ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಲೆಬಾಳುವ ಮೊಬೈಲ್ ಫೋನ್, ಲ್ಯಾಪ್ ಟಾಪ್ ಗಳನ್ನೂ ಬಹಳಷ್ಟು ಜನ ಉಪಯೋಗಿಸುತ್ತಾರೆ, ಆದ್ರೆ ಕೆಲವೊಮ್ಮೆ ಇಂತಹ ಈ ಬೆಲೆಬಾಳುವ ಈ ವಸ್ತುಗಳು ಕಳೆದುಹೋದ್ರೆ ಇದನ್ನು ಪತ್ತೆ ಹಚ್ಚಿ ಮಾಲೀಕರಿಗೆ ತಲುಪಿಸುವ ಕಾರ್ಯ ಈ ಆಪ್ ಮೂಲಕ ಮಾಡಲಾಗುತ್ತದೆ. ಈ ಆಪ್ ಅನ್ನು ಪೊಲೀಸ್ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ.
ಈ ಆಪ್ ಅನ್ನು ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಅದನ್ನು ಬಳಸಬಹುದು ಅಷ್ಟೇ ಅಲ್ದೆ ಈ ಆಪ್ ಮೂಲಕ ಕಳೆದುಹೋದ ನಿಮ್ಮ ಬೆಲೆಬಾಳುವ ಮೊಬೈಲ್ ಫೋನ್, ಲ್ಯಾಪ್ ಟಾಪ್ ಮುಂತಾದವುಗಳನ್ನು ಮರಳಿ ಪಡೆಯಬಹುದು. ಈ ಆಪ್ ನಿಂದ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಬೇಕಿಲ್ಲ ಮೊಬೈಲ್ ಮೂಲಕ ದೂರು ನೀಡಬಹುದಾಗಿದ್ದು, ಈ ಆಪ್ ನ ವಿಶೇಷತೆ ಏನು ಅನ್ನೋದನ್ನ ಮುಂದೆ ನೋಡಿ. ಪೊಲೀಸ್ ಇಲಾಖೆ ಸಾರ್ವಜನಿಕರ ಅನುಕೂಲಕ್ಕಾಗಿ ಈ ಯೋಜನೆಯೊಂದನ್ನು ಆರಂಭಿಸಿದೆ. ಹೀಗಾಗಲೇ ಈ ಆ್ಯಪ್ ಅನ್ನು ಸುಮಾರು 50 ಸಾವಿರ ಕ್ಕೂ ಹೆಚ್ಚು ಜನ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಹೆಚ್ಚು ಮೊಬೈಲ್ ಹಾಗು ಲ್ಯಾಪ್ ಟಾಪ್ ಮುಂತಾದ ಬೆಲೆಬಾಳುವ ವಸ್ತುಗಳ ದೂರು ದಾಖಲಾಗಿವೆ.
ಇನ್ನು ಈ ಆ್ಯಪ್ ಮೂಲಕ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ 300 ಕ್ಕೂ ಹೆಚ್ಚು ಕಳೆದುಕೊಂಡ ಫೋನ್ ಗಳು ತಮ್ಮ ಮಾಲೀಕರ ಕೈ ಸೇರಿವೆ. ಹಾಗಾದರೆ ನೀವು ಕೂಡ ದೂರು ದಾಖಲು ಮಾಡಲು ಬಯಸುವುದಾದರೆ ಈ ಆಪ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಹಾಕಿಕೊಳ್ಳಬೇಕು ನಂತರ ಆನ್ಲೈನ್ ಮೂಲಕ ವರದಿ ಸಲ್ಲಿಸಬಹುದು ಈ ಆಪ್ ಹೆಸರು e-lost – report ಆಪ್ ಎಂಬುದಾಗಿ ಮುಖ್ಯವಾಗಿ ಇದರಲ್ಲಿ ಕಳೆದುಹೋದರೆ ಮಾತ್ರ ದೂರು ನೀಡತಕ್ಕದ್ದು ಯಾರಾದರೂ ಕದ್ದಿದ್ದರೆ ಅದನ್ನು ಠಾಣೆಗೆ ಹೋಗಿ ಖುದ್ದಾಗಿ ದೂರು ಸಲ್ಲಿಸಬೇಕಾಗುತ್ತದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ಆಸಕ್ತಿ ಇದ್ರೆ e-lost – report app ಅಥವಾ ಆನ್ಲೈನ್ ವೆಬ್ಸೈಟ್ ನಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