ಪ್ರತಿ ತಿಂಗಳು, ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸಿ ಅಂತಿಮವಾಗಿ ಅದರ ಬೆಲೆಯನ್ನು ಘೋಷಿಸುತ್ತವೆ. ಹೆಚ್ಚಿನ ಅಥವಾ ಕಡಿಮೆ ಬೆಲೆಗೆ ಕಾರಣವಾಗುವ ಹಲವು ಅಂಶಗಳಿವೆ.
ದೇಶದಲ್ಲಿ LPG ಸಿಲಿಂಡರ್ ಬಳಕೆದಾರರಿಗೆ ಬೆಲೆ ಏರಿಕೆಯ ಸಂದರ್ಭದಲ್ಲಿ ಸಹಾಯ ಮಾಡಲು ಕೇಂದ್ರ ಸರ್ಕಾರವು ಸಬ್ಸಿಡಿಗಳನ್ನು ಯೋಜನೆಯ ರೂಪದಲ್ಲಿ ಜಾರಿಗೆ ತಂದಿದೆ. ಜೂನ್ 1 ರಿಂದ ಹೊಸ ನಿಯಮಗಳು ಜಾರಿಗೆ ಬರುತ್ತಿದ್ದಂತೆ ಎಲ್ಪಿಜಿ ಸಿಲಿಂಡರ್ ಬಳಕೆದಾರರಿಗೆ ಇದು ಪ್ರಮುಖ ಸುದ್ದಿಯಾಗಿದೆ.
ಜೂನ್ 1 ರಿಂದ ಹೊಸ ನಿಯಮಗಳು ಅನ್ವಯವಾಗುತ್ತವೆ, ಉಜ್ವಲ ಯೋಜನೆಯಡಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ಹೊಂದಿರುವವರಿಗೆ ಕೇಂದ್ರ ಸರ್ಕಾರವು ರೂ 300 ಸಬ್ಸಿಡಿ ನೀಡುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ. ಹಾಗಾಗಿ ಈ ಸಬ್ಸಿಡಿ ಪಡೆಯಲು ನಿಮ್ಮ ಎಲ್ಪಿಜಿ ಗ್ಯಾಸ್ ಸಿಂಡರ್ eKYC ಮಾಡಿಸುವುದು ಕೂಡ ಕಡ್ಡಾಯವಾಗಿದೆ.
ಹೌದು ಇನ್ನೇನು ಜೂನ್ ತಿಂಗಳಲ್ಲಿ ಎಲೆಕ್ಷನ್ ರಿಸಲ್ಟ್ ನಂತರ ಗ್ಯಾಸ್ ಬೆಲೆಯಲ್ಲಿ ಕಡಿಮೆಯಾಗಲಿದೆ ಅಂದರೆ 900 ರೂಪಾಯಿ ಇರುವ ಗ್ಯಾಸ್ ಬೆಲೆ 300 ರೂಪಾಯಿ ಸಬ್ಸಿಡಿ ಸಿಕ್ಕರೆ, 600 ರೂಪಾಯಿ ಇದರ ನಿಗದಿತ ಬೆಲೆಯಲ್ಲಿ ನಿಮಗೆ ಈ ಸೌಲಭ್ಯ ಸಿಗಲಿದೆ ಹಾಗಾಗಿ ನಿಮ್ಮ ಹತ್ತಿರದ ಗ್ಯಾಸ್ ಆಫೀಸ್ ಗೆ ಹೋಗಿ eKYC ಮಾಡಿಸಿಕೊಳ್ಳಿ