2024ರ ಆರ್ ಆರ್ ಬಿ., ಆರ್ ಪಿ ಎಫ್, ಎಸ್ ಐ., ಕಾನ್ಸ್ಟೇಬಲ್ ರೈಲ್ವೆ ಕೆಲಸಗಳು. ರೈಲ್ವೆ ರಕ್ಷಣಾ ಸಿಬ್ಬಂದಿ ನೇಮಕಾತಿಗೆ ನೋಟಿಫಿಕೇಶನ್ ನೀಡಲಾಗಿದೆ 4,660 ಎಸ್‌ಐ, ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ.
ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು ದೇಶದಾದ್ಯಂತ ರೈಲ್ವೆ ವಲಯಗಳಲ್ಲಿ ಖಾಲಿ ಇರುವ ಸಬ್‌ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್ ಹುದ್ದೆಗಳ ಪೈಕಿ ಈಗ ಒಟ್ಟು 4,660 ಪೋಸ್ಟ್‌ಗಳನ್ನು ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ.
ಅರ್ಹತೆ, ವೇತನ, ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಳನ್ನು ನೋಡಿ :- ಆರ್‌ಆರ್‌ಬಿ, ಎಸ್‌ಐ, ಪಿಸಿ ನೇಮಕ ಅಧಿಸೂಚನೆ ಪ್ರಕಟವಾಗಿದೆ. ಒಟ್ಟು 4,660 ಹುದ್ದೆಗಳಿಗೆ ಅರ್ಜಿ ಆಹ್ವಾನ.
ಅರ್ಜಿ ಸ್ವೀಕಾರದ ವೇಳಾಪಟ್ಟಿ :-
ಭಾರತೀಯ ರೈಲ್ವೆ ಇದೇ ವರ್ಷದಲ್ಲಿ ಇನ್ನೊಂದು ನೇಮಕಾತಿ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಇದು, ಈ ವರ್ಷದ 3ನೇ ಉದ್ಯೋಗ ಅಧಿಸೂಚನೆ ಆಗಿದೆ. 2024ರ ಆರ್ ಆರ್ ಬಿ., ಆರ್ ಪಿ ಎಫ್, ಎಸ್ ಐ., ಕಾನ್ಸ್ಟೇಬಲ್ ಕೆಲಸಗಳು, ರೈಲ್ವೆಯ ರಕ್ಷಣಾ ಸಿಬ್ಬಂದಿ ಪಡೆಯ ರೈಲ್ವೆ ಸಬ್‌ಇನ್ಸ್‌ಪೆಕ್ಟರ್, ರೈಲ್ವೆ ಕಾನ್ಸ್‌ಟೇಬಲ್‌ಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ.
ಆರ್‌ಆರ್‌ಬಿ, ಆರ್‌ಪಿಎಫ್‌ನ ಎಸ್‌ಐ, ಕಾನ್ಸ್‌ಟೇಬಲ್ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್’ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ನೇಮಕಾತಿ ಪ್ರಾಧಿಕಾರ : ಭಾರತೀಯ ರೈಲ್ವೆ.
ಹುದ್ದೆಗಳ ಹೆಸರು : ಆರ್‌ಪಿಎಫ್, ಸಬ್ ಇನ್ಸ್‌ಪೆಕ್ಟರ್, ಆರ್‌ಪಿಎಸ್ ಕಾನ್ಸ್‌ಟೇಬಲ್
ಒಟ್ಟು ಹುದ್ದೆಗಳ ಸಂಖ್ಯೆ : 4,660
ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ದಿನಾಂಕ: 26/02/2024
ರೈಲ್ವೆ ಉದ್ಯೋಗ : ಆರ್‌ಪಿಎಫ್ ಹುದ್ದೆಗಳ ವಿವರ.
ರೈಲ್ವೆ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ಸಂಖ್ಯೆ 452.
ರೈಲ್ವೆ ಕಾನ್ಸ್‌ಟೇಬಲ್ ಹುದ್ದೆಗಳ ಸಂಖ್ಯೆ 4,208.
9,000 ಟೆಕ್ನೀಷಿಯನ್ ಹುದ್ದೆಗಳ ನೇಮಕಾತಿಗಾಗಿ ರೈಲ್ವೆ ಇಲಾಖೆಯಿಂದ ಇನ್ನೊಂದು ಅಧಿಸೂಚನೆ.
ರೈಲ್ವೆಯ ಹುದ್ದೆವಾರು ವೇತನ ಶ್ರೇಣಿ :-
ರೈಲ್ವೆ ಸಬ್‌ಇನ್ಸ್‌ಪೆಕ್ಟರ್ ಹುದ್ದೆ :- ಆರಂಭಿಕ ವೇತನ ₹35,400.
