ರಾಜ್ಯದ ಮಹಿಳೆಯರಿಗೆ ಸಹಾಯ ಆಗಲಿ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಜಾರಿಗೆ 4 ತಿಂಗಳು ಕಲೆಯುತ್ತಿದೆ. ಸುಮಾರು ಮಹಿಳೆಯರಿಗೆ 3 ಕಂತಿನ ಹಣ ಕೂಡ ಬಂದಿದೆ. ಆದರೆ ಇನ್ನೂ ಸಾಕಷ್ಟು ಮಹಿಳೆಯರಿಗೆ ಮೊದಲ 2 ಕಂತುಗಳ ಹಣ ಬಿಟ್ಟು ಇನ್ನೇನು ಬಂದಿಲ್ಲ ಎನ್ನುತ್ತಿದ್ದಾರೆ. ಇತ್ತ ಸರ್ಕಾರ ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್ ಇವುಗಳ ಸಮಸ್ಯೆ ಇರೋದಕ್ಕೆ ಹಣ ಬಂದಿಲ್ಲ ಎಂದು ಹೇಳುತ್ತಿದೆ.

ವಿಚಾರಿಸಲು ಆಹಾರ ಇಲಾಖೆಗೆ ಹೋದರೆ ಅವರಲ್ಲಿ ಮಾಹಿರಿ ಇಲ್ಲ, ಬ್ಯಾಂಕ್ ನಲ್ಲಿ ವಿಚಾರಿಸಿ ಎನ್ನುತ್ತಾರೆ, ಬ್ಯಾಂಕ್ ಗೆ ಹೋದರೆ ನಮಗೆ ಗೊತ್ತಿಲ್ಲ ಆಹಾರ ಇಲಾಖೆಗೆ ಹೋಗಿ ಅಂತ ಹೇಳುತ್ತಾರ್3 ಎಂದು ಮಹಿಳೆಯರು ತಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಾ ಇಲ್ವಾ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಮಹಿಳೆಯರು ಹೇಳುವ ಪ್ರಕಾರ ಅವರ ಬ್ಯಾಂಕ್ ಅಕೌಂಟ್ ಸರಿಯಾಗಿಯೇ ಇದೆ, ಸರ್ಕಾರದ ಸಮಸ್ಯೆ ಇಂದಲೇ ಹಣ ಬಂದಿಲ್ಲ.

ಹೀಗಾಗಿ ಇದು ಸರ್ಕಾರದ ತೊಂದರೆಯೇ ಎಂದು ಗೊತ್ತಾಗುತ್ತಿದೆ. ಸರ್ಕಾರವು ಈ ಸಮಸ್ಯೆಗಳನ್ನು ಸರಿ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣವು ಕೂಡ ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ ಜಮೆ ಆಗಿದ್ದು, ನಿಮ್ಮ ಖಾತೆಗೆ ಹಣ ಬಂದ ಕೂಡಲೇ ಎಸ್.ಎಂ.ಎಸ್ ಬರುತ್ತದೆ. ಒಂದು ವೇಳೆ ನಿಮಗೆ ಎಸ್.ಎಂ.ಎಸ್ ಬಂದಿಲ್ಲ ಎಂದರೆ ಸರ್ಕಾರದ ಈ ಹೊಸ ಲಿಂಕ್ ಗೆ ಭೇಟಿ ನೀಡುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ಮೊದಲಿಗೆ ನೀವು ಈ https://mahitikanaja.karnataka.gov.in/Service/Service/3136 ಲಿಂಕ್ ಗೆ ಭೇಟಿ ನೀಡಿ ಈ ಲಿಂಕ್ ನ ಇಸರ್ವಿಸಸ್ ವಿಭಾಗದಲ್ಲಿ, ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಇಲ್ಲಿ ನೀವು 12 ಅಂಕಿಗಳ ರೇಷನ್ ಕಾರ್ಡ್ ನಂಬರ್ ಅನ್ನು ನಮೂದಿಸಿ. ಈಗ ಓಪನ್ ಆಗುವ ಹೊಸ ಪೇಜ್ ನಲ್ಲಿ, ಅಪ್ಲಿಕೇಶನ್ ಸ್ಟೇಟಸ್, ಅರ್ಜಿ ಅನುಮೋದನೆ ಆದ ದಿನಾಂಕ, ಪೇಮೆಂಟ್ ಡೀಟೇಲ್ಸ್, ಇದೆಲ್ಲವೂ ಆಯ್ಕೆ ಬರುತ್ತದೆ. ಇದರಲ್ಲಿ Details ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಈಗ ತಿಂಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಅಕೌಂಟ್ ಗೆ ಬಂದಿದ್ಯಾ ಎನ್ನುವುದನ್ನು ತೋರಿಸುತ್ತದೆ. ಈ ರೀತಿಯಾಗಿ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ಚೆಕ್ ಮಾಡಬಹುದು. ಒಂದು ವೇಳೆ ನಿಮಗೆ ಈ ರೀತಿಯಾಗಿ ಸರಿಯಾದ ಮಾಹಿತಿ ಸಿಗಲಿಲ್ಲ ಎಂದರೆ, ಹತ್ತಿರದ CDPO ಕಚೇರಿಗೆ ಭೇಟಿ ನೀಡಿ ನಿಮ್ಮ ಅಪ್ಲಿಕೇಶನ್ ಬಗ್ಗೆ ವಿಚಾರಿಸಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!