Nandini buffalo milk price: ಕರ್ನಾಟಕ ಮಿಲ್ಕ್ ಫೆಡೆರೇಷನ್ ಅಂದರೆ ಕೆಎಂಎಫ್ ಇದೀಗ ಹಾಲು ಮಾರುಕಟ್ಟೆಗೆ ಎಮ್ಮೆಯ ಹಾಲನ್ನು ಪರಿಚಯಿಸಿದೆ. ಶುಕ್ರವಾರದಿಂದ ಎಮ್ಮೆಯ ಹಾಲು (Nandini buffalo milk) ಮಾರುಕಟ್ಟೆಗೆ ಬಂದಿದೆ. ಜನರಲ್ಲಿ ಸಹ ಎಮ್ಮೆ ಹಾಲಿಗೆ ಭಾರಿ ಬೇಡಿಕೆ ಶುರುವಾಗಿದ್ದು, ಒಂದು ಲೀಟರ್ ಎಮ್ಮೆ ಹಾಲಿನ ಬೆಲೆ ಎಷ್ಟು ಗೊತ್ತಾ..
ಸಿಕ್ಕಿರುವ ಮಾಹಿತಿಯ ಪ್ರಕಾರ ಒಂದು ಲೀಟರ್ ಎಮ್ಮೆ ಹಾಲಿನ ಬೆಲೆ 60 ರೂಪಾಯಿ ಎಂದು ನಿಗದಿ ಮಾಡಲಾಗಿದೆ. ರಾಜ್ಯ ಹಾಲು ಒಕ್ಕೂಟಗಳು ಪ್ರತಿದಿನ ಹಾಲಿನ ಪೂರೈಕೆ ಮಾಡುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ರೈತರಿಂದ ಹಾಲು ಖರೀದಿ ಮಾಡಲಾಗುತ್ತಿದ್ದು, ಹಾಲು ಪೂರೈಕೆ ಮಾಡುತ್ತಿರುವ ರೈತರಿಗೆ 1 ಲೀಟರ್ ಗೆ ₹39.50 ರೂಪಾಯಿ ನೀಡಲಾಗುತ್ತಿದೆ. ಇದರಲ್ಲಿ 5 ರೂಪಾಯಿ ಪ್ರೋತ್ಸಾಹ ಧನ ಕೂಡ ಇದೆ ಎಂದು ಹೇಳಲಾಗುತ್ತಿದೆ.
ಕೆಎಂಎಫ್ ಇದಕ್ಕಿಂತ ಮೊದಲು ಕೂಡ ಎಮ್ಮೆ ಹಾಲನ್ನು ಮಾರುಕಟ್ಟೆಗೆ ತಂದಿತ್ತು, ಕೆಲ ವರ್ಷಗಳ ಹಿಂದೆಯೇ ನಂದಿನಿ ಎಮ್ಮೆ ಹಾಲನ್ನು ಮಾರುಕಟ್ಟೆಗೆ ತರಲಾಗಿತ್ತು, ಆದರೆ ಹಾಲಿನ ಪೂರೈಕೆ ಸರಿಯಾಗಿ ನಡೆಯದ ಕಾರಣ ಎಮ್ಮೆ ಹಾಲಿನ ಪೂರೈಕೆಯನ್ನು ನಿಲ್ಲಿಸಲಾಗಿತ್ತು. ಆ ವೇಳೆಯಲ್ಲಿ ಪ್ರತಿದಿನ 5000 ಲೀಟರ್ ಎಮ್ಮೆ ಹಾಲು ಮಾರಾಟ ಆಗುತ್ತಿತ್ತು.
ಈಗ ಮತ್ತೆ ಎಮ್ಮೆ ಹಾಲು ಮಾರಾಟ ಶುರುವಾಗಿದ್ದು, ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಕೂಡ ಎಮ್ಮೆ ಹಾಲಿನ ಮಾರಾಟ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ.