2024ರ ಫೆಬ್ರವರಿ ತಿಂಗಳಿನಲ್ಲಿ ಧನಸ್ಸು ರಾಶಿಯವರ ಮಾಸ ಭವಿಷ್ಯದ ಬಗ್ಗೆ ತಿಳಿಯೋಣ. ರಾಶಿಚಕ್ರದ ಮೇಲೆ ಗ್ರಹಗಳ ಸ್ಥಾನ ಬದಲಾವಣೆ ಹೆಚ್ಚಿನ ಪ್ರಭಾವ ಬೀರುತ್ತದೆ. ಇದು ಕೇವಲ ಗೋಚರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಇದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ.
1ನೇ ತಾರೀಖು ಮಕರ ರಾಶಿಗೆ ಬುಧ ಗ್ರಹ ಪ್ರವೇಶ ಮಾಡುತ್ತಾನೆ. 5ನೇ ತಾರೀಖು ಮಕರ ರಾಶಿಗೆ ಕುಜ ಗ್ರಹ ಪ್ರವೇಶ ಮಾಡುತ್ತಾನೆ. 11ನೇ ತಾರೀಖು ಮಕರ ರಾಶಿಗೆ ಶುಕ್ರ ಪ್ರವೇಶ ಮಾಡ್ತಾನೆ. 13ನೇ ತಾರೀಖು ಕುಂಭ ರಾಶಿಗೆ ರವಿ ಗ್ರಹ ಪ್ರವೇಶ ಮಾಡ್ತಾನೆ. 19ನೇ ತಾರೀಖು ಕುಂಭ ರಾಶಿಗೆ ಬುಧ ಗ್ರಹ ಪ್ರವೇಶ ಮಾಡುತ್ತಾನೆ.
ಧನಸ್ಸು ರಾಶಿಗೆ ರವಿ ಗ್ರಹ 2 ಮತ್ತು 3ನೇ ಮನೆಯಲ್ಲಿ ಇರುತ್ತಾನೆ, ಕುಜ ಗ್ರಹ 1ನೇ ಮತ್ತು 2ನೇ ಮನೆಯಲ್ಲಿ ಇರುತ್ತಾನೆ, ಬುಧ ಗ್ರಹ 2 ಮತ್ತು 3ನೇ ಮನೆಯಲ್ಲಿ ಇರುತ್ತಾನೆ, ಗುರು ಗ್ರಹ 5ನೇ ಮನೆಯಲ್ಲಿ ಇರುತ್ತಾನೆ, ಶುಕ್ರ 1 ಮತ್ತು 2ನೇ ಮನೆಯಲ್ಲಿ ಇರುತ್ತಾನೆ, ಶನಿ ಗ್ರಹ 3ನೇ ಮನೆಯಲ್ಲಿ ಇರುತ್ತಾನೆ, ರಾಹು 4ನೆ ಮನೆಯಲ್ಲಿ ಹಾಗೂ ಕೇತು 10ನೇ ಮನೆಯಲ್ಲಿ ಸಂಚಾರ ಮಾಡುತ್ತಾರೆ.
ಗ್ರಹಗಳ ಸ್ಥಾನದ ಪ್ರಕಾರ, ಧನಸ್ಸು ರಾಶಿಯ ಮಾಸಿಕ ಭವಿಷ್ಯದ ಫಲಾನು ಫಲದ ಬಗ್ಗೆ ನೋಡೋಣ.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಳುಗೊಳ್ಳುವ ಯೋಗಗಳು ಇದ್ದಾವೇ, ಹಾಗೂ ಸ್ವತಃ ಧಾರ್ಮಿಕ ಕಾರ್ಯಗಳಿಗೆ ದೇಣಿಗೆ ಕೊಡುವ ಸಾಧ್ಯತೆ ಹೆಚ್ಚಿಗೆ ಇದೆ. ಸುಮ್ಮರು ಪುಣ್ಯ ಕ್ಷೇತ್ರಗಳನ್ನು ನೋಡಿ ಪುಣ್ಯ ಪಡೆಯುವ ಸಾಧ್ಯತೆ ಇದೆ.
