Cooking Oil Rate Down: ಈಗಿನ ಕಾಲದಲ್ಲಿ ಹಣದುಬ್ಬರದ ಕಾರಣ ದಿನನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಇದರಿಂದ ತೊಂದರೆ ಅನುಭವಿಸುತ್ತಿರುವುದು ಜನ ಸಾಮಾನ್ಯರು, ಅದರಲ್ಲೂ ಅಡುಗೆಗೆ ಬಳಸುವ ಎಣ್ಣೆಯ ಬೆಲೆಯಲ್ಲಿ ಏರಿಕೆ ಆಗಿದ್ದು ಜನರಿಗೆ ಹೆಚ್ಚಿನ ತೊಂದರೆಯನ್ನೇ ನೀಡಿತ್ತು ಏಕೆಂದರೆ ಅಡುಗೆ ಎಣ್ಣೆ (Cooking Oil) ದಿನನಿತ್ಯ ಪ್ರತಿ ಮನೆಯಲ್ಲಿ ಬಳಸುವ ವಸ್ತು. ಆದರೆ ಇದೀಗ ಸರ್ಕಾರವು ಅಡುಗೆ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡಲು ಕ್ರಮ ತೆಗೆದುಕೊಂಡಿದೆ.
ಇದಕ್ಕಾಗಿ ಆಮದು ಸುಂಕವನ್ನು ಕಡಿಮೆ ಮಾಡಿದೆ, ಆಮದು ಸುಂಕ ಕಡಿತ ಯೋಜನೆ 2024ರ ಮಾರ್ಚ್ ನಲ್ಲಿ ಕೊನೆಯಾಗಲಿದೆ. ಮತ್ತೆ ಬೆಲೆ ಏರಿಕೆ ಆಗಬಾರದು ಎನ್ನುವ ಕಾರಣಕ್ಕೆ ಇನ್ನು 1 ವರ್ಷಗಳ ಕಾಲ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಈ ಮೂಲಕ ಒಂದು ವರ್ಷಗಳ ಕಾಲ ಅಡುಗೆ ಎಣ್ಣೆಯ ಬೆಲೆಯಲ್ಲಿ ಅತಿಯಾದ ಏರಿಕೆ ಆಗುವುದಿಲ್ಲ. ಸದ್ಯಕ್ಕೆ ಸಿಕ್ಕಿರುವ ವರದಿಯ ಕಚ್ಚಾ ಪಾಮ್ ಆಯಿಲ್, ಕಚ್ಚಾ ಸೂರ್ಯಕಾಂತಿ ಎಣ್ಣೆ, ಕಚ್ಚಾ ಸೋಯಾಬೀನ್ ಇದಿಷ್ಟನ್ನು ಹೆಚ್ಚಿನ ಸುಂಕ ನೀಡದೆ ಆಮದು ಮಾಡಿಕೊಳ್ಳಬಹುದು.
ಇದೀಗ ಸಂಸ್ಕರಿಸಿರುವ ಸೋಯಾಬೀನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಈ ಎರಡಕ್ಕೂ ಇದ್ದ ಆಮದು ಸುಂಕ 17.5% ಇದನ್ನು ಈಗ 12.5% ಗೆ ಇಳಿಸಲಾಗಿದೆ. ಇದರ ಲಾಭ ಕಂಪನಿಯ ಜೊತೆಗೆ ಜನರಿಗೂ ಸಿಗಲಿದೆ. ಆಮದು ಮೊತ್ತ ಕಡಿಮೆ ಆದರೆ ದೇಶೀಯ ಮಾರುಕಟ್ಟೆಯಲ್ಲಿ ಅವುಗಳ ಬೆಲೆ ಕೂಡ ಕಡಿಮೆ ಆಗುತ್ತದೆ. ಪ್ರಸ್ತುತ ನಮ್ಮ ದೇಶ ಸಸ್ಯಜನ್ಯ ಎಣ್ಣೆ ಆಮದು ಮಾಡಿಕೊಳ್ಳುವಲ್ಲಿ ಮೊದಲ ಸ್ಥಾನದಲ್ಲಿದ್ದು, ಬಳಕೆ ಮಾಡುವ ವಿಚಾರದಲ್ಲಿ 2ನೇ ಸ್ಥಾನದಲ್ಲಿದೆ. ನಮ್ಮ ದೇಶದ ಅಗತ್ಯತೆಗೆ 60% ಅನ್ನು ಹೊರದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.