Udyogini Govt Schemes: ತಮ್ಮದೇ ಸ್ವಂತ ಉದ್ಯಮ ಮಾಡಬೇಕು ಎಂದು ಆಸೆ ಇರುವ ಹೆಣ್ಣುಮಕ್ಕಳಿಗೆ, ಈಗಾಗಲೇ ಉದ್ಯಮ ಶುರು ಮಾಡಿರುವ ಮಹಿಳೆಯರಿಗೆ ಉತ್ತೇಜನ ನೀಡಲು, ಪ್ರೋತ್ಸಾಹ ನೀಡಲು ಸರ್ಕಾರವು ಸಾಲದ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಮಹಿಳೆಯರು ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯ ಪಡೆಯಬಹುದು. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (KSWDC) ಮಹಿಳೆಯರಿಗೆ ಈ ಯೋಜನೆಯನ್ನು ಜಾರಿಗೆ ತಂದಿದೆ..
ಈ ಯೋಜನೆಯಲ್ಲಿ ಎಸ್ಸಿ ಎಸ್ಟಿ ಹಾಗೂ ಬೇರೆ ವರ್ಗದ ಮಹಿಳೆಯರಿಗೆ ವಿವಿಧ ರೀತಿಯ ಸಹಾಯಧನ ಸಿಗಲಿದೆ. ಇದಕ್ಕಾಗಿ ಸಿಗುವ ಸಹಾಯಧನದ ಬಗ್ಗೆ ಹೇಳುವುದಾದರೆ, ಎಸ್ಸಿ ಎಸ್ಟಿ ಮಹಿಳೆಯರಿಗೆ ಆದಾಯದ ಮಿತಿ 2 ಲಕ್ಷ ರೂಪಾಯಿಗಳು, ಇಲ್ಲಿ ನಿಮಗೆ ಘಟಕದ ವೆಚ್ಚಕ್ಕೆ 1 ಲಕ್ಷ ಇಂದ 3 ಲಕ್ಷದವರೆಗು ಸಹಾಯ ಸಿಗುತ್ತದೆ. ಈ ಮೊತ್ತದಲ್ಲಿ 50% ಸಹಾಯಧನ ಆಗಿರುತ್ತದೆ. ಇನ್ನು ಓಬಿಸಿ ವರ್ಗದವರಿಗೆ ಆದಾಯದ ಮಿತಿ 1.50 ಲಕ್ಷಗಳು, ಘಟಕದ ವೆಚ್ಚವಾಗಿ 3 ಲಕ್ಷದವರೆಗು ಸಹಾಯ ನೀಡಲಾಗುತ್ತದೆ. ಇದರಲ್ಲಿ 30% ಸಹಾಯಧನ ಆಗಿರುತ್ತದೆ.
ಈ ಯೋಜನೆಯ ಹೆಸರು ಉದ್ಯೋಗಿನಿ ಯೋಜನೆ ಆಗಿದ್ದು, ಎಸ್ಸಿ ಎಸ್ಟಿ ಹಾಗೂ ಬೇರೆ ವರ್ಗಕ್ಕೆ ಸೇರಿದ ಮಹಿಳೆಯರ ವಾರ್ಷಿಕ ಆದಾಯ ₹1,50,000 ಲಕ್ಷಕ್ಕಿಂತ ಕಡಿಮೆ ಇರಬೇಕು. ಹಾಗೆಯೇ ಮಹಿಳೆಯರ ವಯೋಮಿತಿ 18 ರಿಂದ 55 ವರ್ಷಗಳ ಒಳಗೆ ಇರಬೇಕು. ಅರ್ಜಿ ಹಾಕುವ ಮಹಿಳೆಯರ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು.
