ಬದುಕಿನಲ್ಲಿ ನಮಗೆ ಯಾರು ಕೂಡ ಅವಕಾಶ ಕೊಡೋದಿಲ್ಲ, ನಾವೇ ಅವಕಾಶಗಳನ್ನ ಸೃಷ್ಟಿ ಮಾಡಿಕೊಳ್ಳಬೇಕು. ಆಗ ಮಾತ್ರ ಯಶಸ್ಸು ಕಾಣಬಹುದು. ನಾವು ಓದಿದ್ದು ನಮಗೆ ಕೆಲಸ ಸಿಕ್ಕಿಲ್ಲ ಎಂದು ಸರ್ಕಾರವನ್ನ ಕೆಲಸ ಕೊಡದ ಕಂಪೆನಿಗಳನ್ನ ದೂಷಿಸುವ ಬದಲು, ನಾವೇ ನಮ್ಮ ಸುತ್ತ ಇರುವ ವಿಚಾರಗಳನ್ನು ತಿಳಿದು, ನಾವೇ ಸ್ವಂತವಾಗಿ ಕೆಲಸ ಮಾಡಬಹುದು. ಈ ರೀತಿ ಸ್ವಂತ ಕೆಲಸ ಮಾಡುತ್ತಿರುವ ಈ ಮಹಿಳೆ ಪ್ರತಿ ತಿಂಗಳು 8 ಲಕ್ಷ ಸಂಪಾದನೆ ಮಾಡುತ್ತಾರೆ.
ಈ ಮಹಿಳೆಯ ಹೆಸರು ರೀತು ಕೌಶಿಕ, ಈಕೆಗೆ ಈಗ 31 ವರ್ಷ ವಯಸ್ಸು. ಹರಿಯಾಣ ರಾಜ್ಯದ ಕುಗ್ರಾಮಕ್ಕೆ ಸೇರಿದ ಮಹಿಳೆ ಇವರು. ಈಕೆಗೆ 16 ವರ್ಷ ಇದ್ದಾಗಲೇ ತಂದೆ ತಾಯಿ ಮದುವೆ ಮಾಡಿಸಿಬಿಟ್ಟರು. ಬಹಳಷ್ಟು ಆಸೆ ಕನಸುಗಳನ್ನು ಕಂಡಿದ್ದ ರೀತು ಅವರಿಗೆ ಒಳ್ಳೆಯ ಗಂಡ ಸಿಕ್ಕಿದ್ದು ಅದೃಷ್ಟ. ಮದುವೆ ನಂತರ ಓದಬೇಕು ಎಂದು ಆಸೆ ವ್ಯಕ್ತಪಡಿಸಿದ ರೀತು ಅವರಿಗೆ ಗಂಡ ಸಾಥ್ ನೀಡಿದರು.
ಮದುವೆ ಬಳಿಕ ಪಿಯುಸಿ ಮಾಡಿ, ಡಿಗ್ರಿ ಕೂಡ ಮುಗಿಸಿಕೊಂಡರು ನೀತು. ಬಳಿಕ ಆಕೆಗೆ ಯಾವುದಾದರೂ ಕೆಲಸ ಮಾಡಬೇಕು ಎನ್ನುವ ಯೋಚನೆ ಕೂಡ ಇತ್ತು, ಆಗ ಮನೆಯ ಹತ್ತಿರ ಮಹಿಳೆಯರು ಆನ್ಲೈನ್ ಮೂಲಕ ಬ್ಯಾಗ್ ಗಳನ್ನು ಖರೀದಿ ಮಾಡುತ್ತಿರುವುದನ್ನು ನೋಡಿ, ತನಗೆ ಬ್ಯಾಗ್ ಸ್ಟಿಚಿಂಗ್ ನಲ್ಲಿ ಆಸಕ್ತಿ ಇರುವ ಕಾರಣ ಗಂಡನ ಜೊತೆಗೆ ಈ ಬಗ್ಗೆ ಮಾತನಾಡಿದರು. ಗಂಡನಿಂದ ಕಂಪ್ಯೂಟರ್ ಬಳಕೆ ಮಾಡುವುದನ್ನು ಕಲಿತು, ವಿವಿಧ ಡಿಸೈನ್ ಗಳಲ್ಲಿ ಬ್ಯಾಗ್ ಗಳನ್ನು ಹೊಲೆದು ಫ್ಲಿಪ್ಕಾರ್ಟ್ ನಲ್ಲಿ ಮಾರಾಟ ಮಾಡುವುದಕ್ಕೆ ಶುರು ಮಾಡಿದರು.
ರೀತು ಅವರು ಹೊಲೆಯುತ್ತಿದ್ದ ಬ್ಯಾಗ್ ಡಿಸೈನ್ ಹಾಗೂ ಕ್ವಾಲಿಟಿ ಚೆನ್ನಾಗಿದ್ದ ಕಾರಣ ಹೆಚ್ಚು ಜನರು ಇವರ ಬ್ಯಾಗ್ ಗಳನ್ನು ಖರೀದಿ ಮಾಡುವುದಕ್ಕೆ ಶುರು ಮಾಡಿದರು. ಇದರಿಂದ ರೀತು ಅವರಿಗೆ ಹೆಚ್ಚು ಆರ್ಡರ್ಸ್, ಹೆಚ್ಚು ಸಂಪಾದನೆ ಆಗುವುದಕ್ಕೆ ಶುರುವಾಯಿತು. ಪ್ರಸ್ತುತ ರೀತು ಅವರು ಒಂದು ತಿಂಗಳಿಗೆ 8 ಲಕ್ಷ, 1 ವರ್ಷಕ್ಕೆ ಸರಿಸುಮಾರು 1ಕೋಟಿ ವರೆಗು ಸಂಪಾದನೆ ಮಾಡುತ್ತಾರೆ. ತಮ್ಮ ಪ್ಯಾಷನ್ ಫಾಲೋ ಮಾಡಿ, ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ ರೀತು ಕೌಶಿಕ್.