Govt Housing Scheme 2024: ನಮ್ಮ ಭಾರತ ಸರ್ಕಾರವು 1985 ರಲ್ಲಿ ದೇಶದ ಬಡಜನರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವುದಕ್ಕಾಗಿ ಇಂದಿರಾಗಾಂಧಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯ ಮೂಲಕ ಕಷ್ಟದಲ್ಲಿರುವವರಿಗೆ ಮನೆ ನೀಡಲಾಗಿತ್ತು, ಮನೆ ಕಟ್ಟಿಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಲೋನ್ ಅಥವಾ ಇನ್ನಿತರ ಆರ್ಥಿಕ ಸೌಲಭ್ಯ ಸಿಗದ ಕಾರಣ ಹೀಗೆ ಆಗಿರುವುದಿಲ್ಲ. ಅಂಥವರಿಗೆ ಮತ್ತೊಮ್ಮೆ 2015ರಲ್ಲಿ ಈ ಯೋಜನೆಯನ್ನು ಪಿಎಮ್ ಆವಾಸ್ ಯೋಜನಾ ಎನ್ನುವ ಹೆಸರಿನಲ್ಲಿ ಜಾರಿಗೆ ತರಲಾಯಿತು.

ಈ ಯೋಜನೆಯ ಮೂಲಕ ಈಗ ಲಕ್ಷಕ್ಕಿಂತ ಹೆಚ್ಚಿನ ಜನರಿಗೆ ಹೊಸದಾಗಿ ಮನೆ ಕಟ್ಟಿಕೊಡಲಾಗುತ್ತದೆ. 2024ರ ವರ್ಷ ಮುಗಿಯುವ ವೇಳೆಗೆ ನಮ್ಮ ದೇಶದಲ್ಲಿ ಬಡತನದಲ್ಲಿದ್ದು, ಸ್ವಂತ ಮನೆ ಇಲ್ಲದ ಎಲ್ಲಾ ಜನರಿಗೆ ಮನೆ ನಿರ್ಮಿಸುವ ಪ್ಲಾನ್ ಹೊಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದು, ಆವಾಸ್ ಯೋಜನೆಯ ಮೂಲಕ ಜನರಿಗೆ ಸಿಗುವ ಸಹಾಯಧನದ ಮೊತ್ತ ಜಾಸ್ತಿ ಆಗಿದೆ ಎಂದು ತಿಳಿಸಿದ್ದಾರೆ..

ಬಡವರ್ಗದವರು ಈ ಯೋಜನೆಯ ಮೂಲಕ ಸ್ವಂತ ಮನೆ ಮಾಡಿಕೊಳ್ಳಲು, ತಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಹೋಗಿ ಪಿಎಮ್ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆ ಯಾರಿಗೆಲ್ಲಾ ಲಭ್ಯವಾಗುತ್ತದೆ ಎಂದು ನೋಡುವುದಾದರೆ, ಮೊದಲನೆಯದಾಗಿ ನಮ್ಮ ದೇಶದ ಪ್ರಜೆಗಳಿಗೆ ಸಿಗುತ್ತದೆ. EWS ಹಾಗೂ LIG ವರ್ಗದವರು ಆವಾಸ್ ಯೋಜನೆಯ ಸೌಲಭ್ಯ ಪಡೆಯಬಹುದು.

ಅರ್ಜಿದಾರರ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು. ಸರ್ಕಾರವು ಈ ಯೋಜನೆಯಲ್ಲಿ 2 ಕೋಟಿಗಿಂತ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡಬೇಕು ಎಂದು ಯೋಜನೆಯನ್ನು ಹಾಕಿಕೊಂಡಿದೆ. ಈ ಯೋಜನೆಗಾಗಿ ರಾಷ್ಟ್ರೀಯ ನಗರಾಭಿವೃದ್ಧಿ ಫಂಡ್ ನಲ್ಲಿ 60,000 ಕೋಟಿ ರೂಪಾಯಿಗಳನ್ನು ಮೀಸಲಾಗಿ ಇಡಲಾಗಿದೆ. ಹಳ್ಳಿಗಳಲ್ಲಿ ಮನೆ ನಿರ್ಮಿಸುವುದಕ್ಕೆ 1.20 ಲಕ್ಷ ರೂಪಾಯಿಗಳನ್ನು ಕೊಡಲಾಗುತ್ತಿದೆ, ನಗರ ಪ್ರದೇಶಗಳಲ್ಲಿ ಮನೆಯನ್ನು ನಿರ್ಮಾಣ ಮಾಡುವುದಕ್ಕೆ ₹2.5 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.

ಈ ಯೋಜನೆಗೆ ಅಪ್ಲೈ ಮಾಡುವುದಕ್ಕೆ ನೀವು ಮೊದಲಿಗೆ
https://pmaymis.gov.in/ ಈ ಲಿಂಕ್ ಗೆ ಭೇಟಿ ನೀಡಬೇಕು. ಈ ಲಿಂಕ್ ಓಪನ್ ಮಾಡಿ, ಫಲಾನುಭವಿಗಳ ಲಿಸ್ಟ್ ಓಪನ್ ಮಾಡಿ, ಈಗ ನಿಮ್ಮ ಫೋನ್ ನಂಬರ್ ಹಾಕಿ, ನಿಮ್ಮ ಫೋನ್ ನಂಬರ್ ಗೆ ಓಟಿಪಿ ಬರುತ್ತದೆ. ನಂತರ ಪೇಜ್ ನಲ್ಲಿ ಓಟಿಪಿ ಹಾಕಬೇಕಾಗುತ್ತದೆ. ಇದನ್ನು ಚೆಕ್ ಮಾಡುವ ಮೂಲಕ, ಪಿಎಮ್ ಆವಾಸ್ ಯೋಜನೆಯ ಅಡಿಯಲ್ಲಿ ಯಾರಿಗೆಲ್ಲಾ ಮನೆ ಸಿಕ್ಕಿದೆ ಎಂದು ತಿಳಿದುಕೊಳ್ಳಬಹುದು.

ಒಂದು ವೇಳೆ ನಿಮಗೂ ಕೂಡ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಆಸೆ ಇದ್ದರೆ, ಈ ಯೋಜನೆಗೆ ಅರ್ಜಿ ಸಲ್ಲಿಸಿ, ವೆಬ್ಸೈಟ್ ನಲ್ಲಿಯೇ ನಿಮಗೆ ಪೂರ್ತಿ ಮಾಹಿತಿ ಸಿಗುತ್ತದೆ. ಅದನ್ನೆಲ್ಲ ನೋಡಿಕೊಂಡು ಅಪ್ಲೈ ಮಾಡಿ, ಈ ಯೋಜನೆಗೆ ಅರ್ಜಿ ಸಲ್ಲಿಸಿ ಬಳಿಕ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಬಹುದು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!