ಮಹಿಳೆಯರಿಗೆ ಸಹಾಯ ಮಾಡಲು ಇರುವ ಮತ್ತೊಂದು ಯೋಜನೆ ಚೇತನಾ ಯೋಜನೆ ಆಗಿದೆ, ಈ ಯೋಜನೆಯಲ್ಲಿ ಮಹಿಳೆಯರಿಗೆ ಸಹಾಯ ಸಿಗಲಿದ್ದು, ಸುಮಾರು 30,000 ವರೆಗು ಸಹಾಯ ಪಡೆಯಬಹುದು. 18 ವರ್ಷ ಮೇಲ್ಪಟ್ಟ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಮತ್ತೊಂದು ಯೋಜನೆಯ ಹೆಸರು ಧನಶ್ರೀ ಯೋಜನೇ ಆಗಿದೆ, ಈ ಯೋಜನೆಯಲ್ಲಿ ಕೂಡ ಮಹಿಳೆಯರಿಗೆ ₹30,000 ವರೆಗು ಧನಸಹಾಯ ಸಿಗಲಿದ್ದು, 18 ರಿಂದ 60 ವರ್ಷದವರೆಗು ಮಹಿಳೆಯರು ಈ ಯೋಜನೆಯ ಸಹಾಯ ಪಡೆಯಬಹುದು.
ಮತ್ತೊಂದು ಯೋಜನೆಯ ಹೆಸರು ಪುನರ್ವಸತಿ ಯೋಜನೆ ಆಗಿದೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ಆಗಿದ್ದು, ಆದಾಯ ಬರುವಂಥ ಯೋಜನೆ ಇದಾಗಿದ್ದು, 30,000 ರೂಪಾಯಿಗಳ ವರೆಗು ಪ್ರೋತ್ಸಾಹ ಧನ ಕೊಡಲಾಗುತ್ತದೆ. ನರ್ಸರಿ ತೆರೆಯಲು, ಮಸಾಲೆ ಮಾಡಲು, ಬೆಡ್ ಶೀಟ್ ಮತ್ತು ಹೊದಿಕೆಗಳನ್ನು ತಯಾರಿಸಲು, ಪಡಿತರ ಅಂಗಡಿ ತೆರೆಯಲು, ಬಳೆಗಳನ್ನು ಮಾಡಲು, ಕಾಫಿ ಅಥವಾ ಚಹಾ ಮಾಡಲು, ಉಡುಗೊರೆ ಅಂಗಡಿಗಾಗಿ, ಬ್ಯೂಟಿ ಪಾರ್ಲರ್ ತೆರೆಯಲು, ಫೋಟೋ ಸ್ಟುಡಿಯೋ, ಗಿರವಿ ಅಂಗಡಿ, ಪುಸ್ತಕ ಬೈಂಡಿಂಗ್..
ಪ್ಲಾಸ್ಟಿಕ್ ವಸ್ತುಗಳ ಅಂಗಡಿ, ಐಸ್ ಕ್ರೀಮ್ ಅಂಗಡಿ ತೆರೆಯಲು
ಮಡಿಕೆ ಅಂಗಡಿ, ಡೈರಿ ಅಥವಾ ಕೋಳಿ ಸಾಕಣೆ, ಗೃಹೋಪಯೋಗಿ ವಸ್ತುಗಳ ಅಂಗಡಿಗೆ, ಟೇಲರ್ ಅಂಗಡಿ , ಕಬ್ಬಿನ ವ್ಯಾಪಾರಿ, ಹತ್ತಿ ದಾರವನ್ನು ತಯಾರಿಸಲು, ಹೂಗಳು ಅಂಗಡಿಗೆ, ಕೇಟರಿಂಗ್ ಬಿಸಿನೆಸ್ ಮಾಡೋದು, ಸಾಬೂನು ತಯಾರಿಸುವ ವ್ಯಾಪಾರ, ಆಹಾರ ಮತ್ತು ಎಣ್ಣೆ ಅಂಗಡಿ ವ್ಯಾಪಾರ, ಚಹಾ ಟ್ಯಾಪ್ ತೆರೆಯಲು,
ಧೂಪದ್ರವ್ಯವನ್ನು ತಯಾರಿಸಲು, ಕರಕುಶಲ ವ್ಯಾಪಾರ, ತೆಂಗಿನಕಾಯಿ ವ್ಯಾಪಾರ, ಪ್ರಯಾಣ ಸಂಸ್ಥೆ, ಬೇಕರಿ ತೆರೆಯಲು, ಸಿಹಿ ಅಂಗಡಿ, ಪ್ರಯಾಣ ಸಂಸ್ಥೆ, ನೇಯ್ಗೆ ರೇಷ್ಮೆ,..
