ನಮ್ಮ ಭಾರತ ದೇಶದಲ್ಲಿ ಮೊಟ್ಟಮೊದಲು ಪೂಜಿಸಲ್ಪಟ್ಟ ದೇವರು ಶಿವಲಿಂಗ ಇದರ ಕುರಿತಾಗಿ ಸಾಕಷ್ಟು ಪುರಾವೆಗಳು ಇಂದಿಗೂ ಇವೆ. ಒಂದೊಂದು ಶಿವಲಿಂಗವು ಒಂದೊಂದು ಕಥೆ, ಮಹಿಮೆಯನ್ನು ಹೊಂದಿರುತ್ತದೆ ಹಾಗೆಯೆ ಗುಜರಾತ್ ರಾಜ್ಯದ ಒಂದು ಶಿವಲಿಂಗದ ಮಹಿಮೆ ಹಾಗೂ ನಿಗೂಢ ರಹಸ್ಯವನ್ನು ಈ ಲೇಖನದಲ್ಲಿ ನೋಡೋಣ

ಭೂಮಿ ಮೇಲೆ ಸನಾತನ ಧರ್ಮವನ್ನು ಸೃಷ್ಟಿ ಮಾಡಿದ ಏಕೈಕ ದೇವರು ಶಿವ. ಭಾರತ ದೇಶದಲ್ಲಿ ಎಷ್ಟು ಶಿವಲಿಂಗಗಳಿವೆ ಎಂದು ಪತ್ತೆ ಹಚ್ಚಲು ಇಂದಿಗೂ ಯಾರಿಂದಲೂ ಸಾಧ್ಯವಾಗಿಲ್ಲ. ಭೂಮಿ ಮೇಲಿನ ಒಂದೊಂದು ಶಿವಲಿಂಗವು ಒಂದೊಂದು ಚಮತ್ಕಾರಿ ಕಥೆಯನ್ನು ಸಾರುತ್ತವೆ. ನಮ್ಮ ದೇಶದಲ್ಲಿರುವ 12 ಜ್ಯೋತಿರ್ಲಿಂಗ ಹಾಗೂ ಸಹಸ್ರಾರು ಕೋಟಿ ಶಿವಲಿಂಗ ಮೀರಿಸುವ ಶಿವಲಿಂಗವೊಂದು ಗುಜರಾತ್ ರಾಜ್ಯದಲ್ಲಿದೆ, ಇಂತಹ ಚಮತ್ಕಾರಿ ಶಿವಲಿಂಗವನ್ನು ಇನ್ನೆಲ್ಲೂ ನೋಡಲು ಸಾಧ್ಯವಿಲ್ಲ. ಗುಜರಾತಿನ ಜುನಾಗಡ್ ನಗರದಿಂದ 123 ಕಿಲೋಮೀಟರ್ ಪ್ರಯಾಣ ಮಾಡಿದರೆ ದ್ರೋಣ ಎಂಬ ಊರು ಸಿಗುತ್ತದೆ ಅಲ್ಲಿ ದ್ರೋಣೇಶ್ವರ ಮಹಾದೇವ ದೇವಾಲಯವಿದೆ. ದ್ರೋಣಾಚಾರ್ಯರು ಈ ಸ್ಥಳಕ್ಕೆ ಬಂದು ತಪಸ್ಸು ಮಾಡಿ ತೀರ್ಥಲಿಂಗ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಈ ಶಿವಲಿಂಗದ ವಿಶೇಷತೆ ಎಂದರೆ ದಿನದ 24 ಗಂಟೆಯೂ ಲಿಂಗದ ಕಣ್ಣಿನಿಂದ ನೀರು ಬರುತ್ತಲೆ ಇರುತ್ತದೆ. ಸಂಶೋಧನೆಯಿಂದ ಈ ನೀರಿನಲ್ಲಿ ನೈಸರ್ಗಿಕ ಮೇಡಿಸಿನ್ ಇದ್ದು ಅನೇಕ ರೋಗಗಳು ನಿವಾರಣೆಯಾಗುತ್ತವೆ.

ಜುನಾಗಡ್ ನಗರದಿಂದ ದ್ರೋಣೆಶ್ವರ ಮಹಾದೇವ ದೇವಾಲಯಕ್ಕೆ 10 ನಿಮಿಷಕ್ಕೆ ಒಂದು ಸರ್ಕಾರಿ ಬಸ್ ಇದ್ದು ಫ್ರೈವೇಟ್ ಟ್ಯಾಕ್ಸಿ ಇವೆ, ಪ್ರತಿದಿನ 3000 ದಿಂದ 4000 ಭಕ್ತರು ಬರುತ್ತಾರೆ. ದೇವಸ್ಥಾನದಿಂದ 400 ಮೀಟರ್ ನಡೆದರೆ ಸುಂದರವಾದ ದ್ರೋಣ ಅಣೆಕಟ್ಟನ್ನು ವೀಕ್ಷಣೆ ಮಾಡಬಹುದು. ಮಹಾಭಾರತ ಯುದ್ಧ ನಡೆಯುವ ಮೊದಲು ದ್ರೋಣಾಚಾರ್ಯರು ಶಿವಲಿಂಗ ಇರುವ ಜಾಗಕ್ಕೆ ಬಂದಿದ್ದರು ಇಲ್ಲಿಯ ಜನರು ನೀರು ಸಿಗದೆ ಕಷ್ಟ ಪಡುತ್ತಿರುವುದನ್ನು ನೋಡಿ ದ್ರೋಣಾಚಾರ್ಯರು ಶಿವನ ಕುರಿತು ತಪಸ್ಸು ಮಾಡುತ್ತಾರೆ. ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷವಾಗಿ ದ್ರೋಣರು ಅಲ್ಲಿಯ ನೀರಿನ ಸಮಸ್ಯೆಯ ಬಗ್ಗೆ ಹೇಳುತ್ತಾರೆ ಆಗ ಶಿವನು ಶಿವಲಿಂಗವನ್ನು ಪ್ರತಿಷ್ಠಾಪಿಸಬೇಕು ಇದರಿಂದ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ತಿಳಿಸುತ್ತಾರೆ, ಭೂಮಿ ಇರುವವರೆಗೆ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಊರಿನ ಜನರು ಕೊನೆಯವರೆಗೆ ನಿನ್ನನ್ನು ನೆನೆಸಿಕೊಳ್ಳುತ್ತಾರೆ ಎಂದು ಶಿವನು ಹೇಳುತ್ತಾನೆ.