ರೈಲ್ವೆ ಕಾನ್ಸ್‌ಟೇಬಲ್ ಹುದ್ದೆ :- ಆರಂಭಿಕ ವೇತನ ₹21,700.
ರೈಲ್ವೆ ಹುದ್ದೆಗೆ ಶೈಕ್ಷಣಿಕ ಹಾಗೂ ವಯಸ್ಸಿನ ಅರ್ಹತೆಗಳು :-
ಸಬ್‌ಇನ್ಸ್‌ಪೆಕ್ಟರ್ :- ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಾಸ್ ಮಾಡಿರಬೇಕು. ದಿನಾಂಕ 01/07/2024ಕ್ಕೆ 20-28 ವರ್ಷ ಪೂರೈಸಿರಬೇಕು.
ಕಾನ್ಸ್‌ಟೇಬಲ್ :- ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಪಾಸ್ ಮಾಡಿರಬೇಕು. ದಿನಾಂಕ 01/07/2024ಕ್ಕೆ 18-28 ವರ್ಷ ಪೂರೈಸಿರಬೇಕು.
5,696 ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗೆ ಭಾರತೀಯ ರೈಲ್ವೆ ಅಧಿಸೂಚನೆ :- 10ನೇ ತರಗತಿ, ITI ಅರ್ಹತೆ
ಎಸ್‌ಐ ಹುದ್ದೆಗೆ 7ನೇ ವೇತನ ಆಯೋಗದ ಪೇ ಲೆವೆಲ್ 6ರ ಪ್ರಕಾರ, ಕಾನ್ಸ್‌ಟೇಬಲ್ ಹುದ್ದೆಗೆ 7ನೇ ವೇತನ ಆಯೋಗದ ಪೇ ಲೆವೆಲ್ 3ರ ಪ್ರಕಾರ ವೇತನ ಶ್ರೇಣಿ ನಿಗದಿ ಮಾಡಲಾಗಿದೆ .ಮೇಲೆ ತಿಳಿಸಿದ ಆರಂಭಿಕ ವೇತನದೊಂದಿಗೆ ಇತರೆ ಭತ್ಯೆಗಳು, ಸೌಲಭ್ಯಗಳು ಇರಲಿವೆ. ಸರ್ಕಾರಿ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆಯು ಅನ್ವಯ ಆಗುತ್ತದೆ.
ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅಪ್ಲಿಕೇಶನ್ ಸ್ವೀಕಾರ ಆರಂಭಿಕ ದಿನಾಂಕ :- 15/04/2024.
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ :- 14/05/2024.
ಅಪ್ಲಿಕೇಶನ್ ಶುಲ್ಕದ ವಿವರ :-ಸಾಮಾನ್ಯ ಅರ್ಹತೆ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಶುಲ್ಕ ₹500.ಪ ಜಾತಿ/ ಪ. ಪಂ, ಪ್ರ1, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ₹250.
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಲಿಂಕ್ ಅನ್ನು 15/04/2024 ರಂದು ಆಯಾ ರೈಲ್ವೆ ವಲಯಗಳ ಪ್ರಾದೇಶಿಕ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಕರ್ನಾಟಕ ರಾಜ್ಯ ಅಭ್ಯರ್ಥಿಗಳು ತಮ್ಮ ಪ್ರಾದೇಶಿ ವೆಬ್‌ಸೈಟ್ ವಿಳಾಸ www.rrbbnc.gov.inಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಉದ್ಯೋಗ ವಿವರ
ತಿಂಗಳ ವೇತನ ₹21,700 – ₹35,400. ಹುದ್ದೆಯ ಹೆಸರು ರೈಲ್ವೆ ಸಬ್‌ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್ ಭಾರತೀಯ ರೈಲ್ವೆ ರಕ್ಷಣಾ ಸಿಬ್ಬಂದಿ ಪಡೆ.
ಪ್ರಕಟಣೆ ದಿನಾಂಕ :- 26/02/2024.
ಕೊನೆ ದಿನಾಂಕ :- 14/04/2024.
ವಿದ್ಯಾರ್ಹತೆ :- ಪದವಿ, ಎಸ್‌ಎಸ್‌ಎಲ್‌ಸಿ
ಸಂಸ್ಥೆಯ ಹೆಸರು :- ಭಾರತೀಯ ರೈಲ್ವೆ
ವೆಬ್‌ಸೈಟ್ ವಿಳಾಸ :-https://www.rrbbnc.gov.in/
ಉದ್ಯೋಗ ಸ್ಥಳದ ವಿಳಾಸ :- ದೇಶದ ಎಲ್ಲ ರೈಲ್ವೆ ವಲಯಗಳು
ಕರ್ನಾಟಕ ಅಂಚೆ ಸಂಖ್ಯೆ :- 560023
ದೇಶ :- ಭಾರತ.