ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಬಿಎಂಟಿಸಿ’ಯಲ್ಲಿ ( BMTC ) ಖಾಲಿ ಇರುವ ನಿರ್ವಾಹಕರ ಹುದ್ದೆಗೆ ಅರ್ಜಿಯನ್ನು ಆಹ್ವಾನ ನೀಡಲಾಗಿದೆ. ಅರ್ಹತೆ ಉಳ್ಳವರು ಆನ್”ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಬೆಂಗಳೂರು ಸಾರಿಗೆ ಸಂಸ್ಥೆಯಲ್ಲಿ ನೇರ ನೇಮಕಾತಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :10/04/2024.

ವಯೋ ಮಿತಿ :- ಕನಿಷ್ಟ 18 ವರ್ಷ ಪೂರೈಸಿರಬೇಕು
ಸಾಮಾನ್ಯ ವರ್ಗ ಗರಿಷ್ಠ ವಯಸ್ಸು  35 ವರ್ಷ.
2ಎ, 2ಬಿ, 3ಎ, 3ಬಿ ಗರಿಷ್ಠ ವಯಸ್ಸು 38 ವರ್ಷ.
ಪ.ಜ / ಪ. ಪಂಗಡ / ಪ್ರ 1 ಗರಿಷ್ಠ ವಯಸ್ಸು 40 ವರ್ಷ.

ಮಾಜಿ ಸೈನಿಕ / ಇಲಾಖೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷ.
ವೇತನ :-ಹುದ್ದೆಗಳಿಗೆ ಆಯ್ಕೆಯಾದ ಅರ್ಹರಿಗೆ ಮಾಸಿಕ ₹18,660 ರಿಂದ ₹25,300ವರೆಗೂ ವೇತನ ನೀಡಲಾಗುವುದು.

ಆಯ್ಕೆ ಮಾಡುವ ವಿಧಾನ :-ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ( Common Aptitude Test ) ಗಳಿಸಿದ ಅಂಕಗಳ ಶೇಕಡಾ 75% ಅಂಕಗಳನ್ನು ಮತ್ತು ಸದರಿ ಪರೀಕ್ಷೆಗೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯನ್ನು ಗಳಿಸಿರುವ ಅಂಕಗಳಲ್ಲಿ ಶೇಕಡಾ 25% ಅಂಕಗಳನ್ನು ಒಟ್ಟು ಮಾಡಿ ಮೆರಿಟ್ ಆಧಾರದ ಮೇಲೆ ಚಾಲ್ತಿಯಲ್ಲಿ ಇರುವ ಮೀಸಲಾತಿ ನಿಯಮಗಳ ಅನುಸಾರ 1:5 ಅನುಪಾತದಲ್ಲಿ ಅರ್ಹರ ಮುಖ್ಯ ಡಾಕ್ಯುಮೆಂಟ್ಸ್ ಪರೀಕ್ಷೆ ಮಾಡಿ ನಂತರ ದೇಹದಾರ್ಢ್ಯತೆ ಪರೀಕ್ಷೆಗೆ ಕರೆಯಲಾಗುವುದು.

ದೇಹದಾರ್ಢ್ಯತೆ :-
ಪುರುಷರಿಗೆ ಎತ್ತರ ~ 160 c.m.
ಮಹಿಳೆಯರಿಗೆ ಎತ್ತರ ~ 150 c.m.

ಅರ್ಜಿ ಶುಲ್ಕ :-ಸಾಮಾನ್ಯ, ಪ್ರವರ್ಗ, 2ಎ, 2ಬಿ, 3ಎ, 3ಬಿ ಅರ್ಜಿದಾರರಿಗೆ ₹750.
ಪ. ಜ / ಪ. ಪಂ , ಪ್ರ1, ಮಾಜಿ ಸೈನಿಕ, ಅಂಗವಿಕಲ ₹500. ಶುಲ್ಕವನ್ನು ಆನ್’ಲೈನ್ ಮೂಲಕ ಪಾವತಿ ಮಾಡಬಹುದು. https://cetonline.karnataka.gov.in/kea/kbknrk2023

ಅರ್ಜಿ ಸಲ್ಲಿಕೆ ಮಾಡುವ ವಿಧಾನ :-ಕರ್ನಾಟಕ ಪ್ರಾಧಿಕಾರದ ಅಧಿಕೃತ ವೆಬ್’ಸೈಟ್ ವಿಳಾಸಕ್ಕೆ ಭೇಟಿ ನೀಡಿ ಅನ್’ಲೈನ್  ಮೂಲಕ ಅರ್ಜಿ ಸಲ್ಲಿಸಬೇಕು. ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹುದ್ದೆಯ ಹೆಸರು : ನಿರ್ವಾಹಕ ಹುದ್ದೆ.
ಹುದ್ದೆಗಳ ಸಂಖ್ಯೆ : 2500 ಹುದ್ದೆಗೆ ಅರ್ಜಿ ಅಹ್ವಾನ ಮಾಡಲಾಗಿದೆ. ಮಿಕ್ಕ ಉಳಿದ ವೃಂದ – 2286 ಹುದ್ದೆ , ಕಲ್ಯಾಣ ಕರ್ನಾಟಕ ವೃಂದ – 214 ಹುದ್ದೆ.
ಉದ್ಯೋಗ ಸ್ಥಳ  :- ಕರ್ನಾಟಕ ( ಬೆಂಗಳೂರು )

ವಿದ್ಯಾ ಅರ್ಹತೆ :– ಪಿಯುಸಿ ( ಆರ್ಟ್ / ಕಾಮರ್ಸ್ / ಸೈನ್ಸ್ ) ಅಥವಾ 10+2 ICSE, CBSE ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯಿಂದ 3 ವರ್ಷ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು ಜೊತೆಗೆ ಮಾನ್ಯತೆ ಪಡೆದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್  ಹೊಂದಿರಬೇಕು.

ಅರ್ಜಿ ಸಲ್ಲಿಸುವ ದಿನಾಂಕ :-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 10/03/2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10/04/2024
ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ : 13/04/2024.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!