ಗ್ರಹಗಳು ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ನಾವು ಇಂದು ಮಕರ ರಾಶಿಯ ಬಗ್ಗೆ ತಿಳಿಯೋಣ.

ಈ ಮಕರ ರಾಶಿಯ ಜನರು ಹೆಚ್ಚು ಸುಂದರವಾಗಿ ಕಾಣುವರು. ಎಲ್ಲಾ 12 ರಾಶಿಗಳಲ್ಲಿ ಮಕರ ರಾಶಿಯಲ್ಲಿ ಜನಿಸಿದ ಜನರ ಗುಣ, ನಡತೆ, ಸ್ವಭಾವ ಯಾವ ಇರುತ್ತದೆ ಎಂದು ನೋಡೋಣ. ಮಕರ ರಾಶಿ ಭೂ ತತ್ವವನ್ನು ಸೂಚನೆ ಮಾಡುವ ರಾಶಿ ಆಗಿರುತ್ತದೆ. ಅದೇ ರೀತಿ ಈ ರಾಶಿಯಲ್ಲಿ ಜನಿಸಿದ ಜನರಿಗೆ ಶನಿ ಗ್ರಹ ಅಧಿಪತಿ ಸ್ಥಾನದಲ್ಲಿ ಇರುತ್ತದೆ. ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳ ಮುಖ ಹೆಚ್ಚು ಲಕ್ಷಣವಾಗಿ ಇರುತ್ತದೆ ಮತ್ತು ಅವರು ಬಹಳ ರೂಪವಂತರು ಕೂಡ ಆಗಿರುತ್ತಾರೆ.

ಎತ್ತರದ ಹಣೆ, ಕೆಂಪು ಬಣ್ಣದ ಛಾಯೆ, ಚೂಪಾದ ನೋಟ, ಬಹಳ ಉದ್ದನೆಯ ನಾಸಿಕ ಹೊಂದಿರುವ ಈ ಮಕರ ರಾಶಿಯ ಜನರು ನೋಡಲು ಹೆಚ್ಚು  ಆಕರ್ಷವಾಗಿ ಇರುವರು. ಮಕರ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಹೆಚ್ಚು ಸಂಯಮ ಹಾಗೂ ಸಹನೆ ಉಳ್ಳ ಜನರಾಗಿರುತ್ತಾರೆ. ಇನ್ನೊಂದು ಗುಣ ಇವರಲ್ಲಿ ಮೆಚ್ಚುಗೆ ಆಗುವುದು ಯಾವುದೆಂದರೆ ಇವರ ಒಳ್ಳೆಯ ಗುಣ ಸಿರಿವಂತರು ಅಥವ ಬಡವರು ಎಂದು ಭೇದ ಭಾವ ಸಹ ಮಾಡುವುದಿಲ್ಲ. ತಾರತಮ್ಯ ತೋರದೆ ಎಲ್ಲರನ್ನು  ಒಂದೇ ರೀತಿಯಲ್ಲಿ ನೋಡಿ ಹೊಂದಾಣಿಕೆ ಮಾಡಿಕೊಂಡು ಹೋಗುವ ಗುಣ ಮಕರ ರಾಶಿಯವರಿಗೆ ಇರುತ್ತದೆ.

ಇನ್ನು ಮಕರ ರಾಶಿಯ ಜನರು ಸ್ವಲ್ಪ ಸ್ವಾರ್ಥಿ ಉಳ್ಳವರು ಹಾಗೂ ಸ್ವಲ್ಪ ಅಹಂಕಾರದ ಗುಣ ಇರುವ ಜನರು ಹೌದು, ನಾನು ನನ್ನದು ಎಂಬ ಕ್ರೋಧದ ಮನಃಸ್ಥಿತಿಯನ್ನು ಈ ರಾಶಿಯವರು ಹೊಂದಿರುತ್ತಾರೆ. ಯಾವುದೇ ರೀತಿ ತೊಂದರೆಗಳು ಅಥವಾ ಕಷ್ಟಗಳು ಎದುರಾದರೂ ಈ ರಾಶಿಯವರು ಧೈರ್ಯಗೆಡುವುದಿಲ್ಲ. ಈ ರಾಶಿಯ ಜನರಿಗೆ ಶನಿ ಗ್ರಹ ಹೆಚ್ಚು ಪ್ರಬಲವಾಗಿ ಇರುತ್ತದೆ. ವಿಶೇಷವಾಗಿ ಶನಿ ಗ್ರಹ ಮಕರ ರಾಶಿಯ ಅಧಿಪತಿಯಾಗಿ ಇರುವ ಕಾರಣ ಇವರು ಹೆಚ್ಚು ಛಲವಾದಿಗಳು ಆಗಿರುವರು. ಬೇರೆಯವರಿಂದ ಮೋಸ ಹೋದರೆ ಆ ಜನರ ಮೇಲೆ ಇವರು ಸೇಡು ತೀರಿಸಿಕೊಳ್ಳುವ ಮನೋಭಾವನೆಯನ್ನು ಹೊಂದಿರುತ್ತಾರೆ.

