Data Entry Operator jobs: ನಮ್ಮ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಪಂಚಾಯತ್ ರಾಜ್ ಇಂದ ಆಕ್ಟೊಬರ್ 21ರಂದು ಅಧಿಕೃತವಾಗಿಯೇ ಆದೇಶವನ್ನು ತಿಳಿಸಿದೆ. ಆದೇಶದ ಪ್ರಕಾರ ಡೇಟಾ ಆಪರೇಟರ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ ಪ್ರತಿ ಜಿಲ್ಲೆಯನ್ನು ಜೇಷ್ಠತಾ ಘಟಕ ಎಂದು ತೆಗೆದುಕೊಳ್ಳಲಾಗುತ್ತದೆ. ಇದನ್ನು ಜಿಲ್ಲಾ ಮಟ್ಟದಲ್ಲಿ ತೆಗೆದುಕೊಂಡು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದ ಸಮಿತಿಯಲ್ಲಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಕೆಲಸಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳ ವೇತನವನ್ನು ಬಾಪೂಜಿ ಸೇವಾ ಕೇಂದ್ರದಲ್ಲಿ ಆಗುವ ಹಣದ ಸಂಗ್ರಹಣೆ ಇಂದ ನೀಡಲಾಗುತ್ತದೆ. ಡೇಟಾ ಎಂಟ್ರಿ ಆಪರೇಟರ್ ಗಳಿಗೆ ₹16,738 ರೂಪಾಯಿಗಳ ತಿಂಗಳ ವೇತನ ನಿಗದಿ ಆಗಿರುತ್ತದೆ. ಇನ್ನು ವಿದ್ಯಾರ್ಹತೆ ಬಗ್ಗೆ ಹೇಳುವುದಾದರೆ, ಅರ್ಜಿ ಹಾಕುವ ಅಭ್ಯರ್ಥಿಗಳು ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆ ಇಂದ ಪಿಯುಸಿ ಪಾಸ್ ಮಾಡಿರಬೇಕು. ಹಾಗೆಯೇ 3 ತಿಂಗಳ ಕಂಪ್ಯೂಟರ್ ಟ್ರೇನಿಂಗ್ ಆಗಿರಬೇಕು.
ಈ ಹುದ್ದೆಗೆ ಅಪ್ಲೈ ಮಾಡುವವರು 18 ವರ್ಷ ಮೇಲ್ಪಟ್ಟವರಾಗಿರಬೇಕು. ಆದರೆ ಗರಿಷ್ಠ ವಯೋಮಿತಿ ಬಗ್ಗೆ ಇನ್ನೂ ಮಾಹಿತಿ ತಿಳಿದುಬಂದಿಲ್ಲ. ಅಧಿಕೃತ ಸೂಚನೆಯ ನಂತರ ಗೊತ್ತಾಗಲಿದೆ. ಆಯ್ಕೆ ಪ್ರಕ್ರಿಯ ಬಗ್ಗೆ ಹೇಳುವುದಾದರೆ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ಸಮ್ಮುಖದಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದ ಹಾಗೆ ಅಭ್ಯರ್ಥಿಗಳು ಎಷ್ಟು ಮಾರ್ಕ್ ಗಳಿಸಿದ್ದಾರೋ ಅದರ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಡೇಟಾ ಎಂಟ್ರಿ ಆಪರೇಟರ್ ಹುದ್ದೆಯ ವಿಚಾರಕ್ಕೆ ಈಗ ಒಂದು ವಿಚಾರ ಕೇಳಿಬರುತ್ತಿದ್ದು, ಈಗಾಗಲೇ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಕೊಡಬೇಕು ಎಂದು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಪಂಚಾಯತ್ ಇಲಾಖೆ ಇಂದ ಅಧಿಕೃತವಾಗಿ ಪೂರ್ತಿ ಮಾಹಿತಿ ಗೊತ್ತಾಗಲಿದೆ.