ಸಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಹೊಂದಿರುತ್ತಾರೆ. ಅವರೆಲ್ಲರೂ ಸಹ ತಮ್ಮ ಗ್ಯಾಸ್ ಸಿಲಿಂಡರ್ ವಿಷಯಕ್ಕೆ ekyc ಮಾಡಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಸರ್ಕಾರ ಕೂಡ ekyc ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಒಂದು ವೇಳೆ ನೀವು ಇನ್ನು ಕೂಡ ekyc ಮಾಡಿಸಿಲ್ಲ ಎಂದರೆ ಮೊಬೈಲ್ ನಲ್ಲಿಯೇ ಸುಲಭವಾಗಿ ekyc ಮಾಡಿಸುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ ನೋಡಿ..

ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರ್ ಇಂದ Indian Oil One ಆಪ್ ಅನ್ನು ಡೌನ್ಲೋಡ್ ಮಾಡಬೇಕು.
ಈ ಆಪ್ ಓಪನ್ ಮಾಡಿ, ಮೊದಲಿಗೆ ರಿಜಿಸ್ಟರ್ ಆಗಬೇಕು ಅಥವಾ ಲಾಗಿನ್ ಆಗಬೇಕು. ರಿಜಿಸ್ಟರ್ ಆಗಲು ಅಲ್ಲಿ ಕೇಳುವ ಫೋನ್ ನಂಬರ್ ಹಾಗೂ ಇನ್ನಿತರ ಮಾಹಿತಿಗಳನ್ನು ಹಾಕಬೇಕಿ, ಫೋನ್ ಗೆ ಬರುವ ಓಟಿಪಿಯನ್ನು ಹಾಕುವ ಮೂಲಕ ಆಯೋ ಗೆ ರಿಜಿಸ್ಟರ್ ಆಗಬಹುದು. ಆಪ್ ನ ಹೋಮ್ ಪೇಜ್ ನಲ್ಲಿರುವ 3 ಲೈನ್ ಗಳ ಮೇಲೆ ಕ್ಲಿಕ್ ಮಾಡಿದರೆ, My Profile ಎನ್ನುವ ಆಯ್ಕೆ ಕಾಣುತ್ತದೆ.

*ಅದನ್ನು ಸೆಲೆಕ್ಟ್ ಮಾಡಿದಾಗ, ನಿಮ್ಮ ಗ್ಯಾಸ್ ಸಿಲಿಂಡರ್ ಯಾರ ಹೆಸರಿಗೆ ಲಿಂಕ್ ಆಗಿದೆಯೋ ಅವರ ಮೊಬೈಲ್ ನಂಬರ್ ನ ಕೊನೆಯ 4 ಡಿಜಿಟ್, LPG ID, ಸಬ್ಸಿಡಿ, ಇದೆಲ್ಲದರ ಮಾಹಿತಿಯನ್ನು ತೋರಿಸುತ್ತದೆ. ಸಬ್ಸಿಡಿ ಪಡೆಯಲು ನೀವು ಅರ್ಹತೆ ಹೊಂದಿದ್ದೀರಿ ಎಂದರೆ, ಆ ಆಯ್ಕೆಯ ಪಕ್ಕ yes ಎಂದು ಬರೆದಿರುತ್ತದೆ. ಇನ್ನು ಸ್ಕ್ರಾಲ್ ಮಾಡಿ ಹೋದಾಗ, ekyc ಎನ್ನುವ ಆಪ್ಶನ್ ಗ್ರೀನ್ ಟಿಕ್ ಆಗಿದ್ದರೆ, ekyc ಆಗಿದೆ ಎಂದು ಅರ್ಥ. ಆಗಿಲ್ಲ ಎಂದರೆ Rekyc ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

*ಅಲ್ಲಿ ಬರುವ ಮಾಹಿತಿಯನ್ನು ಓದಿ, ಚೆಕ್ ಬಾಕ್ಸ್ ಅನ್ನು ರೈಟ್ ಮಾರ್ಕ್ ಕ್ಲಿಕ್ ಮಾಡಿ, ಇದರ ಕೆಳಗೆ ಫೇಸ್ ಸ್ಕ್ಯಾನ್ ಎನ್ನುವ ಆಪ್ಶನ್ ಬರುತ್ತದೆ. ಅದನ್ನು ಸೆಲೆಕ್ಟ್ ಮಾಡಿ. ಈಗ ನೀವು ಫೇಸ್ ಸ್ಕ್ಯಾನ್ ಮಾಡಲು ಪ್ಲೇ ಸ್ಟೋರ್ ನಲ್ಲಿ Face Authentication ಎನ್ನುವ ಆಪ್ ಡೌನ್ಲೋಡ್ ಮಾಡಬೇಕಾಗುತ್ತದೆ.

*ಆಪ್ ಇನ್ಸ್ಟಾಲ್ ಮಾಡಿ, ಫೇಸ್ ಸ್ಕ್ಯಾನ್ ಮಾಡಿದರೆ ಫೇಸ್ ಡಿಟೇಕ್ಟ್ ಆಗುತ್ತದೆ. ಇದೆಲ್ಲವೂ ನಿಮ್ಮ ಫೋನ್ ನ front camera ಇಂದ ನಡೆಯುತ್ತದೆ. ಇದೆಲ್ಲವನ್ನು ಮುಗಿಸಿ submit ekyc ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿದರೆ, ಏಕ್ಯ್ಚ್ ಪ್ರಕ್ರಿಯೆ ಮುಗಿಯುತ್ತದೆ. ಸರಿಯಾಗಿ ಆಗಿದ್ಯಾ ಎಂದು ಮತ್ತೆ ನೀವು ekyc ಸ್ಟೇಟಸ್ ಚೆಕ್ ಮಾಡಿ ತಿಳಿದುಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!