ಬೋರ್ ವೆಲ್ ಹಾಕಲು ಪರ್ ಫೀಟ್ ಎಷ್ಟು ದುಡ್ಡು ಆಗಬಹುದು?, ಬೋರ್ ವೆಲ್ ಡೆಪ್ತ್ (depth) ಮತ್ತು ಬೋರ್ ವೆಲ್ ಫ್ರಾಡ್ಸ್ (frauds) ಬಗ್ಗೆ ಇಂದು ಮಾಹಿತಿ ತಿಳಿಯೋಣ, ಮನೆ ನಿರ್ಮಾಣ ಮಾಡುವಾಗ ಜನರು ಎಲ್ಲಾ ಅನುಕೂಲ ಬೇಕು ಎಂದು ಸ್ವಂತ ಬೋರ್ವೆಲ್’ಗಳ ಮೊರೆ ಹೋಗುವುದು ಸಹಜ ಆದರೆ, ಎಲ್ಲಾ ಕಡೆ ಬೋರ್ವೆಲ್ ನೀರು ಸಿಗುವುದಿಲ್ಲ. ಅದಕ್ಕೆ, ಸಾಕಷ್ಟು ಕಾರಣಗಳು ಸಹ ಇರುತ್ತವೆ ಜೊತೆಗೆ ಅದೃಷ್ಟ ಕೂಡ. ಇನ್ನು, ಕೆಲವು ಕಡೆ ಕಾವೇರಿ ನೀರು ಮತ್ತು ಬೇರೆ ವಿವಿಧ ಮೂಲಗಳಿಂದ (ಬಿಬಿಎಂಪಿ, ಪಂಚಾಯಿತಿ) ನೀರು ಸಿಗುವ ಕಾರಣ ಬೋರ್ವೆಲ್’ಗಳ ಅವಶ್ಯಕತೆ ಕಮ್ಮಿ.
ಇನ್ನು, ಅನಗತ್ಯವಾಗಿ ಬೋರ್ವೆಲ್ ತೆಗೆಸುವುದರಿಂದ 3 – 4 ಲಕ್ಷ ಹೆಚ್ಚಿನ ಖರ್ಚು ವೆಚ್ಚ ಆಗುತ್ತದೆ. ಇನ್ನು ಮನೆಗೆ ಬೋರ್ವೆಲ್ ಬೇಕೇ ಬೇಕು ಎಂದರೆ ಅದನ್ನು ಸೋಂಪು ಬರುವ ಜಾಗಕ್ಕೆ ಅಡವಳಿಸಿಕೊಂಡರೆ ಒಳ್ಳೆಯದು. ಇನ್ನು ಬೋರ್ ವೆಲ್ ಪಾಯಿಂಟ್ ಮಾಡಲು ವಿವಿಧ ಮೆಥಡ್ ಇರುತ್ತದೆ, ಜಿಯಾಲಜಿಕಲ್ ಮೆಥಡ್ ಈ ಮೆಥಡ್ ಅನುಕರಣೆ ಮಾಡುವುದರಿಂದ 70 – 80% ಅಕ್ಯೂರೇಟ್ ಆಗಿ ಇರುವ ಉತ್ತರ ಸಿಗುತ್ತದೆ, ಟ್ರೆಡಿಷನಲ್ ಮೆಥಡ್ ತೆಂಗಿನಕಾಯಿ, ಕೀ ಚೈನ್ ಈ ರೀತಿಯ ಕೆಲಸ ಮಾಡುವ ಜನರಲ್ಲಿ ಅನುಭವದ ಅಗತ್ಯ ಹೆಚ್ಚಾಗಿ ಇರುತ್ತದೆ ಆ ರೀತಿಯ ಜನರನ್ನು ನೋಡಿ ಇದರಲ್ಲಿ, 50 – 60% ಅಕ್ಯೂರೆಸಿ ಇರುತ್ತದೆ.
