ಕೃಷಿ ಭೂಮಿಯಲ್ಲಿ ಮನೆ ಅಥವಾ ಫಾರ್ಮ್ ಹೌಸ್ ಕಟ್ಟಿದರೆ ಅನುಮತಿ ಪಡೆಯಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ ಹಾಗೂ ಒಂದಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದರೆ ಅವರಿಗೆ ಸರ್ಕಾರ ಆದೇಶ ಹೊರಡಿಸಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಕೃಷಿ ಮುಖ್ಯವಾಗಿದೆ ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಕೃಷಿ ಭೂಮಿಯಲ್ಲಿ ಉದ್ಯಮ, ಇತರೆ ಕಟ್ಟಡ ನಿರ್ಮಿಸಿ ಆದಾಯ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಕೃಷಿಯ ಬಗ್ಗೆ ಹಲವು ಯೋಜನೆಗಳನ್ನು ಜಾರಿಗೆ ತಂದರೂ ಕೆಲವು ರೈತರವರೆಗೆ ತಲುಪುವುದಿಲ್ಲ. ಕೃಷಿ ಜಮೀನಿನಲ್ಲಿ ಒಳ್ಳೆಯ ರೀತಿಯಲ್ಲಿ ಫಸಲು ಬಂದರೆ ಸ್ವಂತ ಜಮೀನು ಆಗಿದ್ದರೂ ಮನೆ ಅಥವಾ ಕಟ್ಟಡ ಕಟ್ಟುವಂತಿಲ್ಲ ಒಂದು ವೇಳೆ ಅನಿವಾರ್ಯ ಕಾರಣವಾಗಿದ್ದರೆ ಸರ್ಕಾರದ ವಿಶೇಷ ಪರವಾನಗಿ ಪಡೆಯಬೇಕು.
ತಮ್ಮ ಕೃಷಿ ಭೂಮಿಯಲ್ಲಿ ಫಸಲು ಚೆನ್ನಾಗಿ ಬರುತ್ತಿಲ್ಲವೆಂದು ಲ್ಯಾಂಡ್ ಕನ್ವರ್ಷನ್ ಆರ್ಡರ್ ಪಡೆಯಬೇಕು ಇದಕ್ಕೆ ಮುನ್ಸಿಪಾಲಿಟಿ ಹಾಗೂ ಗ್ರಾಮಪಂಚಾಯತ್ ಇಂದ ಎನ್ ಓಸಿ ಪಡೆಯಬೇಕು ಹಾಗೂ ಲ್ಯಾಂಡ್ ಕನ್ವರ್ಷನ್ ಮಾಡಲು ಸರ್ಕಾರ ವಿಧಿಸಿದ ಶುಲ್ಕ ಪಾವತಿಸಬೇಕು. ವಾಸ ಮಾಡಲು ಬಳಸುವ ಕೃಷಿ ಭೂಮಿ ಕೃಷಿಗೆ ಯೋಗ್ಯವಾಗಿಲ್ಲ ಎಂದು ಸರ್ಕಾರದ ಗಮನಕ್ಕೆ ತಂದರೆ ಮಾತ್ರ ಲ್ಯಾಂಡ್ ಕನ್ವರ್ಷನ್ ಸಾಧ್ಯ.