ನಂತರ ದ್ರೋಣಾಚಾರ್ಯರು ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡುತ್ತಾರೆ ಶಿವಲಿಂಗದ ಕಣ್ಣಿನಿಂದ ನೀರು ಬರಲು ಪ್ರಾರಂಭವಾಗುತ್ತದೆ. ಇಲ್ಲಿಯ ಜನರು ದ್ರೋಣಾಚಾರ್ಯರ ಮಹಾದೇವ ತೀರ್ಥ ಎಂದು ನಾಮಕರಣ ಮಾಡುತ್ತಾರೆ. ಆಗಿನ ಕಾಲದಲ್ಲಿ ಯಾವುದೆ ರೋಗವಿದ್ದರು ಈ ನೀರನ್ನು ಕುಡಿದು ವಾಸಿಮಾಡಿಕೊಳ್ಳುತ್ತಿದ್ದರು. 1416ನೆ ಇಸ್ವಿಯಲ್ಲಿ ಗುಜರಾತ್ ನ ಆಳ್ವಿಕೆ ಮಾಡುತ್ತಿದ್ದ ಅಹಮದ್ ಶಾ ಶಿವಲಿಂಗದ ಕಣ್ಣಿನಿಂದ ನೀರು ಬೀಳುವುದು ತಿಳಿದು ನೀರು ಎಲ್ಲಿಂದ ಬರುತ್ತದೆ ಎಂದು ಪತ್ತೆಹಚ್ಚಲು ಪ್ರಾರಂಭಿಸುತ್ತಾರೆ ಶಿವಲಿಂಗದ ಹಿಂದಿನ ಬೆಟ್ಟದಿಂದ ನೀರು ಬರುತ್ತಿರುವುದು ಗೊತ್ತಾಗುತ್ತದೆ

ಈ ಕಾರಣಕ್ಕೆ ಅಹಮದ್ ಶಾ ಇಡಿ ಬೆಟ್ಟವನ್ನು ಕೊರೆಸುತ್ತಾರೆ ಆದರೆ ಏನು ಪ್ರಯೋಜನವಾಗಲಿಲ್ಲ. ವಿಜ್ಞಾನಿಗಳು ಸಹ ಶಿವಲಿಂಗದ ಹಿಂದೆ ಇರುವ ನಾಗದಯಾ ಬೆಟ್ಟದಿಂದ ನೀರು ಬರುತ್ತದೆ ಆದರೆ ನೀರಿನ ಜಾಲ ಕಂಡುಹಿಡಿಯಲು ಯಾರಿಂದಲೂ ಇದುವರೆಗೂ ಸಾಧ್ಯವಾಗಿಲ್ಲ. ಶಿವಲಿಂಗದ ಮುಂದೆ ನಿಂತು ತಮ್ಮ ಕಷ್ಟಗಳನ್ನು ಹೇಳಿಕೊಂಡರೆ ಅದು ತಕ್ಷಣ ಈಡೇರುವುದಾದರೆ ಹರಿವ ನೀರು ಐದು ಪಟ್ಟು ಹೆಚ್ಚು ವೇಗವಾಗಿ ಹರಿಯುತ್ತದೆ. 2020ರಿಂದ ಶಿವಲಿಂಗಕ್ಕೆ ನಂದಿ ಮುಖವನ್ನು ಜೋಡಿಸಿ ನಂದಿ ಬಾಯಿಯಿಂದ ನೀರು ಬರುವಂತೆ ಮಾಡಿದ್ದಾರೆ. ಹೀಗೆ ಬರುವ ನೀರು ದೇವಸ್ಥಾನದ ಎದುರಿಗಿನ ಪುಷ್ಕರಣಿಗೆ ಸೇರುತ್ತದೆ. ಗುಜರಾತ್ ರಾಜ್ಯಕ್ಕೆ ಹೋದರೆ ತಪ್ಪದೆ ಈ ಶಿವಲಿಂಗದ ದರ್ಶನ ಮಾಡಿ ಬನ್ನಿ.

Leave a Reply

Your email address will not be published. Required fields are marked *