ಬೋರ್ವೆಲ್ ಪಾಯಿಂಟ್ ಮಾಡಲು ಹಳೆ ವಿಧಾನವಾದ ತೆಂಗಿನಕಾಯಿ, ಕಬ್ಬಿಣದ ರಾಡ್ ಬಳಸಿ ನೀರಿನ ಸೆಲೆಯನ್ನು ಕಂಡುಹಿಡಿಯುತ್ತಿದ್ದರು. ಆದರೆ, ಕೆಲವು ಸಾರಿ ಗಾಳಿಯ ಸೆಲೆ ಸಿಕ್ಕಿ ಬೋರ್ ವೆಲ್ ಫೇಲ್ ಆಗುತ್ತಿತ್ತು.
ಆದ್ರೆ ವಿಜ್ಞಾನ ಮತ್ತು ತಂತ್ರಜ್ಞಾನ ಎರಡು ಬೆಳೆಯುತ್ತಿದೆ. ಇದನ್ನು ಅನುಕರಣೆ ಮಾಡಿದರೆ ಬೋರ್ ವೆಲ್ ಫೇಲ್ಯೂರ್ ಆಗುವುದಿಲ್ಲ. USA ತಂತ್ರಜ್ಞಾನದಿಂದ ಬೋರ್ ವೆಲ್ ಪಾಯಿಂಟ್ ಮಾಡಬಹುದು, ಈ ವಿಧಾನ ಅನುಕರಣೆ ಮಾಡಿದರೆ, ಬೋರ್ವೆಲ್ ಪಾಯಿಂಟ್ ವೈಫಲ್ಯ ಆಗುವ ಸಾಧ್ಯಾತೆ ಇರಲ್ಲ.
ನಮ್ಮ ದೇಶ ಕೃಷಿ ಪ್ರಧಾನ ದೇಶ ಆದರೂ ಸಹ ಇಲ್ಲಿ ಬೆಳೆಯುವ ಕೃಷಿ ಮಳೆಯೊಂದಿಗೆ ಆಡುವ ಕಣ್ಣ ಮುಚ್ಚಾಲೆ ಆಟ ಎಂದೇ ಹೇಳಬಹುದು. ಆರ್ಥಿಕತೆಯಲ್ಲಿ ನಮ್ಮ ಭಾರತ ದೇಶ ಮೊದಲ ಸ್ಥಾನಕ್ಕೆ ಬರಬೇಕು ಮತ್ತು ಈ ಕೃಷಿ ಕ್ಷೇತ್ರದ ಉತ್ಪಾದನೆ ಮುಂದೆ ಬರಬೇಕು ಎಂದರೆ ಪ್ರಥಮವಾಗಿ ನೀರಾವರಿ ಸೌಲಭ್ಯ ಚೆನ್ನಾಗಿ ಇರಬೇಕು.
ಇದರಿಂದ, ಜನರು ಕೊಳವೆ ಬಾವಿಗಳನ್ನು ಬಳಸಿಕೊಂಡು ವಾಣಿಜ್ಯ ಬೆಳೆಗಳನ್ನು, ತೋಟಗಾರಿಕೆ ಮಾಡಿ ತರಕಾರಿ ಹಾಗು ಹಣ್ಣುಗಳನ್ನು ಬೆಳೆದು ಆದಾಯ ಗಳಿಕೆ ಮಾಡಲು ಬಯಸುತ್ತಿದ್ದಾರೆ. ಈ ಸೌಕರ್ಯ ಪಡೆಯಬೇಕು ಎಂದರೆ ಜಮೀನಿನಲ್ಲಿ ನೀರಿನ ಸೆಲೆ ಸಿಗಬೇಕು, ಆಗ ಮಾತ್ರ ಬೋರ್ವೆಲ್ ತೆಗೆಸಿ ಕನಸನ್ನು ನನಸು ಮಾಡಿಕೊಳ್ಳಬಹುದು. ಇಲ್ಲದೆ ಹೋದರೆ ಲಕ್ಷಾಂತರ ಹಣ ಖರ್ಚು ಮಾಡಿ ಸಾಲ ಹೊತ್ತುಕೊಳ್ಳಬೇಕಾಗುತ್ತದೆ.
