ರಾಜ್ಯ ಸರ್ಕಾರ 1,500 ಪೊಲೀಸ್‌ ಹುದ್ದೆ ಭರ್ತಿಗೆ ಸಮ್ಮತಿಸಿದೆ. ಈ ಬಗ್ಗೆ ನೂತನ‌ ವಿಚಾರವನ್ನು ತಿಳಿಯೋಣ. ಆದರೆ, ಕಳೆದ ವರ್ಷ ಹೇಳಿದ್ದ 6,000 ಪೇದೆಗಳ ನೇಮಕ ಕ್ರಮದ ಬಗ್ಗೆ ಯಾವುದೇ ಪ್ರಗತಿ ಗೃಹ ಇಲಾಖೆ ಕಡೆಯಿಂದ ನಡೆದಿರುವಂತೆ ಕಾಣಿಸುತ್ತಿಲ್ಲ. 6,000 ಪೇದೆಗಳ ನೇಮಕದಲ್ಲಿ ಯಾವುದೇ ಪ್ರಗತಿ ಇಲ್ಲ. ಹೊಸ 400 ಪಿಎಸ್‌ಐ’ಗೆ (PSI) ಪ್ರಸ್ತಾವನೆ ಸಿದ್ದವಾಗಿದೆ ಎಂದಿದ್ದರು ಸಚಿವರು. ಸದ್ಯಕ್ಕೆ 1,500 ಪೊಲೀಸ್‌ ಭರ್ತಿಗೆ ಸರ್ಕಾರ ಸಮ್ಮತಿ ನೀಡಿದೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ರಾಜ್ಯ ಮೀಸಲು ಪೊಲೀಸ್ (KSRP), ಆರ್‌ಪಿಸಿ (RPC) ವಿಭಾಗದಲ್ಲಿ ಖಾಲಿ ಇರುವ 1,500 ಹುದ್ದೆಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ.

2023-24 ನೇ ಸಾಲಿನ ಕೆಎಸ್‌ಆರ್‌ಪಿ (KSRP), ಆರ್‌ಪಿಸಿ ( ಪುರುಷ ಮತ್ತು ಮಹಿಳಾ 1,500 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ಇದರಲ್ಲಿ, ಕ್ರೀಡಾ ಪಟುಗಳಿಗೆ ಶೇಕಡ. 2, ಕಲ್ಯಾಣ ಕರ್ನಾಟಕೇತರ ಒಟ್ಟು 30 ಹುದ್ದೆಗಳು, ಸಿಆರ್‌ಪಿಸಿ (CRPC) ಕಲ್ಯಾಣ ಕರ್ನಾಟಕ 614 ಹುದ್ದೆಗಳಲ್ಲಿ 12 ಹುದ್ದೆಗಳು ಕ್ರೀಡಾಪಟುಗಳಿಗೆ ಶೇಕಡ. 2 ರಂತೆ ಮೀಸಲು ಇರಿಸಲಾಗಿದೆ. ಇನ್ನು ಉಳಿದ 1,470 ಆರ್‌ಪಿಸಿ (RPC) ಕಲ್ಯಾಣ ಕರ್ನಾಟಕೇತರ ಮತ್ತು ಕಲ್ಯಾಣ ಕರ್ನಾಟಕ 602 ಆರ್‌ಪಿಸಿ (RPC) ಹುದ್ದೆಗಳಿಗೆ ನೇರ ಮತ್ತು ಸಮತಲ ವರ್ಗೀಕರಣವನ್ನು ಸರ್ಕಾರ ಆದೇಶಿಸಿದೆ.

3,064 ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಯ ಪರೀಕ್ಷೆ ಅಂಕ ಪ್ರಕಟ. 2022ನೇ ಸಾಲಿನಲ್ಲಿ ಅಧಿಸೂಚಿಸಿದ್ದ 3,064 ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ನಿನ್ನೆಯಷ್ಟೇ ಪೊಲೀಸ್‌ ಇಲಾಖೆಯು ಲಿಖಿತ ಪರೀಕ್ಷೆಗಳ ಅಂಕಗಳನ್ನು ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ 20,000 ಪೊಲೀಸ್‌ ಹುದ್ದೆಗಳು ಖಾಲಿ
ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಬರೋಬರಿ ಇನ್ನು 20,000 ಹುದ್ದೆಗಳು ಖಾಲಿ ಇವೆ. ಇವುಗಳ ಪೈಕಿ 2,500 ಪೇದೆಗಳ ನೇಮಕಕ್ಕೆ ಆರ್ಥಿಕ ಇಲಾಖೆ ಕಳೆದ 2023 ರಲ್ಲೇ ಅನುಮೋದನೆ ನೀಡಿದೆ.

