Grilahakshmi Yojana: ಗೃಹಲಕ್ಷ್ಮಿ ಯೋಜನೆಯನ್ನು ನಮ್ಮ ರಾಜ್ಯದಲ್ಲಿ ಮದುವೆಯಾಗಿ ಮನೆ ನಡೆಸಿಕೊಂಡು ಹೋಗುತ್ತಿರುವ ಎಲ್ಲಾ ಗೃಹಲಕ್ಷ್ಮಿಯರಿಗಾಗಿ ಜಾರಿಗೆ ತರಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಆಗಲಿ ಎನ್ನುವ ಉದ್ದೇಶ ಇದಾಗಿದ್ದು, ಈಗಾಗಲೇ ಸುಮಾರು 1.15ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಎಲ್ಲಾ ಮಹಿಳೆಯರಿಗೆ ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ.
3ನೇ ಕಂತಿನ ಹಣ ಕೂಡ ಮಹಿಳೆಯರನ್ನು ತಲುಪಿದೆ, ಆದರೆ ಸುಮಾರು 5 ರಿಂದ 7 ಲಕ್ಷ ಮಹಿಳೆಯರಿಗೆ ಇನ್ನು ಮೊದಲ ಕಂತಿನ ಹಣವೇ ಬಂದಿಲ್ಲ ಎಂದು ಚಿಂತೆಗೆ ಒಳಗಾಗಿದ್ದಾರೆ. ಅಂಥವರಿಗೆ ಸರ್ಕಾರವೇ ಭರವಸೆ ನೀಡಿದ್ದು, ಶೀಘ್ರದಲ್ಲೇ ಎರಡನೇ ಕಂತಿನ ಹಣ ಎಲ್ಲಾ ಮಹಿಳೆಯರನ್ನು ತಲುಪುತ್ತದೆ ಎಂದು ತಿಳಿಸಿದೆ. ಹಲವು ಮಹಿಳೆಯರಿಗೆ ಇನ್ನು ಮೊದಲ ಕಂತಿನ ಹಣವೇ ಜಮೆಯಾಗಿಲ್ಲ, ಅವರೆಲ್ಲರು ತಮಗೆ ಇನ್ನು ಹಣ ಬಂದಿಲ್ಲ ಎಂದು ಆತಂಕಕ್ಕೆ ಒಳಗಾಗಿದ್ದಾರೆ.
Grilahakshmi Yojana
ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಬರದೆ ಇರುವುದಕ್ಕೆ ತಾಂತ್ರಿಕ ದೋಷ ಕಾರಣ ಇರಬಹುದು. ಅಥವಾ ಬ್ಯಾಂಕ್ ಅಕೌಂಟ್ ಮಾಹಿತಿ ತಪ್ಪಾಗಿರುವುದು, ekyc ಮಾಡಿಸಿಲ್ಲದೆ ಇರುವುದು, ಆಧಾರ್ ಸೀಡಿಂಗ್ ಆಗಿಲ್ಲದೆ ಇರುವುದು ಹೀಗೆ ಹಲವು ಕಾರಣಗಳಿವೆ. ಆದರೆ ಇನ್ನುಮುಂದೆ ಆ ಸಮಸ್ಯೆಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ತಲುಪದೇ ಇರುವ ಹಾಗೆ ಆಗುವುದು ಬೇಡ ಎಂದು ಸರ್ಕಾರ ತೀರ್ಮಾನ ಮಾಡಿದ್ದು, ಹೊಸದೊಂದು ಕ್ರಮವನ್ನು ಜಾರಿಗೆ ತಂದಿದೆ.
ಇದೀಗ ಗೃಹಲಕ್ಷ್ಮಿ ಅದಾಲತ್ ಶುರು ಮಾಡಲಾಗುತ್ತದೆ, ಇದರಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೆಲಸ ಮಾಡಲಿದ್ದು, ತಮ್ಮ ವ್ಯಾಪ್ತಿಗೆ ಬರುವ ಊರುಗಳಲ್ಲಿ ಯಾವೆಲ್ಲಾ ಮಹಿಳೆಯರಿಗೆ ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಸಿಕ್ಕಿಲ್ಲ ಎಂದು ಲಿಸ್ಟ್ ಮಾಡಿ ಅದನ್ನು ಸರ್ಕಾರಕ್ಕೆ ನೀಡಬೇಕು. ಸರ್ಕಾರ ಆ ಮಹಿಳೆಯರ ಸಮಸ್ಯೆ ಪರಿಹರಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸುತ್ತದೆ. ಹಾಗೆಯೇ ಮಹಿಳೆಯರು ಕೂಡ ತಮಗೆ ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ ಎಂದರೆ ದೂರು ನೀಡಬಹುದು.
ಗೃಹಲಕ್ಷ್ಮಿ ಅದಾಲತ್ ಗೆ ಮಹಿಳೆಯರು ದೂರು ಸಲ್ಲಿಸಬಹುದು. ಆಗ ಅಧಿಕಾರಿಗಳು ನಿಮ್ಮ ಮನೆಗೆ ಬಂದು, ನಿಮ್ಮ ಸಮಸ್ಯೆಗಳನ್ನು ಕೇಳಿ, ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡುತ್ತಾರೆ. ಈ ತಿಂಗಳು ಎಲ್ಲಾ ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸಿ, ಅಕೌಂಟ್ ಗೆ ಹಣ ಜಮೆ ಆಗುವ ಹಾಗೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಖುದ್ದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸುತ್ತಾರೆ.