Karnataka Bank Recruitment 2023: ನಮ್ಮ ರಾಜ್ಯದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಕರ್ನಾಟಕ ಬ್ಯಾಂಕ್ ನಲ್ಲಿ ಖಾಲಿ ಇರುಗ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. ಆಸಕ್ತಿ ಮತ್ತು ಅರ್ಹತೆ ಇರುವವರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಕೆಲಸಕ್ಕೆ ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ, ವೇತನ, ಅರ್ಜಿ ಸಲ್ಲಿಕೆ ವಿಧಾನ ಇದೆಲ್ಲವನ್ನು ತಿಳಿಸಿಕೊಡುತ್ತೇವೆ ನೋಡಿ..
ನೇಮಕಾತಿ ಮಾಡಿಕೊಳ್ಳುತ್ತಿರುವ ಸಂಸ್ಥೆ ಕರ್ನಾಟಕ ಬ್ಯಾಂಕ್. ಈ ಕೆಲಸಕ್ಕೆ ಸಿಗಬಹುದಾದ ವೇತನ ಶ್ರೇಣಿ ₹63,000 ರೂಪಾಯಿಗಳು. ಕೆಲಸ ಖಾಲಿ ಇರುವ ಸ್ಥಳ ಮಂಗಳೂರು. ಈ ಕೆಲಸಕ್ಕೆ ಬೇಕಿರುವ ವಿದ್ಯಾರ್ಹತೆ ಏನು ಎಂದರೆ, ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಅಥವಾ ಕಾಲೇಜಿನಿಂದ ಕಾನೂನು ವಿಚಾರದಲ್ಲಿ ಮಾಸ್ಟರ್ಸ್ ಮುಗಿಸಿರಬೇಕು.
ಆಫೀಸ್ ಲಾ ಕೆಲಸಕ್ಕೆ ಇರುವ ವೇತನ ಶ್ರೇಣಿ ಇದು ಗ್ರೇಡ್ 1 ಪೋಸ್ಟ್ ಆಗಿರುವುದರಿಂದ ₹63,000 ಸಂಬಳ ಇರುತ್ತದೆ. ಈ ಕೆಲಸಕ್ಕೆ ವಯೋಮಿತಿಯನ್ನು ನಿಗದಿ ಮಾಡಲಾಗಿದ್ದು, ಅಭ್ಯರ್ಥಿಯ ವವಸ್ಸು 30 ವರ್ಷ ಮೀರಿರಬಾರದು ಎಂದು ತಿಳಿಸಲಾಗಿದೆ. ಈ ಕೆಲಸಕ್ಕೆ ಅಪ್ಲೈ ಮಾಡಲು ಕಟ್ಟಬೇಕಿರುವ ಅರ್ಜಿ ಶುಲ್ಕ 600 ರೂಪಾಯಿಯ ಜೊತೆಗೆ GST ಇರುತ್ತದೆ.
ಅರ್ಜಿ ಸಲ್ಲಿಕೆ ಶುರು ಆಗಿರುವ ದಿನಾಂಕ 28/11/2023, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/12/2023. https://karnatakabank.online-ap1.com/ ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.