solar pump set: ರೈತರಿಗೆ ತುಂಬಾ ಮುಖ್ಯವಾಗಿ ಬೇಕಾಗಿದ್ದು ಪಂಪ್ ಸೆಟ್. ಬೆಳೆಯುವ ಬೆಳೆಗೆ ನೀರಿನ ಅಗತ್ಯ ಹೆಚ್ಚಾಗಿ ಇರುತ್ತದೆ. ಹೊಸ ತಂತ್ರಜ್ಞಾನ ಬಂದಂತೆ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಸೋಲಾರ್ ಪಂಪ್ ಸೆಟ್ ಅಡವಳಿಕೆ ಮಾಡಿಕೊಳ್ಳಲು ರೈತರಿಗೆ 50% ಸಹಾಯ ಧನ ನೀಡಲು ಸರ್ಕಾರ ಮುಂದಾಗಿದೆ. ಅದಕ್ಕೆ, ಅರ್ಜಿ ಆಹ್ವಾನ ಸಹ ಮಾಡಲಾಗಿದೆ.
ದೇಶದಲ್ಲಿ ರೈತ (farmers ) ಇಲ್ಲದೆ ಇದ್ದರೆ ಬದುಕಲು ಸಾಧ್ಯವೇ ಇಲ್ಲ. ರೈತರೇ ದೇಶದ ಬೆನ್ನೆಲುಬು. ರೈತ ಕಷ್ಟಪಟ್ಟು ಅವರ ಜಮೀನಿನಲ್ಲಿ ಬೆವರು ಸುರಿಸಿ ದುಡಿದು ಬೆಳೆ ಬೆಳೆದರೆ ಮಾತ್ರ ಎಲ್ಲರೂ ಬದುಕು ನಡೆಸಲು ಸಾಧ್ಯ. ಅದೇ, ಕಾರಣಕ್ಕೆ ದೇಶದಲ್ಲಿ ವಾಸ ಮಾಡುವ ರೈತರಿಗೆ ಅನುಕೂಲವಾಗುವ ರೀತಿ ಹೆಚ್ಚು ಯೋಜನೆಗಳನ್ನು (schemes) ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ರೈತರ ಉದ್ಧಾರ ಮಾಡಬೇಕು ಅಥವಾ ರೈತರ ಕೃಷಿ ಅಭಿವೃದ್ಧಿ ಮಾಡಬೇಕು ಎಂದು ಸುಮ್ಮನೆ ಬಾಯಿ ಮಾತಲ್ಲಿ ಹೇಳಿದರೆ ಯಾವುದೇ ಉಪಯೋಗ ಇಲ್ಲ. ನಿಜಕ್ಕೂ ರೈತರಿಗೆ ಅದರ ಪ್ರಯೋಜನ ಸಿಗಬೇಕು ಎಂದು ಇದಕ್ಕಾಗಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕುಸುಮ್ ಬಿ ( Kusum b scheme ) ಎನ್ನುವ ಹೊಸ ಯೋಜನೆಯನ್ನು ಪರಿಚಯಿಸಿದೆ.
ಈ ಯೋಜನೆಯ ಕೆಳಗೆ ರೈತರು ಅವರ ತೋಟದಲ್ಲಿ ಸೋಲಾರ್ ಪಂಪ್ ಸೆಟ್ ಅನ್ನು (solar pump set ) ಅಡವಳಿಕೆ ಮಾಡಿಕೊಳ್ಳಲು ಅವಕಾಶ ಇದೆ, ಸೋಲಾರ್ ಪಂಪ್ ಸೆಟ್ ಅನ್ನು ಅವರ ಜಮೀನಿಗೆ ಹಾಕಿಕೊಂಡರೆ ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯ ಆಗುತ್ತದೆ.
ಅಷ್ಟೇ ಅಲ್ಲ, ಇದರಿಂದ ಅವರ ಹೊಲಕ್ಕೆ ಅಗತ್ಯ ಇರುವ ನೀರಾವರಿ ಸೌಲಭ್ಯವನ್ನು ಕೂಡ ಬಳಕೆ ಮಾಡಿಕೊಳ್ಳಬಹುದು. ರೈತರಿಗೆ ಸಿಗುತ್ತೆ 50% ನಷ್ಟು ಸಬ್ಸಿಡಿ ಇಂಧನ ಸಚಿವ ಕೆಜೆ ಜಾರ್ಜ್, ರೈತರಿಗೆ ಕೊಡುವ ಸಬ್ಸಿಡಿ (subsidy) ಬಗ್ಗೆ ವಿವರವಾಗಿ ಹೇಳಿದ್ದಾರೆ. ರೈತರು ಅವರ ಜಮೀನು ಚೆನ್ನಾಗಿ ಇರಬೇಕು ಅಥವಾ ಬೆಳೆಯಲ್ಲಿ ಉತ್ತಮ ಇಳುವರಿ ಬರಬೇಕು ಎಂದರೆ ಅದಕ್ಕೆ, ಕಾಲಕ್ಕೆ ಸರಿಯಾಗಿ ನೀರು ಪೂರೈಕೆ ಮಾಡುವುದು ಬಹಳ ಮುಖ್ಯವಾಗುತ್ತದೆ.
