petrol bunk business investment: ವಾಹನ ಮುಂದೆ ಸಾಗಲು ಬೇಕಿರುವುದು ಪೆಟ್ರೋಲ್, ಡೀಸೆಲ್. ಆಧುನಿಕತೆಗೆ ತಕ್ಕಂತೆ ಎಲೆಕ್ಟ್ರಿಕ್ ಗಾಡಿಗಳು ಇರಬಹುದು. ಆದ್ರೆ, ತುಂಬಾ ದೂರ ಹೋಗಬೇಕು ಎಂದರೆ ಪೆಟ್ರೋಲ್ ಬೇಕೇಬೇಕು. ಅದೇ ರೀತಿ, ಪೆಟ್ರೋಲ್ ಪಂಪ್ ಬ್ಯುಸಿನೆಸ್ (petrol bunk business) ಮಾಡುವುದರಿಂದ ಹೆಚ್ಚಿನ ಲಾಭ ಕೂಡ ಸಿಗುತ್ತದೆ.
ಭಾರತದಲ್ಲಿ ಒಟ್ಟು 66,408 ಪೆಟ್ರೋಲ್ ಪಂಪ್’ಗಳು ಇದೆ. ಹೆಚ್ಚಿಗೆ ಸರ್ಕಾರಿ ಸೆಕ್ಟರ್ ( sector ) ಕೆಳಗೆ ಇದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (Indian Oil Corporation Ltd.), ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್, (Bharath Petroleum Corporation Ltd.), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (Hindustan Petroleum Corporation Ltd) ಇನ್ನು, ಕೆಲವು ಪ್ರೈವೇಟ್ ಸೆಕ್ಟರ್ ಪೆಟ್ರೋಲ್ ಪಂಪ್’ಗಳು ಇದ್ದಾವೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Ltd.), ನೈಯಾರ ಎನರ್ಜಿ (Nayara Energy).
ಮೊದಲೆಲ್ಲ ಪೆಟ್ರೋಲ್ ಪಂಪ್ ಬ್ಯುಸಿನೆಸ್ ಶುರು ಮಾಡಲು ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳು ಕಟ್ಟು ನಿಟ್ಟಾಗಿ ಇತ್ತು. ಈಗ ಸರ್ಕಾರ ಷರತ್ತುಗಳನ್ನು ಸ್ವಲ್ಪ ಸಡಿಲ ಮಾಡಿದೆ. ಪೆಟ್ರೋಲ್ ಪಂಪ್ ಸ್ಥಾಪನೆ ಮಾಡಲು ಲೈಸೆನ್ಸ್ ಪಡೆಯುವುದು ಅತ್ಯಗತ್ಯ ಮತ್ತು ಪ್ರಮುಖವಾದದ್ದು ( it’s mandatory). ಇದರಲ್ಲಿ ಎರಡು ಅಂತ ಇರುತ್ತದೆ ಮೊದಲ ಅಂತ ಪೂರ್ಣಗೊಳಿಸುವ ಅರ್ಹ ವ್ಯಕ್ತಿಗಳಿಗೆ ಮಾತ್ರ ಇನ್ನೊಂದು ಅಂತ ತಲುಪಲು ಸಾಧ್ಯ.
ಮೊದಲ ಅಂತ :-
- ಭಾರತೀಯ ಪ್ರಜೆಯಾಗಿ ಇರಬೇಕು.
- 21 – 55 ವಯೋಮಿತಿಯ ವ್ಯಕ್ತಿಯಾಗಿ ಇರಬೇಕು.
- ಹಳ್ಳಿಯಲ್ಲಿ ವಾಸ ಮಾಡುವ ವ್ಯಕ್ತಿ ಪೆಟ್ರೋಲ್ ಪಂಪ್ ಸ್ಥಾಪನೆ ಮಾಡಲು ದ್ವಿತೀಯ ಪಿಯುಸಿ ಉತ್ತೀರ್ಣರಾಗಿ ಇರಬೇಕು.
- SC/ST/OBC ವರ್ಗಕ್ಕೆ ಸೇರಿದವರು 10ನೇ ತರಗತಿ ಉತ್ತೀರ್ಣರಾಗಿ ಇರಬೇಕು.
- ನಗರ ಪ್ರದೇಶದಲ್ಲಿ ವಾಸ ಮಾಡುವ ವ್ಯಕ್ತಿ ಪೆಟ್ರೋಲ್ ಪಂಪ್ ಸ್ಥಾಪನೆ ಮಾಡಲು ಡಿಗ್ರಿ ಉತ್ತೀರ್ಣರಾಗಿ ಇರಬೇಕು.
- ಒಂದು ವೇಳೆ ಸ್ವಾತಂತ್ರ್ಯ ಹೋರಾಟ ಮಾಡುವ ಜನರಾಗಿ ಇದ್ದರೆ ಅವರಿಗೆ ಮೇಲಿನ ಯಾವ ನಿಯಮಗಳು ಅನ್ವಯ ಆಗುವುದಿಲ್ಲ.
ಎರಡನೇ ಅಂತ :-
ಕನಿಷ್ಠ ಬಂಡವಾಳ ಹೂಡಿಕೆ ಮಾಡಲು ಸಿದ್ಧರಾಗಿ ಇರಬೇಕು.
