ರವಿ ದೊಡ್ಡಾಪುರ ತಾಲೂಕಿನ ಗೌಡಹಳ್ಳಿ ಎಂಬ ಊರಿನವರು ಅವರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿ ಅದಕ್ಕೆ ಅಚ್ಚರಿ ಪಡುವ ಐಡಿಯಾ ಮಾಡಿದ್ದಾರೆ. ರವಿ ಅವರ ಕೃಷಿ ಐಡಿಯಾದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ರೈತರಿಗೆ ಜಮೀನಿನಲ್ಲಿ ನೀರು ಇರುವುದು ಮುಖ್ಯವಾಗಿದೆ. ನೀರಿಲ್ಲದೆ ಇದ್ದರೆ ಜಮೀನಿನಲ್ಲಿ ಬೆಳೆ ಬೆಳೆಯಲು ಸಾಧ್ಯವಿಲ್ಲ. ರವಿ ಎಂಬ ರೈತ ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ಮಾಡಿ ಅದಕ್ಕೆ ಅಪರೂಪದ ಐಡಿಯಾ ಮಾಡಿದ್ದಾರೆ. ಹೊಂಡದಲ್ಲಿ ನೀರನ್ನು ಸಂಗ್ರಹಿಸಿ ಫಿಲ್ಟರ್ ಮಾಡಿ ತಾವು ಬೆಳೆದ ಬೆಳೆಗೆ ಹಾಯಿಸುತ್ತಿದ್ದಾರೆ. ರವಿ ಅವರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ಮಾಡಿ ನೀರು ಸಂಗ್ರಹಿಸಿ ಜಮೀನಿಗೆ ಹರಿಸುತ್ತಿದ್ದಾರೆ. ಕೃಷಿ ಹೊಂಡ ತೆಗೆಯಲು ಸರ್ಕಾರದಿಂದ ಅವರಿಗೆ ಸಬ್ಸಿಡಿ ಸಿಕ್ಕಿದೆ. ಹೊಂಡ ತೋಡಲು ಜೆಸಿಬಿಗೆ 25,000 ಹಣ ಖರ್ಚಾಯಿತು. ಹೊಂಡದಲ್ಲಿ ಫಿಲ್ಟರ್ ಹಾಕಬೇಕಾಗುತ್ತದೆ ಇಲ್ಲವೆಂದರೆ ನೀರು ಗಲೀಜ್ ಬರುತ್ತದೆ ಪಾಚಿ ಕಟ್ಟಿಕೊಳ್ಳುತ್ತದೆ, ಫಿಲ್ಟರ್ ಇರುವುದರಿಂದ ಶುದ್ಧ ನೀರು ಇರುತ್ತದೆ. ಫಿಲ್ಟರ್ ಹಾಕುವುದರಿಂದ ಹೊಂಡದಿಂದ ಹಾಕಿದ ಡ್ರಿಪ್ ಹಾಳಾಗುವುದಿಲ್ಲ ಇಲ್ಲವೆಂದರೆ ಡ್ರಿಪ್ ಪೈಪ್ ನಲ್ಲಿ ಹೋಲ್ ಇರುತ್ತದೆ ಅದು ಜಾಮ್ ಆಗುತ್ತದೆ.
