ಶುಕ್ರ ಗ್ರಹದ ಸಂಚಾರ ಮಕರ ರಾಶಿಯಲ್ಲಿ ಆಗುವುದರಿಂದ ಯಾವ ರೀತಿಯ ಫಲಗಳು ಈ ಮೂರು ರಾಶಿಗಳ ಮೇಲೆ ಬೀರುತ್ತದೆ ಎಂದು ನೋಡೋಣ. ಆ ಅದೃಷ್ಟವಂತ ರಾಶಿಗಳು ಯಾವವು ಎಂದು ತಿಳಿಯೋಣ. ಶುಕ್ರ ಗ್ರಹ ಫೆಬ್ರವರಿ ತಿಂಗಳಿನಲ್ಲಿ ಸ್ಥಾನ ಬದಲಾವಣೆ ಮಾಡುವುದು. ಇದರಿಂದ ಮೂರು ರಾಶಿಗಳ ಮೇಲೆ ಸಕಾರಾತ್ಮಕ ಪರಿವರ್ತನೆ ಆಗುತ್ತದೆ ಹಾಗೂ ಯಾವ ಮಂಗಳಕರ ಫಲ ದೊರಕುತ್ತದೆ.

ಮೇಷ ರಾಶಿ:-ಈ ರಾಶಿಯವರಿಗೆ ಹೆಚ್ಚು ಲಾಭದಾಯಕ, ಸುಖದಯಕ, ಭೋಗದಾಯಕ ಮತ್ತು ಹರ್ಷದಾಯಕವಾಗಿ ಇರುತ್ತದೆ. ಹೊಸ ಹೊಸ ಯೋಜನೆಗಳಲ್ಲಿ ಭವಿಷ್ಯವನ್ನು ರೂಪಣೆ ಮಾಡಿಕೊಳ್ಳಲು ಒಳ್ಳೆಯ ಕಾಲ.ಹೂಡಿಕೆ ಮಾಡುವುದರಿಂದ ಉತ್ತಮ ಫಲ ದೊರಕುತ್ತದೆ. ಕೆಲಸದ ಒತ್ತಡಗಳು ಹೆಚ್ಚಾಗುತ್ತದೆ. ಆದರೆ ತೊಂದರೆ ಕೊಡುವುದಿಲ್ಲ. ದೇವರ ಕಡೆ ಭಕ್ತಿ ಹೆಚ್ಚಿಗೆ ಮೂಡುತ್ತದೆ. ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡುವ ಮತ್ತು ಐಷಾರಾಮ ಜೀವನ ನಡೆಸುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ.

ಕಟಕ ರಾಶಿ :-ಹಿಂದಿನ ವರ್ಷಗಳಲ್ಲಿ ಹೆಚ್ಚು ಸಂಕಷ್ಟ ಅನುಭವಿಸಿದ ಕರ್ಕಾಟಕ ರಾಶಿಯವರಿಗೆ ಶುಕ್ರ ಗ್ರಹದ ಸ್ಥಾನ ಬದಲಾವಣೆ  ಹೆಚ್ಚು ಅನುಕೂಲ ಮಾಡುತ್ತದೆ. ಅವಮಾನ, ಅಪಮಾನ ಈ ರೀತಿಯ ತೊಂದರೆಗಳನ್ನು ಕಂಡ ಜೀವನದಲ್ಲಿ ಬೇಸತ್ತ ಜನರಿಗೆ ಈ ವರ್ಷ ಒಳ್ಳೆಯ ಕಾಲ.ಕಠಿಣ ಸಮಯ ಕಳೆದು ಹೋಗಿ ಒಳ್ಳೆಯ ಕಾಲ ಇದಾಗಿದೆ.  ಮನಸ್ಸು ಯಾವಾಗಲೂ ಸಂತೋಷದಿಂದ ಇರುತ್ತದೆ. ವಿವಾಹ ಭಾಗ್ಯ ಕೂಡಿ ಬರುತ್ತದೆ ಈ ಸಮಯದಲ್ಲಿ. ಪ್ರೇಮ ವಿವಾಹ ಕೂಡ ಸಫಲವಾಗುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುತ್ತದೆ ಮತ್ತು ಹಣ ಕಾಸಿನ ವಿಷಯದಲ್ಲಿ ಹೆಚ್ಚು ಆದಾಯ ಗಳಿಕೆ ಮಾಡುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಸುಮಧುರ ಸಂದರ್ಭ ಕಳೆಯಲು ಒಳ್ಳೆಯ ಸಾಧ್ಯತೆ ಇರುತ್ತದೆ.

ಮಕರ ರಾಶಿ :- ಮಕರ ರಾಶಿಗೆ ಶುಕ್ರ ಗ್ರಹ ಪ್ರವೇಶ ಮಾಡುವುದರ ಪರಿಣಾಮ ಹೆಚ್ಚು ಪ್ರಗತಿ ತಂದು ಕೊಡುತ್ತದೆ. ಆರೋಗ್ಯ ವೃದ್ಧಿ ಆಗುತ್ತದೆ ಮತ್ತು ಸಣ್ಣ ವಿಷಯಗಳು ಕೂಡ ದೊಡ್ಡ ದೊಡ್ಡ ಸಂತೋಷವನ್ನು ನೀಡುತ್ತದೆ. ಚಿನ್ನ ಅಭರಣದ ಖರೀದಿ ಅಥವ ಅದರಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಫಲ ಸಿಗುತ್ತದೆ. ವೃತ್ತಿ ಜೀವನದಲ್ಲಿ ಹೆಚ್ಚು ಪ್ರಗತಿ ಸಾಧಿಸಲು ಸಾಧ್ಯ ಇದೆ. ಅರ್ಥಿಕ ಸ್ಥಿತಿ ಕೂಡ ಆದಾಯ ಹೆಚ್ಚಾದಂತೆ ಅಭಿವೃದ್ದಿ ಆಗುತ್ತದೆ.
ಒಳ್ಳೆಯ ಯೋಜನೆಗಳು ಈಡೇರುತ್ತವೆ ಹಾಗೂ ಹೊಸ ಬದಲಾವಣೆಗಳು ಉಂಟಾಗುತ್ತವೆ. ಶುಕ್ರ ಗ್ರಹದ ದೆಸೆಯಿಂದ ಉತ್ತಮ ಫಲಗಳು ದೊರಕುತ್ತವೆ. ಇವು ಗ್ರಹಗಳ ಗೋಚರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಇದಕ್ಕೂ ಯಾವುದೇ ಸಂಬಂಧವಿಲ್ಲ. ಸಕಾರಾತ್ಮಕ ಚಿಂತನೆಗಳನ್ನು ಅಭಿವೃದ್ದಿ ಮಾಡಿಕೊಂಡರೆ ಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆ ತರುತ್ತದೆ. ಅದಕ್ಕೆ, ನಿರಂತರ ಪರಿಶ್ರಮದ ಅಗತ್ಯ ಇದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!