Canara Bank: ಹಲವು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ನಾವು ಸಾಲವನ್ನು ಪಡೆಯಬಹುದು ಸಾಲ ಪಡೆಯಲು ಕೆಲವು ಷರತ್ತುಗಳಿರುತ್ತವೆ. ಕೆನರಾ ಬ್ಯಾಂಕ್ (Canara Bank) ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ ವಾರ್ಷಿಕವಾಗಿ 3 ಲಕ್ಷ ರೂಪಾಯಿ ಆದಾಯ ಪಡೆಯುತ್ತಿರುವವರಿಗೂ ಕೆನರಾ ಬ್ಯಾಂಕ್ ಕಾರ್ ಲೋನ್ ಕೊಡುತ್ತಿದೆ ಹಾಗಾದರೆ ಕೆನರಾ ಬ್ಯಾಂಕ್ ನೀಡುವ ಕಾರ್ ಲೋನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಭಾರತೀಯ ಜನಪ್ರಿಯ ಬ್ಯಾಂಕಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಅನುಕೂಲವಾಗುವ ಸಾಕಷ್ಟು ಸೌಕರ್ಯವನ್ನು ಒದಗಿಸುತ್ತದೆ ಇದಜೊತೆಗೆ ಮಧ್ಯಮ ವರ್ಗದ ಕುಟುಂಬದವರಿಗೆ ಕಾರ್ ಖರೀದಿ ಮಾಡುವ ಆಸೆಯನ್ನು ಹೊಂದಿದ್ದರೆ ಅದಕ್ಕೆ ಕೆನರಾ ಬ್ಯಾಂಕ್ ಕಾರ್ ಖರೀದಿಗೆ ಸಹಾಯ ಮಾಡಲಿದೆ. ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ಇದ್ದರೂ ಕೂಡ ಕೆನರಾ ಬ್ಯಾಂಕ್ ಅವರಿಗೆ 5 ಲಕ್ಷದವರೆಗೆ ಕಾರ್ ಲೋನ್ ನೀಡುತ್ತದೆ. ಕೆನರಾ ಬ್ಯಾಂಕ್ ನಿಂದ ಲೋನ್ ಪಡೆದು ಕಾರ್ ಖರೀದಿ ಮಾಡಿದರೆ ಪ್ರತಿ ತಿಂಗಳು ಕಡಿಮೆ ಇಎಂಐ ಹಣವನ್ನು ಪಾವತಿ ಮಾಡಬೇಕಾಗುತ್ತದೆ.
ಕಡಿಮೆ ಬಡ್ಡಿ ದರದಲ್ಲಿ ಕೆನರಾ ಬ್ಯಾಂಕ್ ಕಾರ್ ಲೋನ್ ನೀಡುತ್ತಿದೆ. ಕೆನರಾ ಬ್ಯಾಂಕಿನ ಸದ್ಯದ ರೆಪೋ ಲಿಂಕ್ಡ್ ಲೆಂಡಿಂಗ್ ರೇಟ್ ನಲ್ಲಿನ ಇಂಟರೆಸ್ಟ್ ದರವು ಕೇವಲ 10 ಪರ್ಸೆಂಟ್ ಇದ್ದು ಕೆನರಾ ಬ್ಯಾಂಕ್ ನಿಂದ 5 ಲಕ್ಷ ರೂಪಾಯಿ ಲೋನ್ ಪಡೆದರೆ ಹತ್ತು ಪರ್ಸೆಂಟ್ ಬಡ್ಡಿಯ ಆಧಾರದ ಮೇಲೆ ಆರು ಲಕ್ಷದ ತೊಂಭತ್ತೇಳು ಸಾವಿರದ ಇನ್ನೂರೈವತ್ತು ರೂಪಾಯಿ ಹಣವನ್ನು ಮರುಪಾವತಿ ಮಾಡಬೇಕಾಗುತ್ತದೆ. ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಕೇವಲ 10 ಪರ್ಸೆಂಟ್ ಬಡ್ಡಿ ದರದ ಮೇಲೆ ಕೆನರಾ ಬ್ಯಾಂಕನಿಂದ 5 ಲಕ್ಷ ರೂಪಾಯಿವರೆಗೆ ಕಾರ್ ಲೋನ್ ದೊರಕುತ್ತದೆ. ಈ ಮೂಲಕ ಪ್ರತಿ ತಿಂಗಳು 8301 ರೂಪಾಯಿಯನ್ನು 84 ತಿಂಗಳುಗಳ ಕಾಲ ಪಾವತಿ ಮಾಡಬೇಕಾಗುತ್ತದೆ.
ಕಾರ್ ಮೇಲಿನ ಸಾಲ ಸಂಪೂರ್ಣ ಮುಗಿದು ಹೋಗಲು ಏಳು ವರ್ಷ ಹಿಡಿಯುತ್ತದೆ. 5 ಲಕ್ಷಕ್ಕೆ 10% ಬಡ್ಡಿ ಎಂದರೆ 1, 97,250 ರೂಪಾಯಿ ಬಡ್ಡಿ ಹಣವನ್ನು ಪಾವತಿಸಬೇಕಾಗುತ್ತದೆ. ಮಧ್ಯಮ ಕುಟುಂಬದವರಿಗೆ ಕಾರ್ ಖರೀದಿ ಮಾಡುವಷ್ಟು ಹಣ ಅವರ ಬಳಿ ಇರುವುದಿಲ್ಲ ಆದರೆ ಕೆನರಾ ಬ್ಯಾಂಕ್ ನಿಂದ ಆಸೆಯನ್ನು ಈಡೇರಿಸಿಕೊಳ್ಳಬಹುದು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ, ಮಧ್ಯಮ ಕುಟುಂಬದವರು ತಮ್ಮ ಆಸೆಯನ್ನು ಕೆನರಾ ಬ್ಯಾಂಕ್ ನ ಸಹಾಯದಿಂದ ನೆರವೇರಿಸಿಕೊಳ್ಳಬಹುದು ನೀವು ನಿಮ್ಮ ಕಾರ್ ಖರೀದಿ ಆಸೆಯನ್ನು ಕೆನರಾ ಬ್ಯಾಂಕ್ ಜೊತೆಗೆ ಹಂಚಿಕೊಳ್ಳಿ.