ಕಾಂಗ್ರೆಸ್ ಸರ್ಕಾರ ಕಳೆದ ಚುನಾವಣೆಯಲ್ಲಿ ಹೇಳಿದಂತೆ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ಹಣ ಅವರ ಖಾತೆಗೆ ಹಾಕುವ ಗ್ರಹಲಕ್ಷ್ಮಿ ಯೋಜನೆಯಂತೆ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದಾಗಿನಿಂದ ಮಹಿಳೆಯರ ಖಾತೆಗೆ ಹಣ ತಲುಪಿಸುತ್ತಿದ್ದಾರೆ. ಈಗಾಗಲೆ ಗ್ರಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣ ಖಾತೆಗೆ ತಲುಪಿದ್ದು 10ನೇ ಕಂತಿನ ಹಣದ ಬಗ್ಗೆ ಕೆಲವು ಮುಖ್ಯ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸಿಗುವ ಹತ್ತನೆ ಕಂತಿನ ಹಣದ ಬಗ್ಗೆ ಕೆಲವು ಮಾಹಿತಿಗಳಿವೆ. ಈಗಾಗಲೆ ಒಂಭತ್ತನೆ ಕಂತಿನ ಹಣ ಪಡೆದ ಮಹಿಳೆಯರು 10ನೇ ಕಂತಿನ ಹಣ ಯಾವಾಗ ಬರುತ್ತದೆ ಯಾರಿಗಾದರೂ 10ನೇ ಕಂತಿನ ಹಣ ಬಂದಿದೆಯ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಗ್ರಹಾಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ ಪ್ರತಿ ತಿಂಗಳು ಬರುವ ಪ್ರೊಸೀಜರ್ ಆಗಿರುವುದರಿಂದ ಈ ತಿಂಗಳಿನಲ್ಲಿ ಹಣ ಖಾತೆಗೆ ಜಮಾ ಆದ ತಕ್ಷಣ ಮುಂದಿನ ತಿಂಗಳಿನ ಹಣ ಯಾವಾಗ ಬರುತ್ತದೆ ಎಂದು ಮನಸ್ಸಿನಲ್ಲಿ ಮೂಡುವುದು ಸಹಜ. 9ನೇ ಕಂತಿನ ಹಣ ಬಿಡುಗಡೆಯಾಗಿ ಐದರಿಂದ ಏಳು ದಿನಗಳಾಯಿತು ಇನ್ನು ಎಷ್ಟೋ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಮಹಿಳೆಯರ ಖಾತೆಗೆ 9ನೇ ಕಂತಿನ ಹಣ ತಲುಪಲು ಇನ್ನು ಎಂಟರಿಂದ ಹದಿನೈದು ದಿನಗಳು ಬೇಕಾಗುತ್ತದೆ.
ಮೊದಲಿಗೆ 9ನೇ ಕಂತಿನ ಹಣ ಎಲ್ಲಾ ಮಹಿಳೆಯರ ಖಾತೆಗೆ ತಲುಪುತ್ತದೆ ಅದಾದ ನಂತರ 10ನೇ ಕಂತಿನ ಹಣ ಬಿಡುಗಡೆಯಾಗುತ್ತದೆ. ಇದುವರೆಗೂ 10ನೇ ಕಂತಿನ ಹಣ ಯಾವ ಮಹಿಳೆಯ ಖಾತೆಗೂ ಜಮಾ ಆಗಿಲ್ಲ ಹೀಗಾಗಿ ಮಹಿಳೆಯರು ಹತ್ತನೆ ಕಂತಿನ ಹಣದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಹತ್ತನೆ ಕಂತಿನ ಹಣ ಗ್ರಹಲಕ್ಷ್ಮಿ ಫಲಾನುಭವಿಗಳಿಗೆ ಮುಂದಿನ ತಿಂಗಳ 10ನೇ ತಾರೀಖಿನ ನಂತರವೆ ಬರುತ್ತದೆ. ಈಗಾಗಲೆ ಕೆಲವು ಮಹಿಳೆಯರ ಖಾತೆಗೆ 9ನೇ ಕಂತಿನ ಹಣ ಜಮಾ ಆಗಿದೆ ಇನ್ನು ಕೆಲವು ಮಹಿಳೆಯರಿಗೆ 9ನೇ ಕಂತಿನ ಹಣ ಜಮಾ ಆಗಬೇಕಿದೆ. ಈಗಾಗಲೆ 9ನೇ ಕಂತಿನ ಹಣ ಪಡೆದಿರುವ ಮಹಿಳೆಯರು 10ನೇ ಕಂತಿನ ಹಣ ಪಡೆಯಲು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. 9ನೇ ಕಂತಿನ ಹಣ ಸಿಗದ ಮಹಿಳೆಯರ ಖಾತೆಗೆ ಆದಷ್ಟು ಬೇಗ ಹಣ ತಲುಪುತ್ತದೆ.
ಮಹಿಳೆಯರಿಗೆ ಒಂದು ಗುಡ್ ನ್ಯೂಸ್ ಇದೆ ಏನೆಂದರೆ 9ನೇ ಕಂತಿನ ಹಣ ಜಮಾ ಆದ ನಂತರ 10ನೇ ಕಂತಿನ ಹಣ ಬಹಳ ಫಾಸ್ಟ್ ಆಗಿ ಖಾತೆಗೆ ತಲುಪುತ್ತದೆ. ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಹಲವು ಮಹಿಳೆಯರಿಗೆ ಪ್ರಯೋಜನಕಾರಿಯಾಗಿದೆ. ಕೆಲವು ಕಾರಣಗಳಿಂದ ಹಲವು ಮಹಿಳೆಯರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಆಧಾರ್ ನಂಬರ್ ಲಿಂಕ್ ಆಗದೆ ಇರುವುದು ಅಥವಾ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿರುವುದು ಹೀಗೆ ಹಲವು ಕಾರಣಗಳಿಂದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಬ್ಯಾಂಕ್ ಖಾತೆ ಹಾಗೂ ಆಧಾರ್ ನಂಬರ್ ಸರಿಯಾಗಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಖಾತೆಗೆ ತಲುಪುತ್ತಿದೆ. ಇಲ್ಲಿಯವರೆಗೂ 9 ಕಂತುಗಳ ಹಣವನ್ನು ಬಿಡುಗಡೆ ಮಾಡಿರುವ ಸರ್ಕಾರ 10ನೇ ಕಂತಿನ ಹಣವನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ ಅಲ್ಲಿಯವರೆಗೂ ಕಾಯೋಣ.