಯಲ್ಲಿ ಐಎಎಸ್ ಪ್ರವೇಶ ಪಡೆದರು. ಐಎಎಸ್ ಅಧಿಕಾರಿಯಾಗುವ ಮೊದಲು ಜೀವನದಲ್ಲಿ ಸಾಕಷ್ಟು ಕಷ್ಟ ಪಟ್ಟು ಛಲ ಬಿಡದೆ ತನ್ನ ಗುರಿಯನ್ನು ಮುಟ್ಟಿದ್ದಾರೆ. ಇವರ ಲೈಫ್ ಸ್ಟೋರಿ ನಿಜಕ್ಕೂ ಬಹಳಷ್ಟು ಜನಕ್ಕೆ ಸ್ಪೂರ್ತಿಯಾಗಲಿದೆ. ಎಲ್ಲ ಸೌಲಭ್ಯ ವಿದ್ದು ಸರಿಯಾಗಿ ಓದದೇ ಇರುವಂತ ಜನಗಳ ಮಧ್ಯೆ ಇವರು ಏನು ಇಲ್ಲದೆ ಯಶಸ್ಸು ಗಳಿಸುವುದು ನಿಜಕ್ಕೂ ಗ್ರೇಟ್ ಅಲ್ಲವೇ..