ಈ ಹುದ್ದೆಗಳ ನೇಮಕಕ್ಕೆ ಇನ್ನೂ ಅಧಿಕೃತ ಚಾಲನೆ ಸಿಕ್ಕಿಲ್ಲ. ಅಲ್ಲದೇ 3,500 ಪೊಲೀಸ್‌ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದರು. ಆದರೆ, ಅದರ ಕುರಿತು ಸಹ ಯಾವುದೇ ಮಾಹಿತಿ ಇನ್ನು ಲಭ್ಯವಿಲ್ಲ.

ಹೀಗೆ ಒಟ್ಟು 6,000 ಪೇದೆಗಳ ನೇಮಕ ಕ್ರಮದ ಬಗ್ಗೆ ಒಂದು ವರ್ಷದ ಹಿಂದೆಯೇ ಸುದ್ದಿ ನೀಡಲಾಗಿತ್ತು. ಆದರೆ, ಯಾವುದೇ ಪ್ರಗತಿ ಈ ಹುದ್ದೆಗಳ ಭರ್ತಿ ಕಾರ್ಯದಲ್ಲಿ ಗೃಹ ಇಲಾಖೆಯಿಂದ ಆಗಿಲ್ಲ. ಅಲ್ಲದೇ 10 ಸಾವಿರ ಪೇದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಕುರಿತು ಸಚಿವರು ಹೇಳಿದ್ದರು. ಇನ್ನು, ಅದು ಕೂಡ ಪ್ರಗತಿಯ ಹಾದಿ ಹಿಡಿದಿಲ್ಲ. ಇದನ್ನು ಗಮನಿಸಿರುವ ಕರ್ನಾಟಕ ನಿರುದ್ಯೋಗಿಗಳು ಮತ್ತು ಪೊಲೀಸ್‌ ಉದ್ಯೋಗ ಆಕಾಂಕ್ಷಿಗಳು ಅಸಮಾಧಾನ ಹೊರಹಾಕಿದ್ದಾರೆ.

ಹೊಸ 400 ಪಿಎಸ್‌ಐ’ಗೆ (PSI) ಪ್ರಸ್ತಾವನೆ ಸಿದ್ದವಾಗಿದೆ ಎಂದಿದ್ದ ಗೃಹ ಸಚಿವರು ಡಾ. ಪರವೇಶ್ವರ್‌ ರವರು ಕಳೆದ ವರ್ಷವೇ 4,000 ಪಿಎಸ್‌ಐ (PSI) ನೇಮಕಕ್ಕೆ ಪ್ರಸ್ತಾವನೆ ಸಿದ್ಧವಾಗಿದೆ, ಆದರೆ 545 ಪಿಎಸ್‌ಐ’ಗೆ (PSI) ಪರೀಕ್ಷೆ ಬರೆದವರು ಸೇವಾ ಹಿರಿತನ ಹೋಗುತ್ತದೆ ಎಂಬ ಕಾರಣಕ್ಕೆ ಮತ್ತೆ ನ್ಯಾಯಾಲಯಕ್ಕೆ ಮೊರೆ ಹೋಗುವ ಸಾಧ್ಯತೆ ಇರುವುದರಿಂದ ಸದ್ಯಕ್ಕೆ ಈ ಪ್ರಕ್ರಿಯೆ ತಡೆ ಹಿಡಿದಿದ್ದೇವೆ. ಈ ಕೊರತೆ / ಸೇವೆ ತುಂಬುವ ಹಿನ್ನೆಲೆಯಲ್ಲಿ ಎಎಸ್‌ಐಗಳಿಗೆ (ASI) ಬಡ್ತಿ ನೀಡಲು ಕಡತ ಸಿದ್ಧವಾಗುತ್ತಿದೆ. 700 ಎಎಸ್‌ಐಗಳಿಗೆ (ASI) ಬಡ್ತಿ ಸಿಕ್ಕಲ್ಲಿ ಅವರ ಕೆಳಹಂತದ ಮುಖ್ಯ ಪೇದೆ ಹಾಗೂ ಪೇದೆಗಳಿಗೂ ಬಡ್ತಿ ಸಿಗಲಿದೆ ಎಂದು ಹೇಳಿದ್ದರು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!