Petrol Diesel price: ನಮ್ಮ ದೇಶದಲ್ಲಿ ಈಗ ಮನೆಗೊಂದು ವಾಹನ ಎನ್ನುವ ಹಾಗೆ ಆಗಿದೆ. ಎಲ್ಲರೂ ಕೂಡ ಓಡಾಡುವುದಕ್ಕೆ ಮನೆಯಲ್ಲಿ ಬೈಕ್ ಅಥವಾ ಕಾರ್ ಇಟ್ಟುಕೊಂಡಿರುತ್ತಾರೆ. ಹಾಗಾಗಿ ಪೆಟ್ರೋಲ್ ಮತ್ತು ಡೀಸೆಲ್ (Petrol Diesel ) ಬಳಕೆ ಕೂಡ ಜಾಸ್ತಿಯೇ. ಆದರೆ ಕಳೆದ ಒಂದು ವರ್ಷದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಆಗುತ್ತಲೇ ಬಂದಿದೆ. ಇದರಿಂದ ಸಾಮಾನ್ಯ ಜನರು ಕಷ್ಟಪಡುವ ಹಾಗೆ ಆಗಿದೆ.
ದೇಶದಲ್ಲಿ ಹಣದುಬ್ಬರದ ಕಾರಣ, ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಎಲ್ಲವೂ ಕೂಡ ಜಾಸ್ತಿ ಆಗಿದೆ. ಪೆಟ್ರೋಲ್ ಡೀಸೆಲ್ ಬೆಲೆ ಯಾವಾಗ ಕಡಿಮೆ ಆಗುತ್ತದೆ ಎಂದು ಜನರು ಕೂಡ ಕಾಯುತ್ತಿದ್ದರು, ಅವರಿಗಾಗಿ ಈಗ ಒಂದು ಸಿಹಿ ಸುದ್ದಿ ಕೇಳಿಬರುತ್ತಿದೆ. ಶೀಘ್ರದಲ್ಲೇ ಬೆಲೆ ಕಡಿಮೆ ಆಗುತ್ತದೆ ಎಂದು ತಿಳಿದುಬಂದಿದೆ.
Petrol Diesel price
ವರದಿಗಳ ಪ್ರಕಾರ ತಿಳಿದುಬಂದಿರುವುದು ಏನು ಎಂದರೆ, 2022ರ ಶುರುವಿನಲ್ಲಿ ಪೆಟ್ರೋಲ್ ಬೆಲೆ 17 ರೂಪಾಯಿ, ಡೀಸೆಲ್ ಬೆಲೆ 35 ರೂಪಾಯಿಯ ನಷ್ಟದಲ್ಲಿತ್ತು, ಆದರೆ ಈಗ OMC ಗಳು ಒಂದು ಲೀಟರ್ ಪೆಟ್ರೋಲ್ ಗೆ 8 ರಿಂದ 10 ರೂಪಾಯಿ, 1 ಲೀಟರ್ ಡೀಸೆಲ್ ಗೆ 3 ರಿಂದ 4 ರೂಪಾಯಿ ಲಾಭ ಗಳಿಸುತ್ತಿವೆ. ಹಾಗಾಗಿ ಇವುಗಳ ಬೆಲೆಯನ್ನು ಕಡಿಮೆ ಮಾಡುವುದಕ್ಕಾಗಿ OMC ಜೊತೆಗೆ ಚರ್ಚೆ ನಡೆಸಲಾಗುತ್ತಿದೆ.
ತೈಲ ಇಲಾಖೆ ಲಾಭ ಸಿಗುತ್ತಿರುವ ಕಾರಣ, ಜನರಿಗೆ ಇದರಿಂದ ಪರಿಹಾರ ಕೊಡಬೇಕು ಎಂದು ನಿರ್ಧಾರ ಮಾಡಲಾಗಿದೆ, ಎಲೆಕ್ಷನ್ ಗಿಂತ ಮೊದಲು ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಆಗುವ ಸಾಧ್ಯತೆ ಜಾಸ್ತಿ ಇದೆ. ಈಗ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಆಗಿದ್ದು, ಹಿಂದಿನ ತ್ರೈಮಾಸಿಕದಲ್ಲಿ IOC, HPCL ಹಾಗೂ BPCL ಮೂರು OMC ಗಳು ₹28,000 ಕೋಟಿಗಳಷ್ಟು ಆದಾಯ ಗಳಿಸಿದೆ ಎಂದು ತಿಳಿಸಿದೆ.
ನವೆಂಬರ್ ತಿಂಗಳಿನಲ್ಲಿ ನೈಜೀರಿಯಾ, ಇರಾಕ್, ಅರೇಬಿಯಾ ಇಂದ ಆಮದು ಮಾಡಿಕೊಳ್ಳುತ್ತಿದ್ದ ತೈಲ ನಷ್ಟವಾಗತೊಡಗಿತ್ತು, ಆದರೆ ಈಗ ಚೇತರಿಕೆ ಕಂಡಿದೆ. ಈ ಎಲ್ಲಾ ಕಾರಣಗಳಿಂದ ನಮ್ಮ ದೇಶದಲ್ಲಿ ಕೆಲವೇ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಆಗಬಹುದು ಎಂದು ಹೇಳಲಾಗುತ್ತಿದೆ.