ಗ್ರಾಮೀಣ ಪ್ರದೇಶದಲ್ಲಿ ಪೆಟ್ರೋಲ್ ಪಂಪ್ ಸ್ಥಾಪನೆ ಮಾಡಲು ₹12 ಲಕ್ಷ.
ನಗರ ಪ್ರದೇಶದಲ್ಲಿ ಪೆಟ್ರೋಲ್ ಪಂಪ್ ಸ್ಥಾಪನೆ ಮಾಡಲು ₹25 ಲಕ್ಷ.
ಅರ್ಹತೆ ಇರುವ ವ್ಯಕ್ತಿಯ ಬಳಿ ಸ್ವಂತ ಜಾಗ ಇರಬೇಕು. ಇಲ್ಲವೇ ಜಾಗವನ್ನು ಗುತ್ತಿಗೆ (lease) ಪಡೆದರೆ ಅದರ 3 ವರ್ಷದ ಅಗ್ರೀಮೆಂಟ್ ಇರಬೇಕು.
ಇನ್ನು ಜಾಗ ಸ್ಟೇಟ್ ಹೈವೇ ಇಲ್ಲವೇ ಮಾರ್ಕೆಟ್ ಜಾಗದ ಹತ್ತಿರ ಇರಬೇಕು.
ಹೈವೇ ಕಡೆ ಪೆಟ್ರೋಲ್ ಪಂಪ್ ಸ್ಥಾಪನೆ ಮಾಡಲು ₹800 – ₹1200 ಸ್ಕ್ವಯರ್ ( square ) ಮೀಟರ್ ಜಾಗ ಬೇಕು
ಅರ್ಜಿ ಶುಲ್ಕ ಗುತ್ತಿಗೆ ಜಾಗಕ್ಕೆ :-
ರೆಗ್ಯುಲರ್ ಔಟ್ಲೆಟ್’ಗಳಿಗೆ – ₹1,000
ಗ್ರಾಮೀಣ ಭಾಗದ ಔಟ್ಲೆಟ್’ಗಳಿಗೆ – ₹100
SC/ST ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ 50% ಕಡಿಮೆ.
ಅರ್ಜಿ ಶುಲ್ಕ ಸ್ವಂತ ಜಾಗಕ್ಕೆ :– ಡೆಪಾಸಿಟ್
ರೆಗ್ಯುಲರ್ ಔಟ್ಲೆಟ್’ಗಳಿಗೆ – ₹15,00,000
ಗ್ರಾಮೀಣ ಭಾಗದ ಔಟ್ಲೆಟ್’ಗಳಿಗೆ – ₹5,00,000
ಈ ಡೆಪಾಸಿಟ್ ಹಣ ಮರಳಿ ಸಿಗುವುದಿಲ್ಲ.
ಒಬ್ಬ ಅರ್ಜಿದಾರ ವ್ಯಕ್ತಿ ಒಂದು ಲೊಕೇಷನ್’ಗೆ ಮಾತ್ರ ಅಪ್ಲೈ ಮಾಡಬಹುದು. ಲೈಸೆನ್ಸ್ ಶುಲ್ಕದ ಜೊತೆಗೆ ಅರ್ಜಿಯ ಶುಲ್ಕವನ್ನು ಪಾವತಿ ಮಾಡಬೇಕು.
ಪೆಟ್ರೋಲ್ ಪಂಪ್ ಸ್ಥಾಪನೆ ಮಾಡಲು ಅರ್ಜಿ ಸಲ್ಲಿಸುವ ವಿಧಾನ :-
ಆಯಿಲ್ ಮಾರ್ಕೆಟ್ ಕಂಪನಿ ವೆಬ್ಸೈಟ್’ನಲ್ಲಿ ಪರಿಶೀಲನೆ ಮಾಡಬೇಕು. ಇಲ್ಲ ಪೇಪರ್ ಜಾಹಿರಾತಿನಲ್ಲಿ ಕೂಡ ಪರೀಕ್ಷೆ ಮಾಡಬೇಕು.ಆಯ್ಕೆ ಪ್ರಕ್ರಿಯೆ ಲಾಟ್ರಿ ಮೂಲಕ ನಡೆಯುತ್ತದೆ.ಎಲೆಕ್ಷನ್ ಮುಗಿದ ನಂತರ ಎಲ್ಲಾ ದಾಖಲೆಗಳನ್ನು ಸಬ್ಮಿಟ್ ಮಾಡಬೇಕು. ಪೆಟ್ರೋಲ್ ಪಂಪ್ ಸ್ಥಾಪನೆಗೆ ಅವಕಾಶ ಸಿಕ್ಕ ಮೇಲೆ.
- (GST) ಜಿ.ಎಸ್.ಟಿ. ರಿಜಿಸ್ಟ್ರೇಷನ್ ಮಾಡಬೇಕು.
- ಪೆಟ್ರೋಲ್ ಪಂಪ್ ಹೆಸರಿನಲ್ಲಿ ಕರೆಂಟ್ ಅಕೌಂಟ್ ತೆರೆಯಬೇಕು.
- ಇದರಲ್ಲಿ ಅಧಿಕ ಲಾಭ ಗಳಿಕೆ ಕೂಡ ಮಾಡಬಹುದು.
- ಆಸಕ್ತಿ ಮತ್ತು ಅನುಕೂಲ ಇರುವ ಜನ ಅರ್ಜಿ ಸಲ್ಲಿಕೆ ಮಾಡಬೇಕು.