Ashraya mane Schemes: ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಸಾಕಷ್ಟು ಜನರಿಗೆ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಆಸೆ ಇದೆ. ಆದರೆ ಎಲ್ಲರಿಗೂ ಕೂಡ ಸ್ವಂತ ಮನೆ ಮಾಡಿಕೊಳ್ಳುವುದಕ್ಕೆ ಆರ್ಥಿಕ ಸಾಮರ್ಥ್ಯತೆ ಇರುವುದಿಲ್ಲ. ಒಂದು ವೇಳೆ ಗುಡಿಸಲುಗಳಲ್ಲಿ ಇರುವವರು, ಹಳೆಯ ಮನೆಗಳಲ್ಲಿ ಇರುವವರು ತಮ್ಮದೇ ಸ್ವಂತ ಮನೆ ಮಾಡಿಕೊಳ್ಳುವುದಕ್ಕೆ ಈಗ ಸರ್ಕಾರವೇ ಸಹಾಯ ಮಾಡುತ್ತಿದೆ. ಸರ್ಕಾರವೇ ಮನೆ ಮಾಡಿಕೊಳ್ಳಲು ಸಹಾಯ ಮಾಡಲಿದೆ.
ಹಳೆಯ ಮನೆ ಮತ್ತು ಗುಡಿಸಲುಗಳಲ್ಲಿ ವಾಸ ಮಾಡುತ್ತಿರುವವರು ತಮ್ಮ ಜಾಗದಲ್ಲಿ ಮನೆ ಮಾಡಿಕೊಳ್ಳಲು ಈಗ ಸರ್ಕಾರ ಸಹಾಯ ಮಾಡುತ್ತಿದೆ. ಮನೆ ಮಾಡಿಕೊಳ್ಳುವ ಆಸೆ ಇದ್ದು, ಹಣಕಾಸಿನ ವಿಷಯದಲ್ಲಿ ಕಷ್ಟದಲ್ಲಿರುವ ಜನರಿಗಾಗಿ ಸರ್ಕಾರ ತಂದಿರುವುದು ಬಸವ ವಸತಿ ಯೋಜನೆ ಆಗಿದೆ. ಈ ಯೋಜನೆಯನ್ನು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಅಡಿಯಲ್ಲಿ ಜಾರಿಗೆ ತರಲಾಗಿದೆ.
ಕಷ್ಟದಲ್ಲಿರುವ ಜನರು ಈ ಯೋಜನೆಯ ಮೂಲಕ ತಮ್ಮದೇ ಸ್ವಂತ ಮನೆ ನಿರ್ಮಾಣ ಮಾಡಬಹುದು. ಜನರಿಗೆ ಸಹಾಯ ಮಾಡಲು ಸರ್ಕಾರವು 2500 ಕೋಟಿ ರೂಪಾಯಿಗಳನ್ನು ಮೀಸಲು ಇಟ್ಟಿದೆ ಸರ್ಕಾರ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆ ಇದ್ದು ಅವುಗಳ ಬಗ್ಗೆ ತಿಳಿಯೋಣ.. ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂದು ನೋಡುವುದಾದರೆ.
*ಅರ್ಜಿ ಹಾಕುವವರು ಕರ್ನಾಟಕದ ನಿವಾಸಿಯೇ ಆಗಿರಬೇಕು
*ಇವರ ವಾರ್ಷಿಕ ಆದಾಯ 32,000 ರೂಪಾಯಿಯ ಒಳಗೆ ಇರಬೇಕು
*ಸ್ವಂತ ಮನೆ ಇರುವವರು ಅಥವಾ ಬೇರೆ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿರುವವರು ಈ ಯೋಜನೆಯ ಸೌಲಭ್ಯ ಪಡೆಯಲು ಆಗುವುದಿಲ್ಲ.
*ಬಡತನದ ರೇಖೆಗಿಂತ ಕೆಳಗೆ ಇರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯ ಆಗುವುದಿಲ್ಲ..
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಯಾವುವು ಎಂದರೆ..
ಆಧಾರ್ ಕಾರ್ಡ್
ಇನ್ಕಮ್ ಸರ್ಟಿಫಿಕೇಟ್
ಕ್ಯಾಸ್ಟ್ ಸರ್ಟಿಫಿಕೇಟ್
ನಿಮ್ಮ ಜಾಗದ ಬಗ್ಗೆ ದಾಖಲೆಗಳು
ಬ್ಯಾಂಕ್ ಅಕೌಂಟ್ ಡೀಟೇಲ್ಸ್
ಪಾಸ್ ಪೋರ್ಟ್ ಸೈಜ್ ಫೋಟೋ
ಈ ಯೋಜನೆಗೆ ನೀವು ಅರ್ಜಿ ಸಲ್ಲಿಸುವುದಕ್ಕೆ ಮೊದಲು ನೀವು
https://ashraya.karnataka.gov.in/index.aspx ಈ ಲಿಂಕ್ ಗೆ ಭೇಟಿ ನೀಡಬೇಕು. ಇದರ ಹೋಮ್ ಪೇಜ್ ನಲ್ಲಿ, ಆನ್ಲೈನ್ ಅಪ್ಲೈ ಮಾಡಿ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ಇಲ್ಲಿ ನೀವು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೈ ಮಾಡಬೇಕಾಗುತ್ತದೆ. ಹಾಗೇಯೇ ಅಪ್ಲಿಕೇಶನ್ ನಲ್ಲಿ ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ.
ಈ ಯೋಜನೆಗೆ ಅರ್ಜಿ ಸಲ್ಲಿಸಿ ಆಯ್ಕೆ ಆಗುವವರಿಗೆ, 85% ಅಷ್ಟು ಹಣವನ್ನು ಕಚ್ಚಾ ವಸ್ತುಗಳನ್ನು ಪಡೆಯಲು ಅಂದರೆ ಸುಮಾರು 1.5 ಲಕ್ಷದಷ್ಟು ಹಣವನ್ನು ಸರ್ಕಾರ ನೀಡುತ್ತದೆ. ಅರ್ಜಿ ಹಾಕಿದ ಬಳಿಕ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಂದು ನಿಮ್ಮ ಜಾಗವನ್ನು ಪರಿಶೀಲನೆ ಮಾಡುತ್ತಾರೆ. ಎಲ್ಲವೂ ಸರಿ ಇದ್ದರೆ ನಿಮಗೆ ಈ ಯೋಜನೆಯಲ್ಲಿ ಮನೆ ಕಟ್ಟಿಸಿಕೊಳ್ಳುವುದಕ್ಕೆ ಸರ್ಕಾರ ಸಹಾಯ ಮಾಡುತ್ತದೆ. ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಅನ್ನು https://ashraya.karnataka.gov.in/index.aspx ಈ ಲಿಂಕ್ ಮೂಲಕ ಚೆಕ್ ಮಾಡಬಹುದು.