ಒಂದೊಂದು ಸಂದರ್ಭದಲ್ಲಿ ಸ್ವತಃ ಅವರ ಮೇಲೆ ಅವರಿಗೆ ನಂಬಿಕೆ ಇರುವುದಿಲ್ಲ. ಆತ್ಮವಿಶ್ವಾಸವನ್ನು ಕಳೆದುಕೊಳ್ಳುವರು. ಮಕರ ರಾಶಿಯಲ್ಲಿ ಜನಿಸಿದ  ವ್ಯಕ್ತಿಗಳಿಗೆ ಶನಿ ಗ್ರಹದ ಸ್ಥಾನ ಉಚ್ಛ ಸ್ಥಾನ , ನೀಚ ಸ್ಥಾನ ಎಂದು ಬರುತ್ತದೆ. ಶನಿ ಗ್ರಹದ ಕರ್ಮ ಸ್ಥಾನ ಅಂದರೆ ಇದು 10ನೇ ರಾಶಿ ಆಗಿರುವುದರಿಂದ ದ್ವಾದಶ ಪುರದಲ್ಲಿ ಕರ್ಮ ಸ್ಥಾನ ಎನ್ನುವುದು ಶನಿ ಗ್ರಹವನ್ನು, ಶನಿ ಗ್ರಹ ಕರ್ಮ ಸ್ಥಾನದಲ್ಲಿ ಬಂದಿದ್ದರೆ. ಈ ರಾಶಿಯ ಜನರಿಗೆ ಹೆಚ್ಚು  ಮಾನಸಿಕ ಯಾತನೆ ಕೊಡುವರು.

ಹಣಕಾಸಿನ ಕೊರತೆ, ವ್ಯಾಪಾರದಲ್ಲಿ ಧನ ನಷ್ಟ, ದಾಂಪತ್ಯದಲ್ಲಿ ವಿರಸ, ಕೌಟುಂಬಿಕ ಸುಖವನ್ನು ಆಳು ಮಾಡುವ ಸನ್ನಿವೇಶಗಳು ಇರುತ್ತದೆ. ಈ ರಾಶಿಯ ಜನರು ಅದರ ಬಗ್ಗೆ ಜಾಗೃತಿಯಿಂದ ಇರಬೇಕಾಗುತ್ತದೆ. ಮಕರ ರಾಶಿಯ ಜನರು ಯಾರನ್ನು ಕೂಡ ಹೆಚ್ಚು ನಂಬಲು ಹೋಗುವುದಿಲ್ಲ. ಒಂದು ಪಕ್ಷ ನಂಬಿಕೆ ಇಟ್ಟರೆ ಆ ವ್ಯಕ್ತಿಯಿಂದ ಸಮಸ್ಯೆಗಳನ್ನು ಅನುಭವಿಸುತ್ತಾರೆ . ಯಾರನ್ನಾದರೂ ನಂಬುತ್ತೀರಾ ಅಂದರೆ ಬಹಳ ಎಚ್ಚರಿಕೆ ವಹಿಸಬೇಕು. ಅ ರೀತಿಯ ಜನರಿಂದ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ.

ಮಕರ ರಾಶಿಯವರು ಸ್ನೇಹ ಜೀವಿಗಳು ಅಲ್ಲ, ಎಲ್ಲರ ಜೊತೆ ಸ್ನೇಹ ಜೀವಿಯಾಗಿ ನಡೆದುಕೊಳ್ಳುವ ಮನೋಧರ್ಮ ಇವರಿಗೆ ಇರುವುದಿಲ್ಲ. ನ್ಯಾಯವಾಗಿ ಇರುವರು ಮತ್ತು ಪ್ರಾಮಾಣಿಕವಾಗಿ ಜೀವನ ಸಹ ನಡೆಸುವರು. ಈ ರಾಶಿಯ ಜನರಿಗೆ ವಂಶ, ಇತಿಹಾಸ, ಜಾತಿ, ಧರ್ಮ, ಪರಂಪರೆ, ಇದರ ಬಗ್ಗೆ ಬಹಳ ಗರ್ವ ಇರುತ್ತದೆ. ನಮ್ಮತನ ಎನ್ನುವುದು ಹೆಚ್ಚಾಗಿ ಇರುತ್ತದೆ. ದಾನ ಧರ್ಮಗಳಲ್ಲಿ ಉದಾರಿಯಾಗಿ ಇರುವರು. ದಾನ ಧರ್ಮ ಮಾಡುವುದರಲ್ಲಿ ಇವರಿಗೆ ಹೆಚ್ಚು ಆಸಕ್ತಿ ಇರುತ್ತದೆ.