ಡ್ರಿಲ್ಲಿಂಗ್ ಮಾಡುವ ವ್ಯಕ್ತಿಗಳು ಬೇರೆ ಕಡೆ ಸಾಕಷ್ಟು ಬೋರ್ವೆಲ್ ಪಾಯಿಂಟ್ ಮಾಡಿರಬೇಕು ಜೊತೆಗೆ ಅವರಿಗೆ ಅನುಭವ ಇರಬೇಕು ಇಲ್ಲದೆ ಹೋದರೆ ಮೋಸ ಹೋಗುವ ಸಾಧ್ಯತೆ ಕೂಡ ಇರುತ್ತದೆ. 1 ಅಡಿಯಿಂದ 250 – 300 ಅಡಿಯವರೆಗೂ ಪರ್ ಫೀಟ್ ₹ 70 – ₹ 80 ಚಾರ್ಜ್ ಇರುತ್ತದೆ. 300 ಅಡಿಯ ನಂತರ ₹ 10 ಹೆಚ್ಚಾಗುತ್ತದೆ. ಮೊದಲಿಗೆ ಸ್ಥಳ ನೋಡುವರು ನೀರು ಬೇಗ ಸಿಗುವುದೇ ಆದರೆ ಪರ್ ಫೀಟ್ ₹ 100 ಚಾರ್ಜ್ ಮಾಡುವರು ಏಕೆಂದರೆ ಟ್ರಾನ್ಪಾರ್ಟ್ ಚಾರ್ಜ್ ಮತ್ತು ಇತರೆ ಖರ್ಚು.
ಉದಾಹರಣೆಗೆ 300 ಫೀಟ್’ಗೆ ನೀರು ಸಿಕ್ಕರು ಇನ್ನು ಬೇರೆ ರೀತಿಯ ವೆಚ್ಚಗಳು ಎದುರಾಗುತ್ತದೆ ಬೋರ್ ವೆಲ್ ಕ್ಯಾಪ್, ಪಿವಿಸಿ ಪೈಪ್’ಗಳು, ಕೇಸಿಂಗ್ ಪೈಪ್ ( ಕಬ್ಬಿಣದ್ದು ) ಇದೆಲ್ಲಾ ಸೇರಿ ₹ 50,000 – ₹ 60,000 ಖರ್ಚು ಬರುವ ಸಾಧ್ಯತೆ ಇದೆ. ಗಾಡಿಯವರಿಗೆ ಟ್ರಾನ್ಪೋರ್ಟ್ ಮತ್ತು ಡ್ರಿಲ್ಲಿಂಗ್ ಮಾಡಲು 27,000 ಆಗಬಹುದು. 300 ಅಡಿ ಪಾಯಿಂಟ್ ಮಾಡಲು 4 – 5 ಹವರ್ಸ್ ಬೇಕು. 300 ಅಡಿ ಡ್ರಿಲ್ ಮಾಡುವುದಾದರೆ 3 ಹೆಚ್ ಬಿ ಪೈಪ್ ಸಾಕಾಗುತ್ತೆ ಅದೇ 500 ಅಡಿ ಆಳವಾಗಿ ಹೋಗುವುದಾದರೆ 5 ಹೆಚ್ ಬಿ ಪೈಪ್ ಬೇಕಾಗುತ್ತದೆ.
ಡ್ರಿಲ್ಲಿಂಗ್’ಗೆ ₹ 50,000 ಖರ್ಚು ಆಗುತ್ತದೆ. ಅದರ ನಂತರ ₹ 70,000 – ₹ 80,000 ಖರ್ಚು ಆಗುತ್ತದೆ ಮೋಟಾರ್, ಸ್ಟಾರ್ಟರ್ ಬಾಕ್ಸ್, ಪ್ಯಾನೆಲ್ ಬೋರ್ಡ್, ಕೇಬಲ್ ವೈಯರ್ 4 ಸ್ಕ್ವೇರ್ ಎಂ ಎಂ. ( square mm ) ಈ ರೀತಿ. 1,000 ಫೀಟ್ ಬೋರ್ವೆಲ್ ಪಾಯಿಂಟ್ ಮಾಡಲು ₹ 1,00,000 – ₹ 1,50,000 ಖರ್ಚಾಗುವ ಸಾಧ್ಯತೆ ಇದೆ. ಪಂಚಾಯಿತಿ ಪರ್ಮಿಷನ್ ಪಡೆದುಕೊಳ್ಳಲು ₹ 10,000 – ₹ 15,000 ಕೊಟ್ಟು ಲೆಟರ್ ಪಡೆಯಬೇಕು ಬೋರ್ವೆಲ್ ಪಾಯಿಂಟ್ ಮಾಡಿಸಲು.
