ಸುಲಭವಾಗಿ ಕೇವಲ ಐದು ನಿಮಿಷಗಳಲ್ಲಿ ರುಚಿಯಾದ ಹಾಗೂ ಪ್ರೊಟೀನ್ ಹೆಚ್ಚಿಸುವಂತಹ ಆರೋಗ್ಯಕ್ಕೆ ಒಳ್ಳೆಯದಾಗಿರುವಂತಹ ಲಾಡನ್ನು ಹೇಗೆ ತಯಾರಿಸುವುದು ಅನ್ನೋದನ್ನ ನೋಡೋಣ. ಇದನ್ನ ಮಾಡೋದು ಹೇಗೆ ಏನೆಲ್ಲ ಸಾಮಗ್ರಿಗಳು ಬೇಕು ಅನ್ನೋದನ್ನ ನೋಡೋಣ.
ಬೇಕಾಗಿರುವ ಸಾಮಗ್ರಿಗಳು :ಬಿಳಿ ಎಳ್ಳು ಒಂದು ಕಪ್, ಖರ್ಜೂರ ಬಿಳಿ ಎಳ್ಳಿನ ಅಳತೆ ಕಪ್ ನಲ್ಲಿ 2 ಕಪ್ ,ಒಣ ಕೊಬ್ಬರಿ ತುರಿ ಅದೇ ಅಳತೆಯಲ್ಲಿ ಅರ್ಧ ಕಪ್, ಏಲಕ್ಕಿ ಪುಡಿ
ಮಾಡುವ ವಿಧಾನ : ಒಂದು ಪ್ಯಾನ್ ಸ್ಟೋವ್ ಮೇಲೆ ಇಟ್ಟು ಅದಕ್ಕೆ ಒಂದು ಕಪ್ ಬಿಳಿ ಎಳ್ಳನ್ನು ಹಾಕಿ ಹಾಗೆ ಸಣ್ಣ ಉರಿಯಲ್ಲಿ ಸ್ವಲ್ಪ ಕೆಂಪಗೆ ಆಗುವ ತನಕ ಹುರಿದುಕೊಳ್ಳಬೇಕು. ನಂತರ ಒಂದು ಪ್ಲೇಟಿನಲ್ಲಿ ಹಾಕಿ ತಣ್ಣಗಾಗಲು ಬಿಟ್ಟು ತಣ್ಣಗಾದ ನಂತರ ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ತರಿ ತರಿಯಾಗಿ ಪುಡಿ ಮಾಡಿಟ್ಟುಕೊಳ್ಳಬೇಕು. ಖರ್ಜೂರ ಬೀಜ ತೆಗೆದು ಚೂರು ಮಾಡಿ ಎಳ್ಳಿನ ಪುಡಿಗೆ ಸೇರಿಸಿ ಅದಕ್ಕೆ ಅರ್ಧ ಕಪ್ ಒಣಕೊಬ್ಬರಿ ತುರಿಯನ್ನು ಹಾಗೂ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಬೇಕು. ಇವೆಲ್ಲವನ್ನೂ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮತ್ತೆ ಮಿಕ್ಸಿ ಜಾರಿಗೆ ಹಾಕಿ ನೀರು ಸೇರಿಸದೇ ಪುಡಿ ಮಾಡಿಕೊಂಡು ನಂತರ ಉಂಡೆ ಕಟ್ಟಿಕೊಳ್ಳಬೇಕು.
ಖರ್ಜೂರದಲ್ಲಿ ವಿಟಾಮಿನ್ಸ್, ಕ್ಯಾಲ್ಶಿಯಂ ಹೆಚ್ಚಾಗಿ ಇರುವುದರಿಂದ ಇದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಿಂದಾಗಿ ಮೂಳೆ ಸವೆತ ಇರಲ್ಲ . ಮಳೆಗಾಲ ಹಾಗೂ ಚಳಿಗಾಲದಲ್ಲಿ ಉಂಟಾಗುವಂತಹ ಕೀಲುನೋವು ಸಹ ಕಡಿಮೆ ಆಗುತ್ತದೆ.