ಎಲ್ಲಾ ಜನರಿಗೆ ಅವರವರ ಕೂದಲು ತುಂಬಾ ದಟ್ಟವಾಗಿ ಕಪ್ಪಾಗಿ , ಉದ್ದವಾಗಿ ಇರಬೇಕು ಎಂದು ಬಹಳ ಆಸೆ ಇರುತ್ತೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು , ಬಿಳಿಕೂಡಲು ಹುಟ್ಟಿಕೊಳ್ಳುವುದು ಸಾಮಾನ್ಯವಾಗಿದೆ. ಅಂತವರಿಗೆಲ್ಲ ಮನೆಯಲ್ಲಿ ಕೂದಲು ಉದುರುವ ಸಮಸ್ಯೆಗೆ ಸುಲಭ ಪರಿಹಾರ ಏನು? ಹೇಗೆ ಮಾಡೋದು ಅನ್ನೋದನ್ನ ನೋಡೋಣ.
ಇದನ್ನ ಮಾಡೋಕೆ ಮುಖ್ಯವಾಗಿ ಬೇಕಿರುವುದು ಅಕ್ಕಿ. ಒಂದು ಕಪ್ ಅಕ್ಕಿಯನ್ನು ಒಂದು ಪಾತ್ರೆಗೆ ತೆಗೆದುಕೊಂಡು ಅಕ್ಕಿ ನೆನೆಯುವಷ್ಟು ನೀರು ಹಾಕಿ 20 ನಿಮಿಷ ನೆನೆಯಲು ಬಿಡಬೇಕು. ನಂತರ ಅಕ್ಕಿಯನ್ನು ಚೆನ್ನಾಗಿ ತೊಳೆದು ಅದನ್ನು ಒಂದು ಬಾಟಲ್ ನಲ್ಲಿ ಹಾಕಿಟ್ಟುಕೊಳ್ಳಬೇಕು. ನಂತರ ಇದನ್ನು ಹಾಗೆಯೂ ಬಳಸಬಹುದು. ಇನ್ನೂ ಹೆಚ್ಚಿನ ಪರಿಣಾಮ ಬೇಕಿದ್ದಲ್ಲಿ ಇದನ್ನು ಹಾಗೆ ಒಂದು ದಿನ ಪೂರ್ತಿ ಹಾಗೆ ಇಡಬೇಕು.
ಕಂಡೀಶನರ್ ರೂಪದಲ್ಲಿ ಬಳಸುವುದಾದರೆ ಶಾಂಪೂ ಇಂದ ತಲೆ ಸ್ನಾನ ಆದಮೇಲೆ ಇದನ್ನು ಒಂದು ಸ್ಪ್ರೇ ಬಾಟಲ್ ಗೆ ಹಾಕಿ ಸ್ಪ್ರೇ ಮಾಡಿಕೊಂಡು ಒಂದೆರಡು ನಿಮಿಷ ಬಿಟ್ಟು ಕೂದಲು ತೊಳೆಯಬಹುದು. ಇಲ್ಲವಾದಲ್ಲಿ ಬಹಳ ಕೂದಲು ಉದುರುತ್ತಾ ಇದ್ದರೆ ಒಂದು ಬೌಲ್ ಗೆ ನಿಮಗೆ ಬೇಕಿದ್ದಷ್ಟು ಅಕ್ಕಿ ನೀರು ತೆಗೆದುಕೊಂಡು ಅದಕ್ಕೆ ಆನಿಯನ್ ಎಸ್ಸೆನ್ಷಿಯಲ್ ಆಯಿಲ್ ಅನ್ನು ಎರಡು ಮೂರು ಹನಿ ಹಾಕಬೇಕು. ಇದಿಲ್ಲವಾದಲ್ಲಿ ಅರ್ಧ ಈರುಳ್ಳಿಯನ್ನು ನೀರು ಹಾಕದೆ ಮಿಕ್ಸಿಯಲ್ಲಿ ರುಬ್ಬಿಕೊಂಡು ಅದರ ರಸವನ್ನು ಸಹ ಹಾಕಬಹುದು. ನಂತರ ಕೊನೆಯಲ್ಲಿ ಒಂದು ಟೀ ಸ್ಪೂನ್ ಕೊಬ್ಬರಿ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ ಕೂದಲು ಉದುರುವ ಕಡೆ ಹತ್ತಿಯ ಸಹಾಯದಿಂದ ಹಚ್ಚಬೇಕು. ಇದನ್ನು ತಲೆ ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಹಚ್ಚಿಕೊಂಡು ನಂತರ ತಲೆ ಸ್ನಾನ ಮಾಡಬೇಕು.
ತಲೆಯಲ್ಲಿ ತುರಿಕೆ , ಹೊಟ್ಟು ಇರುವವರು ಇದನ್ನು , ಒಂದು ಬೌಲ್ ಗೆ ಬೇಕಾದಷ್ಟು ಅಕ್ಕಿ ನೀರು ತೆಗೆದುಕೊಂಡು ಅದಕ್ಕೆ 1 ಟೀ ಸ್ಪೂನ್ ಅಷ್ಟು ನಿಂಬೆ ರಸ ಬೆರೆಸಿ ತಲೆ ಸ್ನಾನ ಮಾಡಲು ಅರ್ಧ ಗಂಟೆ ಮೊದಲು ಹಚ್ಚಿ ನಂತರ ಸ್ನಾನ ಮಾಡಬಹುದು. ಹೀಗೆ ಮಾಡುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ. ಅಕ್ಕಿ ತೊಳೆದ ನೀರು ನಮ್ಮ ಕೂದಲಿಗೆ ಬಹಳ ಒಳ್ಳೆಯದು. ಇದರಲ್ಲಿ ಕಾರ್ಬೋ ಹೈಡ್ರೇಟ್ಸ್ ಹೆಚ್ಚಾಗಿದ್ದು ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಈ ವಿಡಿಯೋ ನೋಡಿ