ಸಿಟಿ ಲಿಮಿಟ್’ಗೆ ಬಂದರೆ ಜಿಯಾಲಾಜಿಕಲ್ ಕಡೆಯಿಂದ ಲೆಟರ್ ಪಡೆಯಬೇಕಾಗುತ್ತದೆ. ಪೊಲೀಸ್ ಕಡೆಯಿಂದ ಕೂಡ ಪರ್ಮಿಷನ್ ಪಡೆಯಬೇಕು ಅದರ ಜೊತೆಗೆ ಲೇಔಟ್ ಆಗಿದ್ದರೆ. ಅವರಿಂದ, ಕೂಡ ಪರ್ಮಿಷನ್ ಪಡೆದುಕೊಳ್ಳುವುದು ಉತ್ತಮ. ಕೇಸಿಂಗ್ ಪೈಪ್ ತಿಕ್ನೆಸ್ ( thickness ) ನೋಡಿ ಪಡೆಯಬೇಕು 1.8mm ಯಿಂದ ಶುರು ಆಗುತ್ತದೆ ಹೆವಿ ( heavy ) ಎಂದರೆ 3mm ತನಕ ಸಿಗುತ್ತದೆ. ಡ್ರಿಲ್ ಮಾಡುವ ಸಮಯದಲ್ಲಿ ಬಂಡೆಕಲ್ಲು ಸಿಕ್ಕರೆ ಅದನ್ನು 5 ಅಡಿಯಷ್ಟು ಡ್ರಿಲ್ ಮಾಡಿಸಬೇಕು ನಂತರ ಕೇಸಿಂಗ್ ಹಾಕುವುದು ಒಳ್ಳೆಯದು.
ಕೇಸಿಂಗ್ ಪೈಪ್ ಅನ್ನು ಸರಿಯಾಗಿ ಪರೀಕ್ಷೆ ಮಾಡಿ ನಂತರ ಖರೀದಿ ಮಾಡಬೇಕು ಇಲ್ಲದೆ, ಹೋದರೆ ಮೋಸ ಹೋಗುವ ಸಾಧ್ಯತೆ ಇದೆ. ಪಿವಿಸಿ ಪೈಪ್ 10 ಇಂಚ್ ಬೇಕಾಗಬಹುದು ಅದರ ಒಳಗೆ ಕೇಸಿಂಗ್ ಪೈಪ್ ಹಾಕಲಾಗಿರುತ್ತದೆ. ನೀರು ಸಿಕ್ಕ ತಕ್ಷಣ ಡ್ರಿಲ್ಲಿಂಗ್ ನಿಲ್ಲಿಸಬಾರದು ಇನ್ನೂ 1 ಲೆಂತ್ ಇಲ್ಲವೇ 2 ಲೆಂತ್ ಆಳಕ್ಕೆ ಹೋಗಬೇಕು. ನೀರು ಹೆಚ್ಚು ಪ್ರೆಷರ್’ನಲ್ಲಿ ಬಂದಷ್ಟು ಬೋರ್ವೆಲ್ ಪಾಯಿಂಟ್ ಯಶಸ್ವಿಯಾಗಿದೆ ಹೆಚ್ಚು ನೀರು ದೊರಕುತ್ತದೆ ಎಂದು ಅರ್ಥ. ಹೊರಗೆ ಅಳವಳಿಕೆ ಮಾಡುವ ಪೈಪ್ ಯಾವ ರೀತಿ ಇರಬೇಕು ಎಂದರೆ ವ್ಯವಸಾಯಕ್ಕೆ ನೀರನ್ನು ಬಳಕೆ ಮಾಡುವುದಾದರೆ ದೊಡ್ಡ ಪೈಪ್ ಅಡವಳಿಸಬಹುದು ಅದೇ ,ಮನೆಯ ಬಳಕೆಗೆ ಅಗತ್ಯ ಇರುವ ಹಾಗೆ ಪೈಪ್ ಅಡವಳಿಕೆ ಮಾಡಬೇಕು. ಇದರಿಂದ, ಹೆಚ್ಚಿನ ನೀರು ಪೋಲು ಆಗುವುದಿಲ್ಲ