ನಾವು ಜೀವನದಲ್ಲಿ ಐಷಾರಾಮಿ ವಸ್ತುಗಳನ್ನು ಖರೀದಿಸುವ ಅಗತ್ಯಕ್ಕಿಂತ ಹೆಚ್ಚಿನ ಹಣ ಬೇಕು ಇದಕ್ಕಾಗಿ ಸಾಲ ಮಾಡಬೇಕಾಗುತ್ತದೆ. ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುವುದಾದರೆ ಕೆನರಾ ಬ್ಯಾಂಕ್ ನಲ್ಲಿ ಸಾಲ ಪಡೆಯಬಹುದು. ಕಡಿಮೆ ದಾಖಲೆಗಳನ್ನು ಕೊಟ್ಟು ಕೆನರಾ ಬ್ಯಾಂಕ್ ನಲ್ಲಿ ಸಾಲ ಪಡೆಯಬಹುದು ಹಾಗಾದರೆ ಈ ಲೇಖನದಲ್ಲಿ ನೋಡೋಣ
ಕಡಿಮೆ ಬಡ್ಡಿದರದಲ್ಲಿ ಸಾಲ ಬೇಕಾದರೆ ಕೆನರಾ ಬ್ಯಾಂಕ್ ಉತ್ತಮ ಆಯ್ಕೆಯಾಗಿದೆ. ಮನೆಯಲ್ಲಿ ಕುಳಿತು ಕೇವಲ ಐದು ನಿಮಿಷಗಳಲ್ಲಿ ಸಾಲ ಪಡೆಯಬಹುದು. ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ 25000 ದಿಂದ 10 ಲಕ್ಷ ರೂಪಾಯಿವರೆಗೆ ಸಾಲ ನೀಡುತ್ತದೆ. ಸಾಲ ಪಡೆಯಲು ಬೇಕಾಗುವ ದಾಖಲೆಗಳು, ಅರ್ಹತೆ ಹಾಗೂ ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನವು ಸುಲಭವಾಗಿದೆ.
ಗ್ರಾಹಕರಿಗೆ ಕೆನರಾ ಬ್ಯಾಂಕ್ ನಿಂದ ಸಿಹಿ ಸುದ್ದಿಯೊಂದಿದೆ. ಮನೆಯಲ್ಲಿ ಕುಳಿತು ದಾಖಲೆಗಳನ್ನು ಸಲ್ಲಿಸುವ ಮೂಲಕ ಹತ್ತು ಸಾವಿರ ರೂಪಾಯಿಯಿಂದ 3 ಲಕ್ಷದವರೆಗೆ ಸಾಲ ಪಡೆಯಬಹುದು. ಈ ಸೇವೆಯು ಆಫ್ಲೈನ್ ಹಾಗೂ ಆನಲೈನ್ ನಲ್ಲಿ ಲಭ್ಯವಿದೆ. ನೇರವಾಗಿ ಶಾಖೆಗೆ ಭೇಟಿ ನೀಡಿ ಸಾಲ ಪಡೆಯಲು ಬಯಸಿದರೆ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಸಾಲವನ್ನು ಪಡೆಯಬಹುದು. ಕೆನರಾ ಬ್ಯಾಂಕ್ ನಿಂದ ಸಾಲ ಪಡೆಯಲು ಗ್ರಾಹಕರ ವಯಸ್ಸು 21 ವರ್ಷದಿಂದ 60 ವರ್ಷಗಳ ನಡುವೆ ಇರಬೇಕು. ಅಭ್ಯರ್ಥಿಯ ಮಾಸಿಕ ವೇತನ 25000 ಕ್ಕಿಂತ ಹೆಚ್ಚಿರಬೇಕು. ಅಭ್ಯರ್ಥಿಯು ಕೆಲಸಗಾರನಾಗಿರಬೇಕು, ವಿದ್ಯಾರ್ಥಿಗಳು ಸಾಲಕ್ಕೆ ಅರ್ಹರಲ್ಲ. ವೈಯಕ್ತಿಕ ಸಾಲ ಪಡೆಯಲು ಅಭ್ಯರ್ಥಿಯ ಸಿಬಿಲ್ ಸ್ಕೋರ್ 700 ಮತ್ತು ಅದಕ್ಕಿಂತ ಹೆಚ್ಚಿರಬೇಕು.
ಕೆನರಾ ಬ್ಯಾಂಕ್ ನಿಂದ ಸಾಲ ಪಡೆಯಲು ಆಧಾರ್ ಕಾರ್ಡ್, ಪಾನ್ ಕಾರ್ಡ್, ಗುರುತಿನ ಚೀಟಿ, 6 ತಿಂಗಳ ಸಂಬಳದ ರಶೀದಿ, ಮೂರು ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ, ಪಾಸ್ ಪೋರ್ಟ್ ಫೋಟೋ, ಅರ್ಜಿ, ದೂರವಾಣಿ ಸಂಖ್ಯೆ ಅವಶ್ಯವಾಗಿದೆ. ಕೆನರಾ ಬ್ಯಾಂಕ್ ನಿಂದ ವೈಯಕ್ತಿಕ ಸಾಲವನ್ನು ಪಡೆದರೆ ಗ್ರಾಹಕರು ಎರವಲು ಪಡೆದ ಹಣಕ್ಕೆ ವಾರ್ಷಿಕ 8.80% ಇಂದ 12.05% ಬಡ್ಡಿದರವನ್ನು ಪಾವತಿಮಾಡಬೇಕಾಗುತ್ತದೆ. ಅಲ್ಲದೆ ಈ ಹಿಂದೆ ಕೆನರಾ ಬ್ಯಾಂಕಿನಿಂದ ಸಾಲವನ್ನು ಪಡೆದಿದ್ದರೆ ವಯಕ್ತಿಕ ಸಾಲವನ್ನು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ತ್ವರಿತವಾಗಿ ಅನುಮೋದಿಸಲಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.