ಹೊಂಡದ ನೀರು ಇಲ್ಲಿಯವರೆಗೂ ಗಲೀಜು ಬಂದಿಲ್ಲ ಹಾಗೆಯೆ 5 ವರ್ಷದಲ್ಲಿ ಒಮ್ಮೆಯೂ ಹೊಂಡವನ್ನು ಸ್ವಚ್ಛ ಮಾಡಿಸಿಲ್ಲ ಮಾಡುವ ಅವಶ್ಯಕತೆಯಿಲ್ಲ. 150 ಕೆಜಿ ಮರಳು ಇರುತ್ತದೆ ಅದರ ಮೇಲೆ ಬಿದ್ದ ನೀರು ಫಿಲ್ಟರ್ ಆಗಿ ಕೆಳಗೆ ಹೋಗಿ ಬರುತ್ತದೆ. ಹೊಂಡದಲ್ಲಿ ನೀರು ಇದ್ದಾಗ ಬೇಗನೆ ಪಾಚಿ ಕಟ್ಟಿಕೊಳ್ಳುತ್ತದೆ ಆದ್ದರಿಂದ ಫಿಲ್ಟರ್ ಹಾಕುವುದರಿಂದ ನೀರು ಕ್ಲೀನ್ ಆಗಿರುತ್ತದೆ. ಹೊಂಡ ಮಾಡಿದಾಗಲೆ ಫಿಲ್ಟರ್ ಹಾಕಲಾಗಿದೆ, ಅವರು ಮಾಡಿಕೊಂಡಿರುವ ಕೃಷಿ ಹೊಂಡದ ಆಳ 12 ಅಡಿ ಇದೆ. ಹೊಂಡದ ಮಧ್ಯದಲ್ಲಿ ಮೋಟರ್ ಇಟ್ಟು ಒಂದಡಿ ಮೇಲೆ ಒಂದು ಡ್ರಮ್ ಅನ್ನು ಇಡಲಾಗಿದೆ ಮೋಟರ್ ಆನ್ ಮಾಡಿದಾಗ ಮೊದಲಿಗೆ ಪಾಚಿ ಬರುತ್ತದೆ ಹಾಗೆ ಬರಬಾರದೆಂದು ಡ್ರಮ್ ಇಡಲಾಗಿದೆ ರವಿ ಅವರಿಗೆ ಫಿಲ್ಟರ್ ವ್ಯವಸ್ಥೆ ಮಾಡಿಕೊಳ್ಳಲು 36,000 ರೂಪಾಯಿ ಖರ್ಚಾಯಿತು. ಲೋಕಲ್ ಫಿಲ್ಟರ್ ಹಾಕಿಕೊಂಡರೆ ಕಡಿಮೆ ಹಣದಲ್ಲಿ ಆಗುತ್ತದೆ ಆದರೆ ಅದು ಬಾಳಿಕೆ ಬರುವುದಿಲ್ಲ ಫಿಲ್ಟರ್ ಡ್ರಮ್ ಗೆ ಇನ್ನೊಂದು ಪೈಪ್ ಕನೆಕ್ಟ್ ಮಾಡಲಾಗಿರುತ್ತದೆ ಅದನ್ನು ಓಪನ್ ಮಾಡಿದರೆ ಪಾಚಿ ಹೊರ ಹೋಗುತ್ತದೆ.
ಫಿಲ್ಟರ್ ಡ್ರಮ್ ಹತ್ತಿರ ಒಂದು ಬಕೆಟ್ ಇಟ್ಟು ಅದರಲ್ಲಿ ಗೊಬ್ಬರ ಹಾಕಿ ನೀರಿನ ಜೊತೆ ಮಿಕ್ಸ್ ಮಾಡಿ ಅದಕ್ಕೆ ಪೈಪ್ ಲೈನ್ ಕೊಡಲಾಗಿದೆ ಪೈಪ್ ಆನ್ ಮಾಡಿದರೆ ತೋಟಕ್ಕೆ ಹೋಗುತ್ತದೆ ಆಫ್ ಮಾಡಿದರೆ ಹೋಗುವುದಿಲ್ಲ. ಅದು ಗೊಬ್ಬರದ ನೀರನ್ನು ಸಹ ಫಿಲ್ಟರ್ ಮಾಡುತ್ತದೆ. ಫಿಲ್ಟರ್ ಡ್ರಮ್ ಗೆ ಒಂದು ಪ್ರೆಷರ್ ಗೆರೇಜ್ ಇದೆ ಅದು ಒಂದುವರೆ ಎರಡು ಇರಬೇಕು 3 ರಿಂದ 4ಕ್ಕೆ ಹೋದರೆ ಫಿಲ್ಟರ್ ಬ್ಲಾಕ್ ಆಗಿದೆ ಎಂದು ಅರ್ಥ. ಹೀಗೆ ರವಿ ಅವರು ತಮ್ಮ ಕೃಷಿ ಹೊಂಡಕ್ಕೆ ಮಾಡಿರುವ ಐಡಿಯಾ ಎಲ್ಲ ರೈತರಿಗೂ ಮಾದರಿಯಾಗಿದೆ. ರೈತರು ಖುಷಿಯಾಗಿದ್ದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲ ರೈತರಿಗೂ ತಿಳಿಸಿ.