ಮಕರ ರಾಶಿಯವರು ಕುಟುಂಬ, ಹೆಂಡತಿ, ಮಕ್ಕಳು, ಬಂಧು-ಬಳಗ ಎಲ್ಲರನ್ನು ಹೆಚ್ಚು ಪ್ರೀತಿ ಮತ್ತು ವಿಶ್ವಾಸದಲ್ಲಿ ಕಾಣುವರು. ಆದರೆ ಈ ರಾಶಿಯವರಿಗೆ ಅವರ ಬಳಗದಿಂದ ಸ್ವಲ್ಪ ಶತ್ರು ಕಾಟ ಇರುತ್ತದೆ. ಈ ಜನರ ಏಳಿಗೆ ಮತ್ತು ಪ್ರಗತಿಯನ್ನು ಕೆಲವರು ಸಹಿಸುವುದಿಲ್ಲ ಹಾಗೂ ದೃಷ್ಟಿ ದೋಷ ಮತ್ತು ಶತ್ರು ಭಾದೆ ಕಾಡುತ್ತದೆ ಇದರಿಂದ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಇವರು ಬಹಳ ಶ್ರಮಜೀವಿಗಳು ಎಂದರೆ ಒಂದು ಕೆಲಸ ಕೈಗೊಂಡರೆ ಅದರಿಂದ ಹಿಂದೆ ಸರಿಯುವ ಮನಸ್ಥಿತಿ ಈ ರಾಶಿಯ ಜನರಿಗೆ ಇರುವುದಿಲ್ಲ.

ಈ ರಾಶಿಯವರು ಬದುಕಿನಲ್ಲಿ ಅವರದ್ದೇ ಸಿದ್ಧಾಂತಗಳನ್ನು ಹೊಂದಿರುವರು. ಒಂದು ಚೌಕಟ್ಟಿನ ಒಳಗೆ ಬದುಕು ನಡೆಸುವ ಮನಸ್ಥಿತಿ ಅವರಿಗೆ ಇರುತ್ತದೆ. ಯಾರ ಮಾತಿಗೂ ಅವರು ಬೆಲೆ ಕೊಡುವುದಿಲ್ಲ. ಈ ರಾಶಿಯವರು ಬೇರೆಯವರ ಮೇಲೆ ಅವಲಂಬಿತ ಆಗುವುದಿಲ್ಲ. ಸ್ವತಂತ್ರವಾಗಿ ಬದುಕನ್ನು ನಡೆಸುವ ಮನಸ್ಥಿತಿ ಇರುತ್ತದೆ. ಅದೇ ರೀತಿ ಈ ರಾಶಿಯ ಜನರಿಗೆ ಪ್ರೀತಿ, ಪ್ರೇಮ ,ಪ್ರಣಯ ಈ ವಿಷಯದಲ್ಲಿ ಬಹಳ ಆಸಕ್ತಿ ಇರುತ್ತದೆ .

ಈ ರಾಶಿಯ ಜನ ಭಗ್ನ ಪ್ರೇಮಿಗಳಾಗುವ ಸಾಧ್ಯತೆ ಇದೆ. ಈ ರಾಶಿ 10ನೇ ಸ್ಥಾನದಲ್ಲಿ ಇರುವುದರಿಂದ 10ನೇ ಸ್ಥಾನವನ್ನು ಕರ್ಮ ಎಂದು ಹೇಳಲಾಗುತ್ತದೆ. ಕರ್ಮಕ್ಕೆ, ಕರ್ಮ ಗ್ರಹ ಶನಿ ಅಧಿಪತಿ ಆಗಿರುವುದರಿಂದ, ಈ ರಾಶಿಯ ಜನರಿಗೆ ಹೊಂದಿಕೆ ಆಗುವ ಕೆಲಸಗಳು ಲೋಹದ ಕೆಲಸ, ಆಟೋಮೊಬೈಲ್, ಆಯಿಲ್ ಗೆ ಸಂಬಂಧಪಟ್ಟ ಕೆಲಸ, ಮಣ್ಣಿನ ಕೆಲಸ ಈ ವಿಧವಾದ ಕೆಲಸಗಳು ಇವರಿಗೆ ಹೆಚ್ಚು ಮತ್ತು ಚೆನ್ನಾಗಿ ಆಗಿ ಬರುತ್ತದೆ.

