ಇದೀಗ ಸರ್ಕಾರವು ಟ್ರಾಫಿಕ್ ಪೊಲೀಸರಿಗೆ ಒಂದು ಹೊಸ ರೂಲ್ಸ್ ತಂದಿದೆ. ವಾಹನ ಸವಾರರು ರೂಲ್ಸ್ ಬ್ರೇಕ್ ಮಾಡಿದ್ದರು ಸಹ ಇನ್ನುಮುಂದೆ ಪೊಲೀಸರು ಅವರಿಂದ ದಂಡ ಪಡೆಯುವ ಹಾಗಿಲ್ಲ ಎಂದು ನಿಯಮವನ್ನು ಜಾರಿಗೆ ತರಲಾಗಿದೆ. ಇದು ಹೈಕೋರ್ಟ್ ನೀಡಿರುವ ಹೊಸ ನಿಯಮ ಆಗಿದೆ. ಇದು ಒಂದು ದೂರಿನ ಅನುಸಾರ ತೆಗೆದುಕೊಂಡಿರುವ ನಿರ್ಧಾರ ಆಗಿದೆ..
ಕೆ.ಆರ್.ಪೇಟೆ ತಾಲ್ಲೂಕಿನ ಸುಭಾಷ್ ನಗರದ ನಿವಾಸಿ ಕೆ.ಟಿ ನಾಗರಾಜು ಅವರು ಕೋರ್ಟ್ ಗೆ ಒಂದು ಅರ್ಜಿ ಸಲ್ಲಿಸಿದ್ದರು, ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ಕಟ್ಟಬೇಕು ಎಂದಾಗ, ದಂಡ ಪಾವತಿ ಮಾಡುವುದಿಲ್ಲ ಎಂದು ಹೇಳುವುದರ ಜೊತೆಗೆ ಕರ್ತವ್ಯದಲ್ಲಿರುವ ಅಧಿಕಾರಿಯ ಮೇಲೆ ಬಲ ಪ್ರಯೋಗ ಮಾಡಿರುವುದಾಗಿ ಈ ವ್ಯಕ್ತಿಯ ವಿರುದ್ಧ ದೂರು ನೀಡಲಾಗಿದ್ದು, ಇದನ್ನು ರದ್ದು ಮಾಡಬೇಕು ಎಂದು ಆತ ಅರ್ಜಿ ಸಲ್ಲಿಸಿದ್ದಾನೆ.
ಈ ವಿಚಾರವನ್ನು ನ್ಯಾಯಾಧೀಶರಾದ ಹೇಮಂತ್ ಚೆಂದನ್ ಗೌಡರ್ ಅವರು ಪರಿಶೀಲಿಸಿ ತೀರ್ಪು ನೀಡಿದ್ದಾರೆ. ಸಂಚಾರಿ ನಿಯಮಗಳ ಉಲ್ಲಂಘನೆ ಆದಾಗ, ಅಂಥ ಪ್ರಕರಣಗಳಲ್ಲಿ ಪೊಲೀಸರು ವಿಡಿಯೋ ಮಾಡಿಕೊಳ್ಳಬೇಕು. ಹಾಗೆಯೇ ಪೊಲೀಸರು ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘನೆ ಮಾಡಿದವರಿಂದ ದಂಡ ಪಡೆಯುವ ಹಾಗಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ..
ಹೈಕೋರ್ಟ್ ನ ನಿಯಮಗಳ ಅನುಸಾರ ದಂಡ ಹಾಕುವ ಮೊತ್ತವನ್ನು ಹೈಕೋರ್ಟ್ ಮಾತ್ರ ನಿರ್ಧರಿಸುತ್ತದೆ, ಪರಿಸ್ಥಿತಿ ಹೇಗೆ ಇದ್ದರು ಆರೋಪಿ ಇಂದ ದಂಡ ಸಂಗ್ರಹಿಸುವ ಅಧಿಕಾರಿಗಳಿಗೆ ಇರುವುದಿಲ್ಲ ಎನ್ನಲಾಗಿದೆ..ಸಂದರ್ಭದ ವಿಡಿಯೋ ಮಾಡಿಕೊಳ್ಳಬೇಕು, ಹಾಗೆಯೇ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವ ಸಂದರ್ಭ ಬಂದರೆ ಆ ವ್ಯಕ್ತಿಯನ್ನು ತಡೆಯಬೇಕು..
ಆ ತಪ್ಪು ನಡೆದ ಜಾಗಕ್ಕೆ ಹತ್ತಿರದ ಪೊಲೀಸ್ ಠಾಣೆಯಿಂದ ಪೊಲೀಸರನ್ನು ಕರೆಸಿ ಆರೋಪಿಯನ್ನು ಅವರಿಗೆ ಒಪ್ಪಿಸಬೇಕು ಈ ರೀತಿ ಮಾಡಿಲ್ಲ ಎಂದರೆ ಅಧಿಕಾರಿಗಳ ಮೇಲೆ ಬಲ ಪ್ರಯೋಗ, ಹಲ್ಲೆ ನಡೆದಿದೆ ಎನ್ನುವುದಕ್ಕೆ ಸಾಕ್ಷಿ ಇರೋದಿಲ್ಲ ಎಂದು ನಿಯಮಗಳ ಪ್ರಕಾರ ತಿಳಿದುಬಂದಿದೆ.