ನಮ್ಮ ರಾಜ್ಯದ ವಿವಿಧ ಇಲಾಖೆಗಳಲ್ಲಿ ಸಾವಿರಾರು ಸರ್ಕಾರಿ ಕೆಲಸದ ಪೋಸ್ಟ್ ಗಳು ಖಾಲಿ ಇದೆ. ಅವುಗಳನ್ನು ಹಂತ ಹಂತವಾಗಿ ಭರ್ತಿ ಮಾಡುವುದಾಗಿ ಸರ್ಕಾರದಿಂದ ಈಗಾಗಲೇ ಸೂಚನೆ ಸಿಕ್ಕಿದೆ. ನೀವು ಕೂಡ ಸರ್ಕಾರಿ ಕೆಲಸಕ್ಕಾಗಿ ಕಾದು ಕುಳಿತಿದ್ದರೆ, ಈ ಸಂತೋಷದ ಸುದ್ದಿ ನಿಮಗಾಗಿ. KEA ನೀಡಿರುವ ಮಾಹಿತಿಯ ಅನುಸಾರ, 5000 ಕ್ಕಿಂತ ಹೆಚ್ಚು ಹುದ್ದೆಗಳು ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದು, ಸರ್ಕಾರ ಅವುಗಳನ್ನು ಭರ್ತಿ ಮಾಡಲಿದೆ.
ಈ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದು, ಖಾಲಿ ಇರುವ ಹುದ್ದೆಗಳ ಪೈಕಿ KSRTC ಯಲ್ಲಿ ಹೆಚ್ಚು ಹುದ್ದೆಗಳು ಖಾಲಿ ಇದೆ. SSLC ಪಿಯುಸಿ ಓದಿರುವವರಿಗೆ ಕೆಲಸ ಸಿಗಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KKRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ (RGUHS), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKSRTC), ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿ (KUWSDB)
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ಸಂಸ್ಥೆ (Karnataka Soap and Detergents Limited), ಕಲ್ಯಾಣ ಕರ್ನಾಟಕ ಪ್ರದೇಶ ಸ್ಥಳೀಯ ಸಂಸ್ಥೆಗಳು ಇಲ್ಲೆಲ್ಲಾ ಖಾಲಿ ಇರುವ ಹುದ್ದೆಗಳು ಭರ್ತಿ ಆಗಲಿದೆ. ಖಾಲಿ ಇರುವ ಹುದ್ದೆಗಳ ವಿವರ ಹೀಗಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (KUWDB) ಯಲ್ಲಿಸಹಾಯಕ ಇಂಜಿನಿಯರ್ (Civil) 50 ಹುದ್ದೆಗಳು, ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆ (Group C) 14 ಹುದ್ದೆಗಳು ಖಾಲಿ ಇದೆ.
ಬೃಹತ್ ಬೆಂಗಳೂರು ಮಹಾನಗರ ಸಾರಿಗೆ(BMTC)ಯಲ್ಲಿ ನಿರ್ವಾಹಕ – 2500 ಹುದ್ದೆಗಳು, ಸಹಾಯಕ ಲೆಕ್ಕಿಗ – 1, ಸ್ಟಾಫ್ ನರ್ಸ್ – 1, ಫಾರ್ಮಾಸಿಸ್ಟ್ – 1, ಅಧಿಕಾರಿ ಲೆಕ್ಕಪತ್ರ ಮಾರುಕಟ್ಟೆ Group B – 6, ಅಧಿಕಾರಿ ಲೆಕ್ಕಪತ್ರ Group B – 1, ಕಿರಿಯ ಅಧಿಕಾರಿ QAD – 2, ಕಿರಿಯ ಅಧಿಕಾರಿ R & D – 1, ಕಿರಿಯ ಅಧಿಕಾರಿ ಉತ್ಪಾದನೆ ನಿರ್ವಹಣೆ – 2, ಕಿರಿಯ ಅಧಿಕಾರಿ ಸಾಮಗ್ರಿ / ಉಗ್ರಾಣ ವಿಭಾಗ – 2, ಕಿರಿಯ ಅಧಿಕಾರಿ ಉತ್ಪಾದನೆ ನಿರ್ವಹಣೆ – 1, ಉಪ ಪ್ರಧಾನ ವ್ಯವಸ್ಥಾಪಕರು ಮಾರುಕಟ್ಟೆ Group A – 1, ಸಹಾಯಕ ಪ್ರಧಾನ ವ್ಯವಸ್ಥಾಪಕರು ಮಾರ್ಕೆಟ್ – 1, ನಿರ್ವಾಹಕರು ಮಾರುಕಟ್ಟೆ Group A – 1, ಅಧಿಕಾರಿ ಮಾರುಕಟ್ಟೆ Group A – 2, ಕಿರಿಯ ಅಧಿಕಾರಿ ಮಾರುಕಟ್ಟೆ Group C – 1, ಮಾರಾಟ ಪ್ರತಿನಿಧಿ ಮಾರುಕಟ್ಟೆ Group C – 4, ಕಿರಿಯ ಮಾರಾಟ ಪ್ರತಿನಿಧಿ ಮಾರ್ಕೆಟ್ Group C – 3, ಅಸಿಸ್ಟೆಂಟ್ ಆಪರೇಟರ್ ಅರೆಕುಶಲ Group D – 11ಹುದ್ದೆಗಳು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(RGUHS)ಯಲ್ಲಿ, ಸಹಾಯಕ ಗ್ರಂಥಪಾಲಕ – 1, ಜೂನಿಯರ್ ಪ್ರೋಗ್ರಾಮರ್ – 5, ಸಹಾಯಕ ಇಂಜಿನಿಯರ್ 1 ಸಹಾಯಕ 12, ಕಿರಿಯ ಸಹಾಯಕ ಹುದ್ದೆ 25 ಹುದ್ದೆಗಳು ಖಾಲಿ ಇದೆ..
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKSRTC) ಯಲ್ಲಿ, ಸಹಾಯಕ ಆಡಳಿತಾಧಿಕಾರಿ ಹುದ್ದೆ (Grade B) – 3, ಸಹಾಯಕ ಲೆಕ್ಕಾಧಿಕಾರಿ – 2, ಸಹಾಯಕ ಅಂಕಿಸಂಖ್ಯಾಧಿಕಾರಿ – 1, ಸಹಾಯಕ ಉಗ್ರಾಣಾಧಿಕಾರಿ – 2, ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ – 7, ಸಹಾಯಕ ಕಾನೂನು ಅಧಿಕಾರಿ – 7, ಸಹಾಯಕ ಅಭಿಯಂತರ ಖಾಲಿ ಹುದ್ದೆ(ಕಾಮಗಾರಿ) – 1 ಹುದ್ದೆಗಳು ಖಾಲಿ ಇದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಯಲ್ಲಿ ಸಹಾಯಕ ಲೆಕ್ಕಿಗ – 15, ನಿರ್ವಾಹಕ – 1737 ಹುದ್ದೆಗಳು ಖಾಲಿ ಇದೆ. ಶೀಘ್ರದಲ್ಲೇ ಈ ಹುದ್ದೆಗಳ ನೇಮಕಾತಿ ಬಗ್ಗೆ ಸರ್ಕಾರ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.