ಈ ರಾಶಿಯವರಿಗೆ ಅದೃಷ್ಟ  ಕೊಡುವ ಸಂಖ್ಯೆ 1, 5, 6. ದುರಾದೃಷ್ಟ ಸಂಖ್ಯೆ 4 ಮತ್ತು 9 ಈ ಸಂಖ್ಯೆಗಳ ದಿನದಂದು ಯಾವುದೇ ಶುಭ ಕಾರ್ಯಗಳಿಗೆ ಹೋಗಬಾರದು. 1 – 5 – 6 ಎಲ್ಲವನ್ನು ಒಟ್ಟು ಮಾಡಿದರೆ 11 ಆಗುತ್ತದೆ ಈ 11 ಮತ್ತು 24 ಸಂಖ್ಯೆಗಳು ಈ ರಾಶಿಯವರಿಗೆ ಅದೃಷ್ಟದ ಸಂಖ್ಯೆ ಆಗಿರುತ್ತದೆ. ಈ ರಾಶಿಯವರಿಗೆ ಅದೃಷ್ಟ ತರುವ ಬಣ್ಣ ನೀಲಿ. ಇದು ಹೆಚ್ಚು ಹೊಂದಾಣಿಕೆ ಆಗುತ್ತದೆ. ಶನಿ ಗ್ರಹ ನೀಲಿ ಬಣ್ಣಕ್ಕೆ ಮರುಳಾಗುತ್ತದೆ. ಅದೇ ರೀತಿ ಹಸಿರು, ಶುಭ್ರ ಬಿಳಿ ಬಣ್ಣ ಕೂಡ ಆಗಿ ಬರುತ್ತದೆ. ಕಪ್ಪು ಬಣ್ಣ ಮತ್ತು ಕೆಂಪು ಬಣ್ಣ ಈ ರಾಶಿಯವರಿಗೆ ಆಗುವುದಿಲ್ಲ. ಆದ್ದರಿಂದ ಈ ರೀತಿಯ ಬಣ್ಣದ ಬಟ್ಟೆ ಖರೀದಿ ಮಾಡುವುದು ಬೇಡ.

ಮಕರ ರಾಶಿಯ ಜನರು ಸರಸ್ವತಿ ಮತ್ತು ಶಿವನನ್ನು ಹೆಚ್ಚು ಆರಾಧನೆ ಮಾಡುವರು. ಸಣ್ಣ ಪುಟ್ಟ ತೊಂದರೆಗಳು ಕೂಡ ಪರಿಹಾರ ಆಗುತ್ತದೆ. ಶಿವನ ಕೃಪೆಗೆ ಶನೇಶ್ವರ ಹೊಲಿಯುತ್ತಾನೆ. ಆರೋಗ್ಯದಲ್ಲಿ ಶೀತ ಭಾದೆ, ಚರ್ಮದ ಸಮಸ್ಯೆ, ಮಂಡಿ ನೋವು, ಮೂಳೆ ನೋವು, ನರಗಳಿಗೆ ಸಂಬಂಧಿಸಿದ ಖಾಯಿಲೆಗಳು ಬರುವ ಸಂದರ್ಭ ಎದುರಾಗಬಹುದು. ಖಿನ್ನತೆ, ಕಣ್ಣುಗಳು ಮಂಜಾಗುವುದು, ಶ್ವಾಸಕೋಶಕ್ಕೆ ಸಂಬಂಧಪಟ್ಟ ರೋಗಗಳ ಲಕ್ಷಣ ಇರುತ್ತದೆ ಹೆಚ್ಚು ಜಾಗೃತಿಯಿಂದ ಇರಬೇಕು ಮತ್ತು ಆರೋಗ್ಯದ ಕಡೆ ಗಮನ ಕೊಡಬೇಕು. ಮಾಡುವ ಕೆಲಸ ಕಾರ್ಯದಲ್ಲಿ ಸಮಸ್ಯೆಗಳು, ಸಾಲದ ತೊಂದರೆ, ಹಣಕಾಸಿನ ತೊಂದರೆ, ಕುಟುಂಬದ ಜಗಳ  ಈ ರೀತಿ ಹಲವಾರು ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಶನಿ ಗ್ರಹದಿಂದ ಸಂತಾನದಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಶನೇಶ್ವರ ದೇವಾಲಯಕ್ಕೆ ಎಳ್ಳು ಮತ್ತು ನೀಲಿ ವಸ್ತುವನ್ನು ದಾನ ಮಾಡಬೇಕು. ಶನಿದೇವರ ಶ್ಲೋಕವನ್ನು ಜಪ ಮಾಡುವುದು ಕೂಡ ಉತ್ತಮ ಫಲಗಳನ್ನು ಕೊಡುತ್ತದೆ. ಇದು ರಾಶಿಯ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!