ವ್ಯವಸಾಯ ಕ್ಷೇತ್ರದಲ್ಲಿ, ಹೈನುಗಾರಿಕೆ ಕ್ಷೇತ್ರದಲ್ಲಿ, ಹೋಟೆಲ್ ಬ್ಯುಸಿನೆಸ್ ಮಾಡುವವರಿಗೆ, ಕೃಷಿಕರಿಗೆ ತುಂಬ ಉತ್ತಮ ಲಾಭ ಸಿಗುತ್ತದೆ. ಭೂಮಿಯನ್ನು ಖರೀದಿ ಮಾಡುವ ಮತ್ತು ಮಾರಾಟ ಮಾಡುವ ಜನರಿಗೆ ಒಳ್ಳೆಯ ಕಾಲ ಈ ಫೆಬ್ರವರಿ ತಿಂಗಳು ಅದರಿಂದ ಉತ್ತಮ ಲಾಭ ಲಭಿಸುತ್ತದೆ.
ವಿದೇಶ ಪ್ರಯಾಣ ಮಾಡುವ ಯೋಗವಿದೆ. ನೂತನ ವಾಹನ ಕೊಂಡುಕೊಳ್ಳಲು ಸಕಾಲ. ಬಹಳ ಕಾಲದಿಂದ ಪಯತ್ನ ಮಾಡಿ ವಿಫಲಗೊಂಡ ಕೆಲಸ ಕಾರ್ಯಗಳು ಈ ತಿಂಗಳಿನಲ್ಲಿ ಯಶಸ್ಸಿವಿಯಾಗಿ ಪೂರ್ಣಗೊಳ್ಳುತ್ತದೆ.
ಉದ್ಯೋಗ ಅವಕಾಶಗಳು ದೊರಕುವುದು ಹಾಗೂ ಅದರಲ್ಲಿ ಅಭಿವೃದ್ದಿ ಸಿಗುತ್ತದೆ. ಯಾವುದಾದರೂ ಸೈಟ್ ಮೇಲೆ ಹೂಡಿಕೆ ಮಾಡಿದರೆ ಅದು ಲಾಭದಾಯಕ. ಮಂಗಳಕರ ಯೋಗ ರಾಜಕಾರಣಿಗಳಿಗೆ, ಸಿನೆಮಾ ನಟ ನಟಿಯರಿಗೆ ಹೊಸ ಹೊಸ ಪ್ರೊಜೆಕ್ಟ್ ಕೈ ಸೇರುವುದು ಕೀರ್ತಿ ಮತ್ತು ಹೆಸರು ತಂದು ಕೊಡುತ್ತದೆ.
ವಿಧ್ಯಾರ್ಥಿಗಳು ಉತ್ತಮವಾಗಿ ವ್ಯಾಸಂಗ ಕ್ಷೇತ್ರದಲ್ಲಿ ತೊಡಗುವುದು. ಅಲಂಕಾರಿಕ ಮತ್ತು ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುವುದು, ವಿದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಆಟೋಮೊಬೈಲ್ಸ್ ಮಾಡುವವರಿಗೆ ಕೂಡ ಅತ್ಯಧಿಕ ಲಾಭ ಲಭಿಸುತ್ತದೆ.
ಧನಸ್ಸು ರಾಶಿಯವರಿಗೆ ಈ ತಿಂಗಳು ಹೆಚ್ಚು ಪ್ರತಿಫಲಗಳನ್ನು ನೀಡುತ್ತವೆ. ಇನ್ನು ಹೆಚ್ಚು ಫಲಗಳು ದೊರಕಬೇಕು ಎಂದರೆ ಪರಿಹಾರಗಳನ್ನು ಮಾಡಬೇಕು. ಸುಬ್ರಮಣ್ಯ ಸ್ವಾಮಿಯ ಪೂಜೆ ಹಾಗೂ ಆ ಕ್ಷೇತ್ರಗಳಿಗೆ ಭೇಟಿ ನೀಡುವುದು ಶುಭಕರ ಮತ್ತು ಭಸ್ಮಾರ್ಚನೆ ಮಾಡಿಸುವುದು ಹೆಚ್ಚು ಮಂಗಳಕರ. ಶುಭ ಮತ್ತು ಅಶುಭ ನಮ್ಮ ಕೆಲಸ ಮತ್ತು ಕರ್ಮಗಳ ಮೇಲೆ ನಿರ್ಧಾರವಾಗುತ್ತದೆ. ದೇವರ ಆಸರೆ ಇಲ್ಲದೆ ನಾವು ಮುಂದೆ ಸಾಗಲು ಅಥವಾ ಒಂದು ಇಂಚು ಅಲುಗಾಡಲು ಸಾಧ್ಯವಿಲ್ಲ.