ಹಳ್ಳಿಗಳಲ್ಲಿ ಇವಾಗು ಕೂಡ ಜ್ಯೋತಿಷ್ಯ ಕೇಳಿ ಇಲ್ಲವೇ ತೆಂಗಿನಕಾಯಿಯಲ್ಲಿ, ದಾರದಲ್ಲಿ, ರಾಡ್ ನಲ್ಲಿ, ಬೀಗದ ಕೈನಲ್ಲಿ ಪರೀಕ್ಷೆ ಮಾಡಿಸಿ ನೀರಿನ ಸೆಲೆ ಎಲ್ಲಿದೆ ಎನ್ನುವುದನ್ನು ಕಂಡು ಹಿಡಿದ ಮೇಲೆ ಅದನ್ನು ನಂಬಿ ಬೋರ್ವೆಲ್ ಪಾಯಿಂಟ್ ಮಾಡಿಸಿ ಕಾಕತಾಳೀಯ ಎನ್ನುವಂತೆ ಯಶಸ್ವಿಯಾದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಿಫಲವಾಗಿ ಸಾಲದ ಸುಳಿಗೆ ಸಿಲುಕಿದ ರೈತರ ಬಗ್ಗೆ ಕೇಳಿರುತ್ತೇವೆ ಹಾಗು ನೋಡಿರುತ್ತೇವೆ.
ಹೀಗಾಗಬಾರದು ಎನ್ನುವುದೇ ಆದರೆ ತಂತ್ರಜ್ಞಾನ ಬಳಕೆ ಮಾಡುವುದು ಉತ್ತಮ. ಈಗ ತಂತ್ರಜ್ಞಾನ ಆಧಾರಿತವಾಗಿ ನಿಖರವಾದ ಬೋರ್ವೆಲ್ ಪಾಯಿಂಟ್ ಹೇಳುವ ಅನೇಕ ತಂತ್ರಜ್ಞರು ಇದ್ದಾರೆ. ಇವರನ್ನು ಸಂಪರ್ಕ ಮಾಡಿದರೆ ಸರಿಯಾದ ಮಾರ್ಗದರ್ಶನ ಸಿಗುತ್ತದೆ. ಇದರ ಮುಖಾಂತರ ರೈತನಿಗೆ ಆಗುವ ನಷ್ಟವು ಕೂಡ ತಪ್ಪುತ್ತದೆ. ಸದ್ಯಕ್ಕೆ USA ತಂತ್ರಜ್ಞಾನ ಬಳಕೆ ಮಾಡಿ ಕರ್ನಾಟಕದ ಪೂರ ಬೋರ್ವೆಲ್ ಪಾಯಿಂಟ್’ಗಳನ್ನು ಮಾಡಿ ಕೊಡುತ್ತಿರುವ ಹಾಗು ಇವರು ಹೇಳಿದ ಮಾರ್ಗದಲ್ಲಿ 99% ಯಶಸ್ವಿ ಆಗಿರುವ ಒಬ್ಬ ವಿಶೇಷ ವ್ಯಕ್ತಿ ಈ ಯುಎಸ್ಎ ತಂತ್ರಜ್ಞಾನದ ಬಗ್ಗೆ ಕುರಿತು ಹೇಳಿದ ಮಾಹಿತಿ ರೈತರಿಗೆ ಉಪಯುಕ್ತ ಆಗುತ್ತದೆ.