ಚಪ್ಪಲಿ ಮಾಡುವ ವ್ಯಾಪಾರಕ್ಕಾಗಿ, STD ಬೂತ್ ತೆರೆಯಲು,
ಮೇಣದ ಬಣ್ಣವನ್ನು ಮಾಡಲು, ಹಳೆಯ ಪೇಪರ್ ಮಾರ್ಟ್ ಸಂಸ್ಥೆಯನ್ನು ತೆರೆಯಲು, ವೈದ್ಯಕೀಯ ಪ್ರಯೋಗಾಲಯಕ್ಕಾಗಿ, ಸ್ಟೇಷನರಿ ಅಂಗಡಿ ತೆರೆಯಲು, ಪಾಪಡ್ ವ್ಯಾಪಾರ, ತರಕಾರಿ ಮತ್ತು ಹಣ್ಣಿನ ಅಂಗಡಿ ತೆರೆಯಲು, ಕಂಪ್ಯೂಟರ್ ಕಲಿಕೆ ಕೇಂದ್ರ, ಕ್ಯಾಂಟೀನ್ ಅಥವಾ ಢಾಬಾ ತೆರೆಯಲು, ನ್ಯೂಸ್ ಪೇಪರ್, ಮ್ಯಾಗಜೀನ್ ಅಂಗಡಿ ತೆರೆಯಲು, ಪಾನ್ ಮತ್ತು ಸಿಗರೇಟ್, ಕ್ಲಿನಿಕ್ ತೆರೆಯಲು, ಹಾಲಿನ ಡೈರಿ ತೆರೆಯಲು, ಟ್ಯೂಟೋರಿಯಲ್ ವ್ಯವಹಾರ, ಮಟನ್ ಮತ್ತು ಚಿಕನ್ ಅಂಗಡಿ ತೆರೆಯಲು, ಹಾಸಿಗೆಗಳ ವ್ಯಾಪಾರ, ಶಕ್ತಿ ಆಹಾರ ವ್ಯಾಪಾರ, ಡ್ರೈ ಕ್ಲೀನಿಂಗ್, ಚಾಪೆ ನೇಯುವ ವ್ಯಾಪಾರ, ಗ್ರಂಥಾಲಯವನ್ನು ತೆರೆಯಲು..
ಇದಿಷ್ಟು ಉದ್ಯಮ ಶುರು ಮಾಡಲು ಸಾಲ ಸಿಗುತ್ತದೆ. ಇದಿಷ್ಟು ಯೋಜನೆಗಳಿಗೆ ಅರ್ಜಿ ಹಾಕಲು ಬೇಕಾಗಿರುವ ದಾಖಲೆಗಳು ಹೀಗಿವೆ, ಆಧಾರ್ ಕಾರ್ಡ್, ಬರ್ತ್ ಸರ್ಟಿಫಿಕೇಟ್, 2 ಪಾಸ್ ಪೋರ್ಟ್ ಸೈಜ್ ಫೋಟೋ, ಬಿಪಿಎಲ್ ರೇಶನ್ ಕಾರ್ಡ್, ಇನ್ಕಮ್ ಸರ್ಟಿಫಿಕೇಟ್, ಕ್ಯಾಸ್ಟ್ ಸರ್ಟಿಫಿಕೇಟ್, ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್. ಇದಿಷ್ಟು ಬೇಕು. ಈ ಯೋಜನೆಯ ಸಹಾಯ ಪಡೆಯಲು ಆಸಕ್ತಿ ಇರುವವರು ಬೇಕಾಗಿರುವ ದಾಖಲೆಗಳ ಜೊತೆಗೆ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅಥವಾ ಸೈಬರ್ ಸೆಂಟರ್ ಗಳಿಗೆ ಹೋಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 22 ಕೊನೆಯ ದಿನಾಂಕ ಆಗಿದ್ದು, ಈ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿ ಪಡೆಯಲು ಈ ಅಡ್ರೆಸ್ ಗೆ ಭೇಟಿ ನೀಡಬಹುದು. 6ನೇ ಮಹಡಿ. ಜಯನಗರ ವಾಣಿಜ್ಯ ಸಂಕೀರ್ಣ. 4ನೇ ಬ್ಲಾಕ್, ಜಯನಗರ, ಬೆಂಗಳೂರು-560011