ನಮ್ಮ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಈ ಎರಡು ಕೂಡ ನಮ್ಮ ದೇಶದ ರೈತರಿಗೆ ಆರ್ಥಿಕವಾಗಿ ಸಹಾಯ ಆಗುವ ಹಾಗೆ ಮಾಡುತ್ತದೆ. ಕಳೆದ ವರ್ಷ ಮಳೆ ಬೆಳೆ ಇಲ್ಲದ ಕಾರಣ ರಾಜ್ಯದ ರೈತರಿಗೆ ಸರಿಯಾದ ಮಳೆ ಇಲ್ಲದೆ, ಬೆಳೆ ಹಾನಿ ಉಂಟಾಗಿದೆ. ಹಾಗಾಗಿ ಮುಂದಿನ ಬೆಳೆಗೆ ಬೇರೆ ಎಲ್ಲೂ ಕೂಡ ರೈತರು ಹೆಚ್ಚು ಬಡ್ಡಿದರಕ್ಕೆ ಸಾಲ ಪಡೆಯಬಾರದು ಎಂದು ಸರ್ಕಾರವೇ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುವುದಕ್ಕೆ ಮುಂದಾಗಿದೆ.
ಈ ವೇಳೆ ರೈತರಿಗೆ 1 ಲಕ್ಷದವರೆಗು ಬಡ್ಡಿ ಸಿಗುತ್ತದೆ. ಇದಕ್ಕಾಗಿ ಸರ್ಕಾರವು 5700 ಕೋಟಿ ರೂಪಾಯಿಗಳನ್ನು ಮೀಸಲಾಗಿ ಇಟ್ಟಿದೆ. ಸರ್ಕಾರವು ರೈತರಿಗೆ ಹಲವು ಯೋಜನೆಗಳಿಂದ ಸಾಲ ನೀಡುತ್ತದೆ. ರಾಜ್ಯದ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಸರ್ಕಾರದಿಂದ ಈ ಸೌಲಭ್ಯ ಸಿಗುತ್ತಿದೆ. ಎಲ್ಲಾ ರೈತರು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಬಡ್ಡಿರಹಿತ ಸಾಲ ಸೌಲಭ್ಯವನ್ನು ಕಳೆದ 5 ವರ್ಷಗಳಿಂದ ರೈತರಿಗೆ ಕೊಡಲಾಗುತ್ತಿದೆ.
2022-23ನೇ ವರ್ಷದಲ್ಲಿ ಈಗಾಗಲೇ 32.43 ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕೃಷಿಯ ಸಹಕಾರಿ ಸಂಘಗಳ ಮೂಲಕ ಸಾಲದ ಹಣವನ್ನು ನೀಡಲಾಗಿದೆ. ಇದರಿಂದ ಸಾಲ ಕೊಡುತ್ತಿರುವಂಥ ಸಹಕಾರಿ ಸಂಘಗಳು, ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ಭರಿಸಲು, ರಾಜ್ಯ ಸರ್ಕಾರವು ಬಡ್ಡಿಗೆ ಸಹಾಯ ಧನವನ್ನು ನೀಡಲಾಗುತ್ತಿದೆ. ಸಹಕಾರಿ ಸಂಘಗಳು ಸಾಲ ಕೊಡುತ್ತಿವೆ, ಹಾಗಾಗಿ ರೈತರಿಗೆ ಸುಲಭವಾಗಿ ಸಾಲ ಸಿಗುತ್ತದೆ.
2023-24 ರಿಂದ 2027-28ರವರೆಗು ಸಹಕಾರಿ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಹಕಾರಿ ಸಂಘಗಳಿಗೆ ಬಡ್ಡಿಯ ಸಹಾಯಧನ ಸಿಗುತ್ತದೆ. 2022-23ನೇ ವರ್ಷದಲ್ಲಿ 32.57 ಲಕ್ಷ ರೈತರಿಗೆ 16683.57 ಕೋಟಿ ರೂಪಾಯಿಗಳ ಬೆಳೆ ವಿತರಣೆ ನಡೆಸಲಾಗಿದೆ. ಹಾಗಾಗಿ ಎಲ್ಲಾ ರೈತರು ಕೂಡ ಈ ಸಾಲ ಸೌಲಭ್ಯವನ್ನು ಪಡೆಯಬಹುದು.