ಮ್ಯಾಕ್ಸ್ ಕಂಪನಿಯ 3 ಸಾಧನಗಳನ್ನು ಪ್ರಮುಖವಾಗಿ ಬಳಕೆ ಮಾಡುವರು. ಮೊದಲ ಸಾಧನ ಲೊಕೇಟರ್ ಇದು ಎಲ್ ಶೇಪ್’ನಲ್ಲಿ ಇರುವ ಎರಡು ಇನ್ಸ್ಟ್ರುಮೆಂಟ್ ಆಗಿರುತ್ತದೆ ಇದನ್ನು ಎರಡು ಕೈಗಳಲ್ಲಿ ಹಿಡಿದುಕೊಂಡು ಆನ್ ಮಾಡಿದರೆ ನೀರಿನ ಸೆಲೆ ಎಲ್ಲಿದೆ ಎನ್ನುವುದನ್ನು ಅದು ಸೌಂಡ್ ಮಾಡಿ ಲೊಕೇಶನ್ ತಿಳಿಸುತ್ತದೆ. ಬಳಿಕ ಇದನ್ನು ಆಫ್ ಮಾಡಿ ಟ್ಯಾಬ್ ಕನೆಕ್ಷನ್ ಕೊಟ್ಟು ಪ್ರೊಫೈಲರ್ ಎನ್ನುವ ಇನ್ನೊಂದು ಡಿವೈಸ್ ಕನೆಕ್ಟ್ ಮಾಡಿಕೊಳ್ಳಬೇಕು. ಇದು 10 ಅಡಿ ಅಂತರದಲ್ಲಿ ನೀರಿನ ಸೆಲೆ ಎಲ್ಲಿದೆ ಎನ್ನುವುದನ್ನು ಸ್ಕ್ಯಾನ್ ಮಾಡಿ ರಿಪೋರ್ಟ್ ಸಮೇತ ತಿಳಿಸುತ್ತದೆ.
ಕೊನೆಯಲ್ಲಿ ಬರುವುದೇ IP. ಇದು, ಎಷ್ಟು ಆಳಕ್ಕೆ ಬೋರ್ವೆಲ್ ಹಾಕಿದರೆ ನೀರು ಬರುತ್ತದೆ ಎನ್ನುವುದನ್ನು ಯಥಾವತ್ತಾಗಿ ತಿಳಿಸುತ್ತದೆ. ತಪ್ಪದೇ ಈ ತಂತ್ರಜ್ಞಾನ ಬಳಕೆ ಮಾಡಿಕೊಂಡು ತಂತ್ರಜ್ಞಾನದ ಸಹಾಯದಿಂದ ಕೃಷಿ ಕನಸನ್ನು ನನಸು ಮಾಡಿಕೊಳ್ಳಬಹುದು. ಯಾರಿಗಾದರೂ ಈ ತಂತ್ರಜ್ಞರ ಸಹಾಯ ಬೇಕು ಎಂದರೆ ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಗೆ ಸಂಪರ್ಕ ಮಾಡಿ. ಕರ್ನಾಟಕದ ಯಾವುದೇ ಮೂಲೆಗೆ ಬೇಕಾದರೂ ಟೀಮ್ ಜೊತೆ ಬಂದು ರೈತರಿಗೆ ಮಾರ್ಗದರ್ಶನ ನೀಡುವರು.
ಆದರೆ, ಒಂದು ಕಡೆ ಒಬ್ಬ ರೈತರು ಇದ್ದು. ಅದು, ದೂರದ ಊರಾಗಿದ್ದರೆ ಬರುವುದು ತಂತ್ರಜ್ಞರಿಗೆ ಕಷ್ಟ ಆಗಬಹುದು ಯಾಕೆಂದರೆ ಇವರು ಬೆಂಗಳೂರಿನಲ್ಲಿ ಇರುತ್ತಾರೆ ಹಾಗಾಗಿ ಹತ್ತಿರದಲ್ಲಿ 4-5 ರೈತರ ಆರ್ಡರ್ ಒಟ್ಟಿಗೆ ಸಿಕ್ಕರೆ ಖಂಡಿತ ಬರುತ್ತಾರೆ.
ಈ ವಿಚಾರವಾಗಿ ಯಾವುದೇ ಗೊಂದಲ ಇದ್ದರೂ ಇಲ್ಲವೇ ಹೆಚ್ಚಿನ ಮಾಹಿತಿ ಬೇಕಿದ್ದರೂ ಈ ದೂರವಾಣಿ ಸಂಖ್ಯೆಗೆ ಸಂಪರ್ಕ ಮಾಡಿ :- 9880626035