ಇದಕ್ಕೆ ಪಂಪ್ ಸೆಟ್ ( pump set ) ಅಗತ್ಯ ಇರುತ್ತದೆ ಮತ್ತು ಅದನ್ನು ಚಾಲೂ ಮಾಡಲು ವಿದ್ಯುತ್ ಅಗತ್ಯ ಇರುತ್ತದೆ. ಈ ರೀತಿ ವಿದ್ಯುತ್ ಬಳಕೆ ಮಾಡಿದಾಗ, ವಿದ್ಯುತ್ ಚಾರ್ಜ್ ಕೂಡ ಹೆಚ್ಚಾಗಿ ಬರುತ್ತದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಇನ್ನು ಮುಂದೆ ಈ ಕಷ್ಟ ರೈತರಿಗೆ ಇರುವುದಿಲ್ಲ. ಪರಿಸರ ಸ್ನೇಹಿಯಾಗಿರುವ ಸೋಲಾರ್ ಪಂಪ್ ಸೆಟ್ ( eco friendly solar pump set ) ಅಡವಳಿಗೆ ಮಾಡಿಕೊಳ್ಳಬಹುದು.
ಸೋಲಾರ್ ಪಂಪ್ಸೆಟ್ ಖರೀದಿ ಮಾಡಲು 50%ನಷ್ಟು ಸಬ್ಸಿಡಿ ರಾಜ್ಯದಲ್ಲಿ ವಾಸ ಮಾಡುವ ರೈತರಿಗೆ ಕುಸುಮ್ ಬಿ ಯೋಜನೆಯ ಕೆಳಗೆ ಸೋಲಾರ್ ಪಂಪ್ ಸೆಟ್’ನ್ನ ( solar pump set ) ಅವರ ತೋಟ, ಜಮೀನು ಅಥವಾ ಹೊಲಗಳಲ್ಲಿ ಅಡವಳಿಸಿಕೊಳ್ಳಲು 50% ವರೆಗೆ ಸಬ್ಸಿಡಿ ಪಡೆದುಕೊಳ್ಳಲು ಸಾಧ್ಯವಿದೆ. ಮುಂಚೆ ಈ ಸಬ್ಸಿಡಿ ಕೇವಲ 30%ನಷ್ಟು ಮಾತ್ರ ಇತ್ತು. ಆದರೆ, ರಾಜ್ಯದಲ್ಲಿ ಈಗ ವಿದ್ಯುತ್ ಕೊರತೆ ಸಹ ಇದೆ. ಅದರ, ಜೊತೆಗೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ. ಇದೆಲ್ಲವನ್ನು ಸರಿ ತೂಗಿಸಿಕೊಂಡು ಹೋಗಲು ರಾಜ್ಯ ಸರ್ಕಾರ 50%ನಷ್ಟು ಸಬ್ಸಿಡಿ ನೀಡುತ್ತಿದೆ.
ಇದರಿಂದ, ಸಾಕಷ್ಟು ರೈತರು ಸೋಲಾರ್ ಪಂಪ್ ಅಡವಳಿಕೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಅವರು ಒಂದು ಬಾರಿ ಸೋಲಾರ್ ಪಂಪ್ ಅಡವಳಿಕೆ ಮಾಡಿಕೊಂಡರೆ ಹೆಚ್ಚು ವರ್ಷ ಅದನ್ನು ಬಳಕೆ ಮಾಡಬಹುದು. ಯಾರಿಗೆ ಸೋಲಾರ್ ಅಳವಡಿಸಿಕೊಳ್ಳುವ ಅಗತ್ಯ ಇರುತ್ತದೆಯೋ ಮತ್ತು ಸ್ಥಳಾವಕಾಶ ಇದೆಯೋ ಅವರು ಹತ್ತಿರದ ರೈತ ಅಭಿವೃದ್ಧಿ ಕೇಂದ್ರಕ್ಕೆ ಹೋಗಿ ಮಾಹಿತಿಯನ್ನು ಪಡೆದು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.