ಪ್ರತಿಯೊಬ್ಬರು ಆಸ್ತಿ ಇದ್ದರೆ ಭವಿಷ್ಯಕ್ಕೆ ಒಳ್ಳೆಯದು ಎಂದು ನಿರ್ಧರಿಸುತ್ತಾರೆ. ನಮ್ಮ ದೇಶದಲ್ಲಿ ಆಸ್ತಿ ಹೊಂದಲು ಕೆಲವು ನಿಯಮಗಳಿವೆ. ಆಸ್ತಿಯಿಂದ ಗಳಿಸಿದ ಆದಾಯಕ್ಕೆ ಯೋಗ್ಯ ತೆರಿಗೆ ಪಾವತಿಸಬೇಕಾಗುತ್ತದೆ. ಒಂದು ಮನೆಯನ್ನು ಖರೀದಿ ಮಾಡಿ ಮೂರು ವರ್ಷಕ್ಕಿಂತ ಕಡಿಮೆ ವಾಸ ಮಾಡಿ ಮನೆಯನ್ನು ಮಾರಾಟ ಮಾಡಿದರೆ ಮಾರಿದ ಹಣಕ್ಕೆ ಲಾಭ ಬಂದರೆ ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ ಇದಕ್ಕೆ ಅಲ್ಪಾವಧಿ ಬಂಡವಾಳ ತೆರಿಗೆ ಎನ್ನುತ್ತಾರೆ ಒಂದು ಮನೆಯನ್ನು ಖರೀದಿ ಮಾಡಿ ಮೂರು ವರ್ಷಕ್ಕಿಂತ ಹೆಚ್ಚು ವಾಸ ಮಾಡಿ ಮನೆಯನ್ನು ಮಾರಾಟ ಮಾಡಿದರೆ ಮಾರಿದ ಹಣಕ್ಕೆ ಲಾಭ ಬಂದರೆ ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ
ಇದಕ್ಕೆ ದೀರ್ಘಾವಧಿ ಬಂಡವಾಳ ತೆರಿಗೆ ಎನ್ನುತ್ತಾರೆ. ಖರೀದಿಸಿದ ಆಸ್ತಿಯ ಮೇಲೆ ಎಷ್ಟು ಲಾಭವಾಗಿದೆ ಎನ್ನುವುದರ ಮೇಲೆ ತೆರಿಗೆ ನಿರ್ಧಾರವಾಗುತ್ತದೆ. ಮನೆಯ ಮಾರಾಟದಿಂದ ಆದ ಲಾಭದ ಮೇಲೆ ಟ್ಯಾಕ್ಸ್ ಹಾಗೂ ಇತರ ತೆರಿಗೆ ಪಾವತಿಸಬೇಕಾಗುತ್ತದೆ. ಯಾವುದೆ ಆಸ್ತಿ ಖರೀದಿಸಬೇಕಾದರೆ ಅವರು ಆದಾಯ ಪಾವತಿ ಮಾಡಿದ್ದಾರ ಎಂಬುದನ್ನು ಸರಿಯಾಗಿ ತಿಳಿಯಬೇಕು ಹಾಗೂ ಆ ಜಮೀನಿನ ಮೇಲೆ ಸಾಲ ಮಾಡಿ ಮರುಪಾವತಿ ಮಾಡಲಾಗಿದೆಯಾ ಇಲ್ಲವಾ ಎಂಬುದನ್ನು ತಿಳಿಯಬೇಕು.
ರಾಜ್ಯಸರ್ಕಾರ ಮಹಿಳೆಯರಿಗೆ ಕಾಯಕ ಯೋಜನೆಯ ಮೂಲಕ ಸ್ವಂತ ಉದ್ಯೋಗ ಮಾಡಲು 5 ಲಕ್ಷ ರೂಪಾಯಿ ಲೋನ್ ಸಿಗುತ್ತದೆ. ರಾಜ್ಯ ಸರ್ಕಾರ ಕಾಯಕ ಯೋಜನೆಯ ಮೂಲಕ ಸ್ವಸಹಾಯ ಗುಂಪುಗಳಿಗೆ 5ರಿಂದ 10 ಲಕ್ಷ ರೂಪಾಯಿ ಸಾಲ ನೀಡಲಾಗುತ್ತದೆ ಹಾಗೂ ಸಾಲಕ್ಕೆ ಬಡ್ಡಿ ಇರುವುದಿಲ್ಲ. ಮಹಿಳೆಯರು ಆನಲೈನ್ ಮೂಲಕ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು.
ನಿವಾಸ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ವಿವರ, ಸ್ವ ಸಹಾಯ ಸಂಘದ ಸದಸ್ಯತ್ವದ ವಿವರ, ಆದಾಯ ಪ್ರಮಾಣ ಪತ್ರ, ಅಭ್ಯರ್ಥಿಯ ಫೋಟೋ ಹಾಗೂ ಸಹಿ ಅವಶ್ಯವಾಗಿದೆ. ರಾಜ್ಯ ಸರ್ಕಾರ ಅಧಿಕೃತ ವೆಬ್ಸೈಟ್ ಬಿಡುಗಡೆಗೊಳಿಸಿದ ಕೂಡಲೆ ಅರ್ಜಿ ಸಲ್ಲಿಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಸರ್ಕಾರದ ಆದೇಶವನ್ನು ಪಾಲಿಸಿ ಹಾಗೂ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ.